ಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ನಿಧನ
ದೇಶ-ವಿದೇಶ

ಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ನಿಧನ

June 11, 2018

ವಾಷಿಂಗ್‍ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ `ಬಾಂಡ್ ಗರ್ಲ್’ ಯುನೈಸ್ ಗೇಸನ್ ಜೂನ್ 8ರಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. 1962ರಲ್ಲಿ ತೆರೆಕಂಡ “ಜೇಮ್ಸ್ ಬಾಂಡ್” ಫ್ರ್ಯಾಂಚೈಸ್ ಸ್ಟಾರ್ಟರ್ “ಡಾನೋ” ನಲ್ಲಿ ಸೀನ್ ಕಾನರಿ ಜತೆಗೆ `ಬಾಂಡ್ ಗರ್ಲ್’ ಆಗಿ ಕಾಣ ಸಿಕೊಂಡಿದ್ದ ಗೇಸನ್ ನಿಧನ ರಾಗಿದ್ದಾರೆಂದು ವೆರೈಟಿ ವರದಿ ಮಾಡಿದೆ. ಜೇಮ್ಸ್ ಬಾಂಡ್ ಚಲನಚಿತ್ರ ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಮತ್ತು ಬಾರ್ಬರಾ ಬ್ರೊಕೊ ಜೇಮ್ಸ್ ಬಾಂಡ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಸಂಬಂಧ ಪೆÇೀಸ್ಟ್ ಮಾಡಿದ್ದಾರೆ. `ಡಾನೋ’ ಮತ್ತು `ಫ್ರಮ್ ರಷ್ಯಾ ವಿತ್ ಲವ್’ನಲ್ಲಿ ಸೀನ್ ಕಾನರಿ ಜತೆ ಕಾಣ ಸಿಕೊಂಡಿದ್ದ ಮೊಟ್ಟಮೊದಲ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ವಿಧಿವಶರಾಗಿದ್ದಾರೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಗೇಸನ್ ಬಾಂಡ್ ಸರಣ ಯ ಎರಡು ಚಿತ್ರಗಳಲ್ಲಿ ಕಾಣ ಸಿಕೊಂಡ ಏಕೈಕ ಬಾಂಡ್ ಗರ್ಲ್ ಆಗಿದ್ದರೆನ್ನುವುದು ವಿಶೇಷ.

Translate »