ದೇಶ-ವಿದೇಶ

ಕರ್ನಾಟಕದ ಧರ್ಮಸ್ಥಳ ನೋಡಿ ಕಲೀರಿ; ಪುರಿ ದೇಗುಲ ಆಡಳಿತ ಮಂಡಳಿಗೆ ‘ಸುಪ್ರೀಂ’ ತರಾಟೆ
ದೇಶ-ವಿದೇಶ

ಕರ್ನಾಟಕದ ಧರ್ಮಸ್ಥಳ ನೋಡಿ ಕಲೀರಿ; ಪುರಿ ದೇಗುಲ ಆಡಳಿತ ಮಂಡಳಿಗೆ ‘ಸುಪ್ರೀಂ’ ತರಾಟೆ

June 10, 2018

ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮ ಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಯನ್ನು ಸುಪ್ರೀಂಕೋರ್ಟ್ ಶನಿವಾರ ತರಾಟೆಗೆ ತೆಗೆದುಕೊಂಡಿದೆ. ದೇವಾಲಯದಲ್ಲಿ ಭಕ್ತರ ಶೋಷಣೆಯನ್ನು ಗಂಭೀರ ವಾಗಿ ಪರಿಗಣ ಸಿರುವ ನ್ಯಾ.ಆದರ್ಶ ಗೋಯಲ್ ಮತ್ತು ನ್ಯಾ.ಅಶೋಕ್ ಭೂಷಣ್ ಅವರಿದ್ದ ಪೀಠ ದೇಗುಲ ನಿರ್ವಹಣೆಗೆ ಸಂಬಂಧಿಸಿದಂತೆ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ. ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ, ಆಂಧ್ರಪ್ರದೇಶದ…

ಪೆಟ್ರೋಲ್, ಡೀಸೆಲ್ ದರ ಸತತ 11ನೇ ದಿನವೂ ಇಳಿಕೆ
ದೇಶ-ವಿದೇಶ

ಪೆಟ್ರೋಲ್, ಡೀಸೆಲ್ ದರ ಸತತ 11ನೇ ದಿನವೂ ಇಳಿಕೆ

June 10, 2018

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶನಿವಾರ ಮತ್ತೊಮ್ಮೆ ಇಳಿಕೆಯಾಗಿದ್ದು, ಕಳೆದ 11 ದಿನಗಳಿಂದ ಸತತ ವಾಗಿ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಈವರೆ ಗಿನ ಇಳಿಕೆಗಿಂತ ಇಂದು ಇಳಿಕೆ ಯಾಗಿರು ವುದು ದೊಡ್ಡ ಪ್ರಮಾಣವಾಗಿದ್ದು, ಇದರಿಂ ದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ನಿರಾಳರಾಗುವಂತಾಗಿದೆ. 11ನೇ ದಿನದಲ್ಲಿ ಪ್ರತೀ ಲೀ. ಪೆಟ್ರೋಲ್ ದರ 40 ಪೈಸೆ ಮತ್ತು ಡೀಸೆಲ್ ಬೆಲೆ 30 ಪೈಸೆ ಕಡಿಮಯಾಗಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಭಾರೀ ಏರಿಕೆ ಕಂಡಿದ್ದವು. ಇದರಿಂದ ಗ್ರಾಹಕರು ಕಂಗಾಲಾಗುವಂತಾಗಿತ್ತು….

