ಮಹಾಮಾರಿ ರೇಬಿಸ್‍ನಿಂದ  ಸಾವು: ಕರ್ನಾಟಕಕ್ಕೆ 2ನೇ ಸ್ಥಾನ
ಮೈಸೂರು

ಮಹಾಮಾರಿ ರೇಬಿಸ್‍ನಿಂದ  ಸಾವು: ಕರ್ನಾಟಕಕ್ಕೆ 2ನೇ ಸ್ಥಾನ

July 30, 2018

ಬೆಂಗಳೂರು: ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ರಾಜ್ಯ ಸರ್ಕಾರ ಬೀದಿನಾಯಿಗಳಿಗೆ ಅತ್ಯುತ್ತಮ ರೇಬಿಸ್ ಲಸಿಕೆಗಳನ್ನು ಹಾಕುತ್ತಿದ್ದರೂ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಏರುತ್ತಲೇ ಇದೆ.

ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ 2018 ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರಲ್ಲಿರುವ ಮಾಹಿತಿಗಳ ಪ್ರಕಾರ ದೇಶದಲ್ಲಿಯೇ ರೇಬಿಸ್‍ಗೆ ತುತ್ತಾಗಿರುವವರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚು ಎಂಬುದಾಗಿ ತಿಳಿದುಬಂದಿದೆ. ರೇಬಿಸ್ ರೋಗಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಕಳೆದ ವರ್ಷ ಕರ್ನಾಟಕ ರಾಜ್ಯ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ರಾಜ್ಯದಲ್ಲಿ 97 ಮಂದಿಯಲ್ಲಿ ರೇಬಿಸ್ ಕಾಣಿಸಿಕೊಂಡಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ.

2016ರಲ್ಲಿ 22 ಪ್ರಕರಣಗಳು ದಾಖ ಲಾಗಿವೆ. 2012ನೇ ಸಮೀಕ್ಷೆಗಳ ಪ್ರಕಾರ ಸಿಲಿಕಾನ್ ಸಿಟಿಯಲ್ಲಿ 2.9 ಲಕ್ಷ ನಾಯಿಗಳಿದ್ದು, ಇದರಲ್ಲಿ 1.05 ಲಕ್ಷ ಸಾಕು ನಾಯಿಗಳಾಗಿದ್ದು, 1.85 ಲಕ್ಷ ಬೀದಿ ನಾಯಿಗಳಿವೆ ಎಂದು ತಿಳಿದುಬಂದಿದೆ. ಬಿಬಿಎಂಪಿ ಪ್ರಾಣಿ ಪಶು ಇಲಾಖೆಪ್ರತಿಕ್ರಿಯೆ ನೀಡಿ, ಕಳೆದ ವರ್ಷ 1.7 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿ ದ್ದವು. ಸಾಕು ನಾಯಿ ಹಾಗೂ ಬೀದಿನಾಯಿಗಳಿಗೆ ಕ್ರಿಮಿನಾಶಕ ಹಾಗೂ ಲಸಿಕೆಗಳನ್ನು ಹಾಕಲು ಬಿಬಿಎಂಪಿ ರೂ.3 ಕೋಟಿ ಖರ್ಚು ಮಾಡುತ್ತಿದೆ. 2016ರಲ್ಲಿ 16,979, 2017ರಲ್ಲಿ 12,297 ಪ್ರಸಕ್ತ ವರ್ಷ ಮೇ ಅಂತ್ಯದವರೆಗೂ 2,174 ನಾಯಿ ಕಡಿತ ಪ್ರಕರಣಗಳು ದಾಖ ಲಾಗಿವೆ. 2016ರ ವರ್ಷದಲ್ಲಿ 37,867 ನಾಯಿಗಳಿಗೆ ಲಸಿಕೆಗಳನ್ನು ಹಾಕಲಾಗಿದೆ. 2017ನೇ ಸಾಲಿನಲ್ಲಿ 35,266 ನಾಯಿಗಳಿಗೆ ಲಸಿಕೆಗಳನ್ನು ಹಾಕಲಾಗಿದೆ ಎಂದು ಹೇಳಿದೆ. ಬಿಬಿಎಂಪಿ ಪಶು ಪ್ರಾಣಿ ಇಲಾಖೆ ಜಂಟಿ ನಿರ್ದೇಶಕ ಜಿ.ಆನಂದ್ ಮಾತನಾಡಿ, ನಾಯಿಗಳಿಗೆ ಕ್ರಿಮಿನಾಶಕಗಳನ್ನು ನೀಡುವಲ್ಲಿ 4 ಎನ್’ಜಿಒ, ಇಬ್ಬರು ಪಶುವೈದ್ಯರು ಮತ್ತು ಒಂದು ಪ್ರತ್ಯೇಕ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

ಇದೇ ಸಂಸ್ಥೆ ಹಾಗೂ ಸಂಘಟನೆಗಳೇ ರೇಬಿಸ್ ಲಸಿಕೆಗಳನ್ನು ನೀಡುತ್ತಿವೆ. ಲಸಿಕೆಗಳು ಕೆಲ ಸಮಯದಲ್ಲಿ ಮಾತ್ರವೇ ಪರಿಣಾಮಕಾರಿಯಾಗಿರುವುದರಿಂದ ಪ್ರತೀ ವರ್ಷವೂ ಈ ಕಾರ್ಯವನ್ನು ಮಾಡಬೇಕಾಗುತ್ತದೆ. ಹೀಗಾಗಿ ಮತ್ತಷ್ಟು ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಬಳಿ ಮನವಿ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಬಿ.ಜಿ.ಪ್ರಕಾಶ್ ಕುಮಾರ್ ಮಾತನಾಡಿ, ಹಾವೇರಿ ಹಾಗೂ ಇತರೆ ಪ್ರದೇಶಗಳಲ್ಲಿ ಕಳೆದ ವರ್ಷ ರೇಬಿಸ್ ರೋಗಕ್ಕೆ ತುತ್ತಾಗಿರುವ ಸಂಖ್ಯೆ ಹೆಚ್ಚಾಗಿತ್ತು ಎಂದಿದ್ದಾರೆ.

Translate »