ಉತ್ತಮ ಆಡಳಿತದ ಲಾಭ ಪ್ರತಿಯೊಬ್ಬರನ್ನೂ ತಲುಪಬೇಕು
ದೇಶ-ವಿದೇಶ

ಉತ್ತಮ ಆಡಳಿತದ ಲಾಭ ಪ್ರತಿಯೊಬ್ಬರನ್ನೂ ತಲುಪಬೇಕು

July 30, 2018

ನವದೆಹಲಿ: ಉತ್ತಮ ಆಡ ಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತಿಯೊಬ್ಬರನ್ನೂ ತಲುಪಬೇಕು. ಇದು ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರು ಭಾನುವಾರ ಹೇಳಿದ್ದಾರೆ.

46ನೇ ಆವೃತ್ತಿಯ ರೇಡಿಯೋ ಕಾರ್ಯ ಕ್ರಮದ ಮನ್ ಕಿ ಬಾತ್‍ನಲ್ಲಿ ಮಾತನಾಡಿರುವ ಮೋದಿಯವರು, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು `ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಘೋಷಣೆ ಯನ್ನು ಕೂಗಿದ್ದರು. ಜನರಲ್ಲಿ ಆತ್ಮವಿಶ್ವಾಸದ ಬೆಂಕಿಯನ್ನು ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಪ್ರತಿ ಯೊಬ್ಬರನ್ನೂ ತಲುಪಬೇಕು. ಇದು ನವ ಭಾರತಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಲಗಂಗಾಧರ್ ತಿಲಕ್ ಅವರಿಗೆ ನಮನಗಳನ್ನು ಸಲ್ಲಿಸಿದ್ದಾರೆ. ಇದ್ದಕ್ಕಿದ್ದಂತೆ ಸುರಿದ ಮಳೆ ಯಿಂದಾಗಿ ಥೈಲ್ಯಾಂಡ್ ಗುಹೆಯಲ್ಲಿ 12 ಬಾಲಕರು ಸಿಲುಕಿಕೊಂಡಿದ್ದರು. ಘಟನೆ ವೇಳೆ ಜನರು ತೋರಿದ ಜವಾಬ್ದಾರಿ ಅತ್ಯುತ್ತಮವಾಗಿತ್ತು. ಈ ಕಾರ್ಯಾಚರಣೆ ತಾಳ್ಮೆ, ಶೂರತೆ ಬಗ್ಗೆ ಸಾಕಷ್ಟು ಪಾಠ ಕಲಿಯುವಂತೆ ಮಾಡಿತ್ತು ಎಂದು ಹೇಳಿದ್ದಾರೆ.

ಹಿಂದಿಯ ಹೆಸರಾಂತ ಗೀತಕಾರ ಗೋಪಾಲ್ ದಾಸ್ ಅವರು ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಸಕ್ತ ಸಾಲಿನ ಜುಲೈ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗು ತ್ತದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಕಾಲೇಜುಗಳಿಗೆ ಸೇರ್ಪಡೆ ಗೊಳ್ಳಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿ ಗಳು ತಾಳ್ಮೆಯಿಂದ ಇರಬೇಕಿದ್ದು, ಜೀವ ನದ ಸಂತೋಷವನ್ನು ಆಹ್ಲಾದಿಸಬೇಕು. ಜೀವನ ಬದಲಾಯಿಸಲು ಯುವಕರು ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದಾರೆ. ರಾಯ್ ಬರೇಲಿಯ ಇಬ್ಬರು ಯುವಕರು ಅಮೆರಿಕಾದಲ್ಲಿದ್ದು, ಸ್ಮಾರ್ಟ್ ಗಾಂವ್ ಆ್ಯಪ್ ಸಿದ್ಧಪಡಿಸಿದ್ದಾರೆ. ಈ ಆ್ಯಪ್ ಗ್ರಾಮದಲ್ಲಿ ಡಿಜಿಟಲ್ ಕ್ರಾಂತಿಯನ್ನು ಸೃಷ್ಟಿಸಿದೆ. ಈ ಆ್ಯಪ್ ಮೂಲಕ ಗ್ರಾಮದ ವಿಚಾರವನ್ನೂ ತಿಳಿದುಕೊಳ್ಳಬಹುದಾಗಿದೆ ಎಂದು ಹೊಗಳಿದ್ದಾರೆ.

ಐಎಎಎಫ್ 20ರ ವಯೋಮಿತಿಯ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿ ಯನ್ ಶಿಪ್‍ನ ಮಹಿಳೆಯ ವಿಭಾಗದಲ್ಲಿ 400 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ವಿಶ್ವ ದಾಖಲೆ ಮಾಡಿರುವ ಹಿಮಾ ದಾಸ್ ಅವರನ್ನೂ ಮೋದಿಯವರು ಕೊಂಡಾಡಿದ್ದಾರೆ. ಬಳಿಕ ಗಣೇಶ ಉತ್ಸವ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂದೇಶವನ್ನು ನೀಡಿರುವ ಅವರು, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದ್ದಾರೆ. ಲೋಕ ಮಾನ್ಯ ತಿಲಕ್ ಅವರ ಶ್ರಮದ ಮೂಲಕ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಹಾದಿ ಯಲ್ಲಿಯೇ ಗಣೇಶ ಹಬ್ಬವನ್ನು ಆಚರಿಸ ಬೇಕೆಂದು ತಿಳಿಸಿದ್ದಾರೆ.

Translate »