ಲೋಕಪಾಲ್, ಲೋಕಾಯುಕ್ತಕ್ಕಾಗಿ  ಅಣ್ಣಾ ಹಜಾರೆ ಮತ್ತೆ ನಿರಶನ
ಮೈಸೂರು

ಲೋಕಪಾಲ್, ಲೋಕಾಯುಕ್ತಕ್ಕಾಗಿ ಅಣ್ಣಾ ಹಜಾರೆ ಮತ್ತೆ ನಿರಶನ

January 31, 2019

ರಾಲೇಗಣ್ ಸಿದ್ದಿ: ಲೋಕಪಾಲ್ ಮಸೂದೆ ಜಾರಿ, ಪ್ರಬಲ ಲೋಕಾ ಯುಕ್ತಕ್ಕಾಗಿ ದಶಕದಿಂದ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆ, ಈಗ ಮತ್ತೊಮ್ಮೆ ನಿರಶನ ಕೈಗೊಂಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲೋಕಪಾಲ್, ಲೋಕಾಯುಕ್ತ ನೇಮಕ ಮಾಡುವುದಕ್ಕೆ ವಿಫಲ ವಾಗಿರುವ ಹಿನ್ನೆಲೆಯಲ್ಲಿ ಒತ್ತಡ ಹೇರಲು ಅಣ್ಣಾ ಹಜಾರೆ ಮತ್ತೊಮ್ಮೆ ಉಪವಾಸ ಪ್ರತಿಭಟನೆ ಆರಂಭಿಸಿದ್ದಾರೆ. ಜ.30ರಂದು ಅವರು ಇರುವ ಗ್ರಾಮ ರಾಲೇಗಣ್ ಸಿದ್ದಿಯಲ್ಲಿ ನಿರಶನ ಕೈಗೊಂಡು ಮಾತನಾಡಿರುವ ಅಣ್ಣಾ ಹಜಾರೆ, ಲೋಕಪಾಲ್ ಮೂಲಕ ಪ್ರಧಾನಿ ವಿರುದ್ಧ ದೂರು ಬಂದು ಸಾಕ್ಷ್ಯ ಲಭ್ಯವಾದರೆ ಅದನ್ನು ತನಿಖೆ ನಡೆಸುವ ಅಧಿಕಾರವಿರುತ್ತದೆ. ಲೋಕಾಯುಕ್ತದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕರ ವಿರುದ್ಧ ಆರೋಪ ಕೇಳಿಬಂದು ಸಾಕ್ಷ್ಯ ಲಭ್ಯವಾದರೆ ಅವರ ವಿರುದ್ಧವೂ ತನಿಖೆ ನಡೆಸುವ ಅಧಿಕಾರವಿರುತ್ತದೆ. ಆದ್ದರಿಂದಲೇ ಈ ಎರಡೂ ಸಂಸ್ಥೆಗಳನ್ನು ರಾಜಕಾರಣಿಗಳು ವಿರೋಧಿಸುತ್ತಿದ್ದಾರೆ. ಯಾವುದೇ ಪಕ್ಷಕ್ಕೂ ಇದು ಬೇಕಾಗಿಲ್ಲ. 2013ರಲ್ಲೇ ಸಂಸತ್‍ನಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಲಾಗಿದೆ ಆದರೆ ಲೋಕಪಾಲ್‍ನ್ನು ನೇಮಕ ಮಾಡಲಾಗಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

Translate »