ಮುಂಬಯಿಯಲ್ಲಿ ಭಾರೀ ಮಳೆ: ಮಹೀಮ್, ವರ್ಲಿ, ಹಿಂದ್ಮಾತಾ ಜಲಾವೃತ
ದೇಶ-ವಿದೇಶ

ಮುಂಬಯಿಯಲ್ಲಿ ಭಾರೀ ಮಳೆ: ಮಹೀಮ್, ವರ್ಲಿ, ಹಿಂದ್ಮಾತಾ ಜಲಾವೃತ

June 10, 2018

ಮುಂಬಯಿ: ಇಂದು ಕೂಡ ಮುಂಬಯಿಯಲ್ಲಿ ಧಾರಾಕಾರ ಮಳೆ ಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಹಿಮ್, ವೊರ್ಲಿ, ಹಿಂದ್ಮಾತಾ ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಶನಿವಾರ ಮತ್ತು ಭಾನುವಾರ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಹವಾಮಾನ ಇಲಾಖೆ ಸೂಚಿಸಿದೆ. ಸ್ಥಳೀಯ ರೈಲುಗಳ ಸಂಚಾರ ವೇಳೆಯಲ್ಲೂ ವಿಳಂಬವಾಗಿದೆ, ಸುಮಾರು 10ರಿಂದ 12 ನಿಮಿಷ ತಡವಾಗಿ ರೈಲುಗಳು ಆಗಮಿಸುತ್ತಿವೆ, ಸುಮಾರು 32 ವಿಮಾನಗಳ…

ಉತ್ತರ ಪ್ರದೇಶದ ಸುಲ್ತಾನ್‍ಪುರದಲ್ಲಿ ಸಿಡಿಲು ಬಡಿದು ಐವರು ಸಾವು
ದೇಶ-ವಿದೇಶ

ಉತ್ತರ ಪ್ರದೇಶದ ಸುಲ್ತಾನ್‍ಪುರದಲ್ಲಿ ಸಿಡಿಲು ಬಡಿದು ಐವರು ಸಾವು

June 10, 2018

ಸುಲ್ತಾನ್ ಪುರ:  ಉತ್ತರ ಪ್ರದೇಶದ ಸುಲ್ಲಾನ್‍ಪುರ ಜಿಲ್ಲೆಯಲ್ಲಿ ಶುಕ್ರ ವಾರ ರಾತ್ರಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಜೈಸಿಂಗ್ ಕೊತ್ವಾಲಿ ಪೆÇಲೀಸ್ ಠಾಣಾ ವ್ಯಾಪ್ತಿಯ ಆಮ್ದೇವ ಗ್ರಾಮದಲ್ಲಿ ಮೂವರು ಮಕ್ಕಳು, ಸೂರಜ್(12), ಅಜಿತ್(15) ಹಾಗೂ ರವೀಂದ್ರ(14) ಆಟವಾಡುತ್ತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೆÇಲೀಸರು ಹೇಳಿದ್ದಾರೆ. ಅಲ್ಲದೆ ಓರ್ವ ಯುವಕ ಗಾಯಗೊಂಡಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖ ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೊಂಪುರ್…

ಪ.ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಕಗ್ಗೊಲೆ
ದೇಶ-ವಿದೇಶ

ಪ.ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನ ಕಗ್ಗೊಲೆ

June 10, 2018

ಹೌರಾ: ಹೌರಾದ ಜಗತ್ ಬಲಪುರ್‍ನಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾರ್ತಿಕ್ ಢಾಕಿ ಕೊಲೆ ಯಾದ ದುರ್ದೈವಿ, ಈತ ನಿನ್ನೆಯಿಂದ ಕಾಣೆಯಾಗಿದ್ದ. ಘಟನೆಯನ್ನು ಖಂಡಿಸಿ ರುವ ಟಿಎಂಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ತಮ್ಮ ರಾಜಕೀಯ ದ್ವೇಷ ದಿಂದ ಕಾರ್ಯಕರ್ತರ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ ಟಿಎಂಸಿ ಆರೋಪವನ್ನು ತಿರಸ್ಕರಿಸಿರುವ ಬಿಜೆಪಿ, ಹಿಂಸಾಚಾರದಲ್ಲಿ ಬಿಜೆಪಿಗೆ ನಂಬಿಕೆಯಿಲ್ಲ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ರೀತಿಯ ಅಪರಾಧಗಳು ನಡೆಯುವುದಿಲ್ಲ ಎಂದು ಹೇಳಿದೆ. ನಾವು ಹಿಂಸಾಚಾರದ ಮೊರೆ…

