ದೇಶ-ವಿದೇಶ

ಕಬಡ್ಡಿ ಮಾಸ್ಟರ್ಸ್: ಭಾರತ ಚಾಂಪಿಯನ್
ದೇಶ-ವಿದೇಶ

ಕಬಡ್ಡಿ ಮಾಸ್ಟರ್ಸ್: ಭಾರತ ಚಾಂಪಿಯನ್

July 1, 2018

ದುಬೈ: ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ, ಇರಾನ್ ವಿರುದ್ಧ 44-26 ಅಂಕಗಳ ಅಂತರದಿಂದ ಗೆಲುವು ಸಾಧಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಕೊರಿಯಾವನ್ನು 36-20 ಅಂಕಗಳಿಂದ ಮಣಿಸಿದ್ದ ಭಾರತ ಫೈನಲ್‍ಗೆ ಎಂಟ್ರಿ ಕೊಟ್ಟಿತ್ತು.

ಟಿ20: ಭಾರತಕ್ಕೆ ಸರಣಿ ಜಯ
ದೇಶ-ವಿದೇಶ

ಟಿ20: ಭಾರತಕ್ಕೆ ಸರಣಿ ಜಯ

June 30, 2018

ಡಬ್ಲಿನ್:  ಡಬ್ಲಿನ್‍ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 143 ರನ್‍ಗಳ ಭರ್ಜರಿ ಜಯ ಗಳಿಸಿದೆ. ಎರಡು ಟಿ20 ಪಂದ್ಯಗಳಲ್ಲಿ 2-0 ಯೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ನಿಗದಿತ 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು. 214 ರನ್ ಟಾರ್ಗೆಟ್ ಬೆನ್ನತ್ತಿದ ಐರ್ಲೆಂಡ್ 12.3 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 70 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಟಾಸ್ ಸೋತು ಬ್ಯಾಟಿಂಗ್‍ಗೆ…

ಗಾಳಿಯಲ್ಲೂ ಸೈನಿಕರ ಯೋಗ: ವಾಯುಸೇನೆ ವಿನೂತನ ಪ್ರಯತ್ನ
ದೇಶ-ವಿದೇಶ

ಗಾಳಿಯಲ್ಲೂ ಸೈನಿಕರ ಯೋಗ: ವಾಯುಸೇನೆ ವಿನೂತನ ಪ್ರಯತ್ನ

June 22, 2018

ನವದೆಹಲಿ: ಆಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ವಾಯು ಸೇನೆಯ ಯೋಧರು ಆಗಸದಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣ ದಲ್ಲಿಯೇ ಯೋಗಾಸನಗಳನ್ನು ಮಾಡುವ ಮೂಲಕ ಭಾರತೀಯ ಸೈನಿಕರು ಜಗತ್ತಿನ ಜನರ ಗಮನ ಸೆಳೆದಿದ್ದಾರೆ. ಇನ್ನು ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್‍ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶದಲ್ಲಿ ಯೋಗಾಸನ ಪ್ರದರ್ಶಿಸಿದರು. ಸುಮಾರು 15…

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ  ಮನೆ ಖರೀದಿಗೆ ಮತ್ತಷ್ಟು ಅನುಕೂಲ
ದೇಶ-ವಿದೇಶ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ  ಮನೆ ಖರೀದಿಗೆ ಮತ್ತಷ್ಟು ಅನುಕೂಲ

June 19, 2018

ನವದೆಹಲಿ:  ಮಧ್ಯಮ ವರ್ಗದವರಿಗೆ ಪ್ರಧಾನ್ ಮಂತ್ರಿ ಅವಾಸ್ ಯೋಜನೆ (ನಗರ ಪ್ರದೇಶ) ಅಡಿಯಲ್ಲಿ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್ ಎಸ್‍ಎಸ್)ಗೆ ಅರ್ಹತಾ ಮಾನದಂಡ ಗಳನ್ನು ಪರಿಷ್ಕರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಗೃಹನಿರ್ಮಾಣ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿ ಸುವ ಗುರಿಯನ್ನು ಹೊಂದಿರುವ ಈ ಯೋಜನೆಯಿಂದ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಸಾಕಷ್ಟು ಅನುಕೂಲವಿದೆ. ಸಿಎಲ್‍ಎಸ್‍ಎಸ್‍ನ ಅನುಕೂಲಗಳು: ಸಿಎಲ್‍ಎಸ್‍ಎಸ್ ಅಡಿಯಲ್ಲಿ ರೂ 6-12 ಲಕ್ಷದೊಳಗಿನ ಆದಾಯ ಅಥವಾ ಎಂಐಜಿ-I ವರ್ಗದ ಜನರಿಗೆ 9 ಲಕ್ಷ ರೂ ವರೆಗಿನ ಸಾಲಕ್ಕೆ ನೀಡಲಾಗುವ ಬಡ್ಡಿಯ…

