ಯೋಧ ಔರಂಗಜೇಬ್‍ನ ಹತ್ಯೆ  ಹಿಂದೆ ಪಾಕ್‍ನ ಐಎಸ್‍ಐ ಕೈವಾಡ?
ದೇಶ-ವಿದೇಶ

ಯೋಧ ಔರಂಗಜೇಬ್‍ನ ಹತ್ಯೆ  ಹಿಂದೆ ಪಾಕ್‍ನ ಐಎಸ್‍ಐ ಕೈವಾಡ?

June 18, 2018

ನವದೆಹಲಿ:  ಯೋಧ ಔರಂಗಜೇಬ್‍ನ ಹತ್ಯೆ ಹಿಂದೆ ಪಾಕಿಸ್ತಾನದ ಐಎಸ್‍ಐ ಕೈವಾಡವಿದೆ ಎಂದು ಗುಪ್ತಚರ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.

ಭಯೋತ್ಪಾದಕ ರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಔರಂಗಜೇಬ್‍ನ್ನು ಜಮ್ಮು-ಕಾಶ್ಮೀರದ ಪುಲ್ವಾಮ ದಲ್ಲಿ ಹತ್ಯೆ ಮಾಡಲಾಗಿತ್ತು. ಔರಂಗಜೇಬ್ ಹತ್ಯೆಯಲ್ಲಿ ಪಾಕಿಸ್ತಾನದ ಐಎಸ್‍ಐ, ಪಾಕ್‍ನ ಉಗ್ರ ಸಂಘಟನೆಗಳಾದ ಲಷ್ಕರ್-ಎ-ತಯ್ಬಾ(ಎಲ್‍ಇಟಿ) ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡವಿರುವ ಸಾಧ್ಯತೆ ಇದ್ದು, ಘಟನೆಗೆ ಹೊಣೆ ಹೊರದಂತೆ ಐಎಸ್‍ಐ ಉಗ್ರ ಸಂಘಟನೆಗಳಿಗೆ ಸೂಚಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಔರಂಗಜೇಬ್‍ನ ಹತ್ಯೆಯ ನಂತರ ಐಎಸ್‍ಎಸ್ ಕಾಶ್ಮೀರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಔರಂಗಜೇಬ್ ಹತ್ಯೆಗೆ ಕಣಿವೆ ರಾಜ್ಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಹಾಗೂ ಭಾರತೀಯ ಸೇನೆಗೆ ವ್ಯಕ್ತವಾಗುತ್ತಿರುವ ಬೆಂಬಲ ಎರಡೂ ಪಾಕಿಸ್ತಾನದ ಐಎಸ್‍ಐಗೆ ತಲೆನೋವಾಗಿ ಪರಿಣಮಿಸುತ್ತಿದೆ.

Translate »