ಛತ್ತೀಸ್ ಗಢ: ನಕ್ಸಲ್ ಕಮಾಂಡರ್ ಎನ್‍ಕೌಂಟರ್‍ಗೆ ಬಲಿ
ದೇಶ-ವಿದೇಶ

ಛತ್ತೀಸ್ ಗಢ: ನಕ್ಸಲ್ ಕಮಾಂಡರ್ ಎನ್‍ಕೌಂಟರ್‍ಗೆ ಬಲಿ

June 9, 2018

ರಾಯಪುರ್:  ಛತ್ತೀಸ್‍ಗಢದ ದಂಗೆ ಪೀಡಿತ ಬಿಜಾಪುರ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್‍ನಲ್ಲಿ ನಕ್ಸಲ್ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ. ಭೈರಾಮಗಢ ಪೆÇಲೀಸ್ ಠಾಣಾ ವ್ಯಾಪ್ತಿಯ ಜರಮೊಂಗಿಯಾಗಿ ಅರಣ್ಯದಲ್ಲಿ ಇಂದು ಬೆಳಗ್ಗೆ ಜಿಲ್ಲಾ ಪೆÇಲೀಸ್ ಪಡೆ ಮತ್ತು ಸ್ಥಳೀಯ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲ್ ಕಮಾಂಡರ್ ಮೊತಿ ಫರ್ಸಾ(28)ನನ್ನು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಮೋಹಿತ್ ಗರ್ಗ್ ಅವರು ಪಿಟಿಐಗೆ ತಿಳಿಸಿದ್ದಾರೆ. ಪೆÇಲೀಸರು ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸುಮಾರು…

ಭಾರತ ಮೂಲದ ಕಾರ್ತಿಕ್‍ಗೆ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟ
ದೇಶ-ವಿದೇಶ

ಭಾರತ ಮೂಲದ ಕಾರ್ತಿಕ್‍ಗೆ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟ

June 2, 2018

ವಾಷಿಂಗ್‍ಟನ್:  ಭಾರತೀಯ ಮೂಲದ ಅಮೆರಿಕನ್ ಬಾಲಕ ಕಾರ್ತಿಕ್ ನೆಮ್ಮನಿ (14) 2018ರ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ ಪಟ್ಟವನ್ನು ಅಲಂ ಕರಿಸಿದ್ದಾರೆ. ಕಯೋನಿಯಾ (Koinonia) ಎನ್ನುವ ಪದದ ಸ್ಪೆಲ್ಲಿಂಗ್ ನ್ನು ಸರಿಯಾಗಿ ಉಚ್ಛರಿಸುವ ಮೂಲಕ ಇವರು ಜಯ ಸಾಧಿಸಿದ್ದಾರೆ. 93 ವರ್ಷಗಳ ಇತಿಹಾಸದಲ್ಲಿ ಈ ಸಾಲಿನಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆ ಇತ್ತೆಂದು ಹೇಳಲಾಗಿದೆ. ಅಮೆರಿಕಾ ಟೆಕ್ಸಾಸ್ ರಾಜ್ಯ, ಮೆಕ್ ಕಿನ್ನೆ ನಗರದ ನಿವಾಸಿಯಾದ ಕಾರ್ತಿಕ್ ಒಟ್ಟು 515 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿ ಜಯಿಸಿದ್ದಾರೆ. ಕಳೆದ ವರ್ಷ…

