ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಚಾಲನೆ
ದೇಶ-ವಿದೇಶ

ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಚಾಲನೆ

June 15, 2018

ರಷ್ಯಾ: ರಷ್ಯಾದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ 21ನೇ ಫಿಫಾ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಗುರುವಾರ ಅಧಿಕೃತ ಚಾಲನೆ ದೊರೆಯಿತು.

ಸುಮಾರು 81 ಸಾವಿರ ಪ್ರೇಕ್ಷಕರ ಸಾಮಥ್ರ್ಯದ ಮಾಸ್ಕೋದ ಲಜ್ನಿಕಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಫುಟ್ ಬಾಲ್ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಸಂಜೆ 6ಗಂಟೆ (ಭಾರತೀಯ ಕಾಲಮಾನ)ವೇಳೆಯಲ್ಲಿ ವಿಶ್ವಕಪ್‍ಗೆ ಅದ್ಧೂರಿಯಾಗಿ ಚಾಲನೆ ದೊರೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಹಾಲಿವುಡ್, ಪಾಪ್ ಗಾಯಕರು, ಇಂಗ್ಲೆಂಡ್ ಖ್ಯಾತ ಪಾಪ್ ಗಾಯಕ ರಾಬಿ ವಿಲಿ ಯಮ್ಸ್, ರಷ್ಯಾ ಸಿಂಗರ್ ಏಯ್ಡಾ ಗ್ಯಾರಿ ಫುಲ್ಲಿನಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಪ್ರೇಕ್ಷಕರನ್ನು ಮನ ರಂಜಿ ಸಿದರು. ಫಿಫಾ ಧ್ಯೇಯ ಗೀತೆಯನ್ನು ಹಾಲಿ ವುಡ್ ಸ್ಟಾರ್ ವಿಲ್ ಸ್ಮಿತ್, ಸಿಂಗರ್ ಎರಾ ಇಸ್ಟ್ರೆಫಿ ಹಾಗೂ
ನಿಕ್ ಜಾಮ್ ಜತೆ ಧ್ವನಿಗೂಡಿಸಿದರು. ