ಉತ್ತರ ಪ್ರದೇಶದ ಸುಲ್ತಾನ್‍ಪುರದಲ್ಲಿ ಸಿಡಿಲು ಬಡಿದು ಐವರು ಸಾವು
ದೇಶ-ವಿದೇಶ

ಉತ್ತರ ಪ್ರದೇಶದ ಸುಲ್ತಾನ್‍ಪುರದಲ್ಲಿ ಸಿಡಿಲು ಬಡಿದು ಐವರು ಸಾವು

June 10, 2018

ಸುಲ್ತಾನ್ ಪುರ:  ಉತ್ತರ ಪ್ರದೇಶದ ಸುಲ್ಲಾನ್‍ಪುರ ಜಿಲ್ಲೆಯಲ್ಲಿ ಶುಕ್ರ ವಾರ ರಾತ್ರಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಜೈಸಿಂಗ್ ಕೊತ್ವಾಲಿ ಪೆÇಲೀಸ್ ಠಾಣಾ ವ್ಯಾಪ್ತಿಯ ಆಮ್ದೇವ ಗ್ರಾಮದಲ್ಲಿ ಮೂವರು ಮಕ್ಕಳು, ಸೂರಜ್(12), ಅಜಿತ್(15) ಹಾಗೂ ರವೀಂದ್ರ(14) ಆಟವಾಡುತ್ತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೆÇಲೀಸರು ಹೇಳಿದ್ದಾರೆ. ಅಲ್ಲದೆ ಓರ್ವ ಯುವಕ ಗಾಯಗೊಂಡಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖ ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೊಂಪುರ್ ಗ್ರಾಮದಲ್ಲಿ ಮನ್ಭವತಿ ಎಂಬ 42 ವರ್ಷ ಮಹಿಳೆ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಬನಿ ಗ್ರಾಮದ 55 ವರ್ಷದ ಶೋಭಾವತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.ನಿನ್ನೆ ಸಹ ಉತ್ತರ ಪ್ರದೇಶದ ಜೋನ್ಪರ್ ಮತ್ತು ರಾಯ್ ಬರೇಲಿ ಜಿಲ್ಲೆಯಲ್ಲಿ ಸಿಡಿಲಿಗೆ ಐವರು ಬಲಿಯಾಗಿದ್ದರು.

Translate »