1993 ಮುಂಬೈ ಸರಣ ಸ್ಫೋಟ ಪ್ರಕರಣ: ಆರೋಪಿ ಅಹ್ಮದ್ ಮೊಹಮ್ಮದ್ ಲಂಬು ಬಂಧನ
ದೇಶ-ವಿದೇಶ

1993 ಮುಂಬೈ ಸರಣ ಸ್ಫೋಟ ಪ್ರಕರಣ: ಆರೋಪಿ ಅಹ್ಮದ್ ಮೊಹಮ್ಮದ್ ಲಂಬು ಬಂಧನ

June 2, 2018

ಧರಿಯಾ (ಗುಜರಾತ್): 1993 ಮುಂಬೈ ಸರಣ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಅಹ್ಮದ್ ಮೊಹಮ್ಮದ್ ಲಂಬು ಎಂಬಾತನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಗುಜರಾತ್ ರಾಜ್ಯದ ಧರಿಯಾ ಎಂಬ ಗ್ರಾಮದಲ್ಲಿ ಅಹ್ಮದ್ ಮೊಹಮ್ಮದ್ ಲಂಬುನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ. 1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಮಂದಿ ಗಾಯಗೊಂಡಿದ್ದರು. 27 ಕೋಟಿಗೂ ಹೆಚ್ಚು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಪ್ರಕರಣದಲ್ಲಿ…

ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ
ದೇಶ-ವಿದೇಶ

ಕೇರಳದಲ್ಲಿ ನಿಫಾ ವೈರಸ್‍ಗೆ ಮತ್ತೊಂದು ಬಲಿ: ಮೃತರ ಸಂಖ್ಯೆ 16ಕ್ಕೆ ಏರಿಕೆ

June 1, 2018

ಕೋಯಿಕ್ಕೋಡ್: ಮಾರಣಾಂತಿಕ ನಿಫಾ ವೈರಸ್ ಕೇರಳದಲ್ಲಿ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಸೋಂಕು ಪೀಡಿತರೊಬ್ಬರು ಸಾವನ್ನಪ್ಪುವ ಮೂಲಕ ಮೃತಪಟ್ಟವರ ಸಂಖ್ಯೆ ಇದೀಗ 16ಕ್ಕೆ ಏರಿಕೆಯಾಗಿದೆ. ನಿಫಾ ವೈರಸ್‍ನಿಂದ ಹರಡುವ ಸೋಂಕಿಗೆ ಕೇರಳದಲ್ಲಿ ಗುರುವಾರ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾದಂತಾಗಿದೆ. ಕೇರಳದ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕು ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ನದುವನ್ನೂರು ನಿವಾಸಿ ರಶೀನ್(25 ವರ್ಷ) ಎನ್ನುವವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಿನ್ನೆಯಷ್ಟೇ ಇದೇ ಮಾರಣಾಂತಿಕ ವೈರಾಣು ಸೋಂಕಿಗೆ ಟಿ.ಪಿ. ಮಧುಸೂದನ್…

ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!
ದೇಶ-ವಿದೇಶ

ನಿಫಾ ವೈರಸ್‍ಗೆ ಕೇರಳದಲ್ಲಿ ಮತ್ತೊಂದು ಬಲಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ!

May 28, 2018

ಕೊಯಿಕ್ಕೋಡ್: ದೇವರನಾಡು ಕೇರಳ ದಲ್ಲಿ ಮಾರಣಾಂತಿಕ ನಿಫಾ ವೈರಾಣು ಸೋಂಕಿನ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೇರಳದ ಕೊಯಿಕ್ಕೋಡ್‍ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ವೈರಾಣು ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಅಬಿನ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆ ಮೂಲಕ ನಿಫಾ ವೈರಾಣು ಸೋಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾದಂತಾಗಿದೆ. ಇನ್ನು ಮೃತ ಅಬಿನ್, ಕೇರಳದ ಪಾಲಾಳಿ ಜಿಲ್ಲೆಯ ನಿವಾಸಿಯಾಗಿದ್ದು, ಖಾಸಗಿ ವೈದ್ಯಕೀಯ…

1 4 5 6 7 8
Translate »