ಯೋಧ ಔರಂಗಜೇಬ್‍ನ ಹತ್ಯೆ  ಹಿಂದೆ ಪಾಕ್‍ನ ಐಎಸ್‍ಐ ಕೈವಾಡ?
ದೇಶ-ವಿದೇಶ

ಯೋಧ ಔರಂಗಜೇಬ್‍ನ ಹತ್ಯೆ  ಹಿಂದೆ ಪಾಕ್‍ನ ಐಎಸ್‍ಐ ಕೈವಾಡ?

June 18, 2018

ನವದೆಹಲಿ:  ಯೋಧ ಔರಂಗಜೇಬ್‍ನ ಹತ್ಯೆ ಹಿಂದೆ ಪಾಕಿಸ್ತಾನದ ಐಎಸ್‍ಐ ಕೈವಾಡವಿದೆ ಎಂದು ಗುಪ್ತಚರ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಭಯೋತ್ಪಾದಕ ರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಔರಂಗಜೇಬ್‍ನ್ನು ಜಮ್ಮು-ಕಾಶ್ಮೀರದ ಪುಲ್ವಾಮ ದಲ್ಲಿ ಹತ್ಯೆ ಮಾಡಲಾಗಿತ್ತು. ಔರಂಗಜೇಬ್ ಹತ್ಯೆಯಲ್ಲಿ ಪಾಕಿಸ್ತಾನದ ಐಎಸ್‍ಐ, ಪಾಕ್‍ನ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತಯ್ಬಾ(ಎಲ್‍ಇಟಿ) ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡವಿರುವ ಸಾಧ್ಯತೆ ಇದ್ದು, ಘಟನೆಗೆ ಹೊಣೆ ಹೊರದಂತೆ ಐಎಸ್‍ಐ ಉಗ್ರ ಸಂಘಟನೆಗಳಿಗೆ ಸೂಚಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಔರಂಗಜೇಬ್‍ನ ಹತ್ಯೆಯ ನಂತರ ಐಎಸ್‍ಎಸ್…

ಎಲ್-ಜೆ v/s ಆಪ್ ಸರ್ಕಾರ: ತಕ್ಷಣ ಬಿಕ್ಕಟ್ಟು ಪರಿಹರಿಸಿ;  ಪ್ರಧಾನಿಗೆ ಬಿಜೆಪಿಯೇತರ ನಾಲ್ವರು ಸಿಎಂಗಳ ಒತ್ತಾಯ
ದೇಶ-ವಿದೇಶ

ಎಲ್-ಜೆ v/s ಆಪ್ ಸರ್ಕಾರ: ತಕ್ಷಣ ಬಿಕ್ಕಟ್ಟು ಪರಿಹರಿಸಿ;  ಪ್ರಧಾನಿಗೆ ಬಿಜೆಪಿಯೇತರ ನಾಲ್ವರು ಸಿಎಂಗಳ ಒತ್ತಾಯ

June 18, 2018

ನವದೆಹಲಿ:  ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಎಎಪಿ ಸರ್ಕಾರದ ನಡುವಿನ ಗುದ್ದಾಟ ಸರಿಪಡಿಸುವಂತೆ ಬಿಜೆಪಿಯೇತರ ನಾಲ್ವರು ಮುಖ್ಯಮಂತ್ರಿಗಳು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಇದೊಂದು ಸಂವಿಧಾನಿಕ ಬಿಕ್ಕಟ್ಟು ಎಂದಿರುವ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ಆಪ್ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವಿನ ಬಿಕ್ಕಟ್ಟು ಪರಿಹರಿಸುವ ಮೂಲಕ…

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ
ದೇಶ-ವಿದೇಶ, ಮೈಸೂರು

ಇಂದು ಮೋದಿ, ಗಡ್ಕರಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ

June 18, 2018

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಾಳೆ (ಜೂ.18) ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವ ರನ್ನು ಭೇಟಿ ಮಾಡಲಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನಿ ಭೇಟಿಗೆ ನಾಳೆ ಸಂಜೆ 4.30ಕ್ಕೆ ಸಮಯ ನಿಗದಿಯಾಗಿದೆ. ಈ ವೇಳೆ ರಾಜ್ಯದ ಹಲವಾರು ಯೋಜನೆ ಗಳ ಬಗ್ಗೆ ಮೋದಿ ಅವರ ಸಹಕಾರವನ್ನು ಕುಮಾರಸ್ವಾಮಿ ಕೋರಲಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಹಾಗೂ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಕುರಿತು ಗಡ್ಕರಿ ಅವರ ಜೊತೆ ಚರ್ಚಿಸಲಿದ್ದಾರೆ.

ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಚಾಲನೆ
ದೇಶ-ವಿದೇಶ

ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಚಾಲನೆ

June 15, 2018

ರಷ್ಯಾ: ರಷ್ಯಾದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ 21ನೇ ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಗುರುವಾರ ಅಧಿಕೃತ ಚಾಲನೆ ದೊರೆಯಿತು. ಸುಮಾರು 81 ಸಾವಿರ ಪ್ರೇಕ್ಷಕರ ಸಾಮಥ್ರ್ಯದ ಮಾಸ್ಕೋದ ಲಜ್ನಿಕಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಫುಟ್ ಬಾಲ್ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಸಂಜೆ 6ಗಂಟೆ (ಭಾರತೀಯ ಕಾಲಮಾನ)ವೇಳೆಯಲ್ಲಿ ವಿಶ್ವಕಪ್‍ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಹಾಲಿವುಡ್, ಪಾಪ್ ಗಾಯಕರು, ಇಂಗ್ಲೆಂಡ್ ಖ್ಯಾತ ಪಾಪ್ ಗಾಯಕ ರಾಬಿ ವಿಲಿ ಯಮ್ಸ್, ರಷ್ಯಾ ಸಿಂಗರ್ ಏಯ್ಡಾ ಗ್ಯಾರಿ…

ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು
ದೇಶ-ವಿದೇಶ

ಮುಂಬೈ: ದೀಪಿಕಾ ಪಡುಕೋಣೆ ಫ್ಲಾಟ್‍ನಲ್ಲಿ ಬೆಂಕಿ: 90 ಮಂದಿ ಪ್ರಾಣಾಪಾಯದಿಂದ ಪಾರು

June 14, 2018

ಮುಂಬೈ:  ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಅವರು ವಾಸ್ತವ್ಯ ಹೂಡಿದ್ದ ಫ್ಲಾಟ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪ್ರಭಾದೇವಿ ನಗರದಲ್ಲಿರುವ 34 ಅಂತಸ್ತಿನ ಬೆಹುಮಂಡೆ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಹಠಾತ್ತನೆ ಬೆಂಕಿ ಕಾಣ ಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿದಿದೆ. ಈ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಇರಲಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಅವರ ಆಪ್ತರು ತಿಳಿಸಿದ್ದಾರೆ. ದೀಪಿಕಾ ಪಡುಕೋಣೆ ಈ ಕಟ್ಟಡದ ಒಂದು ಅಂತಸ್ತಿನಲ್ಲಿ ವಾಸ್ತವ್ಯ ಹೂಡಿದ್ದು, ಮತ್ತೊಂದು ಅಂತಸ್ತಿನಲ್ಲಿ ಕಚೇರಿ ಹೊಂದಿದ್ದಾರೆ. ಬೆಂಕಿಯಿಂದಾಗಿ ಎರಡು ಅಂತಸ್ತಿಗೂ…

ಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ನಿಧನ
ದೇಶ-ವಿದೇಶ

ಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ನಿಧನ

June 11, 2018

ವಾಷಿಂಗ್‍ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ `ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 1962ರಲ್ಲಿ ತೆರೆಕಂಡ “ಜೇಮ್ಸ್ ಬಾಂಡ್” ಫ್ರ್ಯಾಂಚೈಸ್ ಸ್ಟಾರ್ಟರ್ “ಡಾನೋ” ನಲ್ಲಿ ಸೀನ್ ಕಾನರಿ ಜತೆಗೆ `ಬಾಂಡ್ ಗರ್ಲ್’ ಆಗಿ ಕಾಣ ಸಿಕೊಂಡಿದ್ದ ಗೇಸನ್ ನಿಧನ ರಾಗಿದ್ದಾರೆಂದು ವೆರೈಟಿ ವರದಿ ಮಾಡಿದೆ. ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊ ಜೇಮ್ಸ್ ಬಾಂಡ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ…

1 3 4 5 6 7 8
Translate »