ಕೇಂದ್ರ ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ಭಾಗ್ಯ
ದೇಶ-ವಿದೇಶ

ಕೇಂದ್ರ ಸರ್ಕಾರಿ ನೌಕರರಿಗೆ ವಿದೇಶ ಪ್ರಯಾಣ ಭಾಗ್ಯ

July 30, 2018

ನವದೆಹಲಿ: ಕೇಂದ್ರ ಸರ್ಕಾರ ತನ್ನ ನೌಕರರನ್ನು ವಿದೇಶಕ್ಕೆ ಕಳುಹಿ ಸುವ ಚಿಂತನೆ ನಡೆಸುತ್ತಿದೆ. ಕೇಂದ್ರ ಸರ್ಕಾರಿ ನೌಕರರು ವಿದೇಶಕ್ಕೆ ತೆರಳಲು ಅಧಿಕೃತ ಅವಕಾಶ ನೀಡುವಂತಹ ಲೀವ್ ಟ್ರಾವೆಲ್ ಕನ್ಸೆಷನ್(ಎಲ್‍ಟಿಸಿ) ಪ್ರಸ್ತಾವನೆಯು ಸದ್ಯ ಸಿಬ್ಬಂದಿ ಇಲಾಖೆಯ ಮುಂದಿದೆ. ಸಿಬ್ಬಂದಿ ಇಲಾಖೆ ಇದೀಗ ಗೃಹ, ಪ್ರವಾಸೋದ್ಯಮ, ನಾಗರಿಕ ವಾಯು ಯಾನ ಸಚಿವಾಲಯದ ಪ್ರತಿಕ್ರಿಯೆಯನ್ನು ಕೇಳಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಏಷ್ಯಾದ ರಾಷ್ಟ್ರಗಳಾದ ತಜಕಿಸ್ತಾನ್, ಕಿರ್ಗಿಸ್ತಾನ್, ಉಝ್ಬೆಕಿಸ್ತಾನ್, ತುರ್ಕಿಮೆನಿ ಸ್ತಾನ್ ಮತ್ತು ಕಝಕಿಸ್ತಾನ್‍ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲು ವಿದೇಶಾಂಗ ಇಲಾಖೆಯು ಈಗಾಗಲೇ ಚರ್ಚೆ ನಡೆಸಿದೆ.

ಸದ್ಯ 48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Translate »