ಲೋಕಪಾಲ್ ನೇಮಕ ವಿಳಂಬ: ಅ.2ರಿಂದ  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
ದೇಶ-ವಿದೇಶ

ಲೋಕಪಾಲ್ ನೇಮಕ ವಿಳಂಬ: ಅ.2ರಿಂದ  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

July 30, 2018

ರಾಲೇಗನ್ ಸಿದ್ಧಿ: ಲೋಕ ಪಾಲ ನೇಮಕ ವಿಳಂಬ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಅಕ್ಟೋಬರ್ 2 ರಿಂದ ಅನಿರ್ದಿಷ್ಟಾ ವಧಿ ಉಪವಾಸ ಸತ್ಯಾಗ್ರಹ ಹಮ್ಮಿ ಕೊಳ್ಳು ವುದಾಗಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ತಮ್ಮ ಅಭಿಯಾನದಲ್ಲಿ ಸೇರಬೇಕೆಂದು ಅವರು ಜನರಲ್ಲಿ ಮನವಿ ಮಾಡಿದರು. ಮಹಾರಾಷ್ಟ್ರ ಅಹಮದ್ ನಗರ ಜಿಲ್ಲೆಯ ರಾಲೇ ಗನ್ ಸಿದ್ಧಿಯಲ್ಲಿ ಮಹಾತ್ಮಾ ಗಾಂಧಿ ಜಯಂತಿಯಾದ ಅ.2ರಿಂದ ತಾನು ಉಪವಾಸ ಪ್ರಾರಂಭಿಸು ವುದಾಗಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಜಾರೆ ತಿಳಿಸಿದ್ದಾರೆ. ಈ ಮುನ್ನ ಎನ್‍ಡಿಎ ಸರ್ಕಾರ ಲೋಕಪಾಲ್ ಮಸೂದೆ ಜಾರಿ ಮಾಡುವುದಾಗಿಯೂ, ಕೇಂದ್ರದಲ್ಲಿ ಲೋಕಪಾಲರ ನೇಮಕ ಮಾಡುವುದಾಗಿಯೂ ಭರವಸೆ ನಿಡಿತ್ತು. 2014ರಲ್ಲಿ ಅಂದಿನ ರಾಷ್ಟ್ರಪತಿಗಳು ಲೋಕಪಾಲ್ ವಿಧೇಯಕಕ್ಕೆ ಸಹಿ ಹಾಕಿದ್ದರು.

ಆದರೆ ಇದಿನ್ನೂ ಜಾರಿಯಾಗಿಲ್ಲ ಎಂದು ಅಣ್ಣಾ ಹಜಾರೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. “ಭ್ರಷ್ಟಾಚಾರ ವನ್ನು ತೊಡೆದು ಹಾಕಲು ಸರ್ಕಾರಕ್ಕೆ ಇಚ್ಛೆ ಇದ್ದಂತಿಲ್ಲ. ಆದ್ದರಿಂದ ಇದು ಲೋಕ ಪಾಲ್ ನೇಮಕ ವಿಳಂಬಕ್ಕೆ ಕಾರಣಗಳನ್ನು ಹೇಳುತ್ತಾ ಬಂದಿದೆ” ಎಂದು ಹಜಾರೆ ಹೇಳಿದರು. ಲೋಕಪಾಲ ಚಳವಳಿಯ ಮುಂಚೂಣಿ ನಾಯಕರಾಗಿರುವ ಅಣ್ಣಾ ಹಜಾರೆ 2011ರಲ್ಲಿ 12 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಂದು ದೇಶಾದ್ಯಂತ ಹಜಾರೆ ಅವರ ಹೋರಾಟಕ್ಕೆ ಅಪಾರ ಜನ ಬೆಂಬಲ ವ್ಯಕ್ತವಾಗಿತ್ತು.

Translate »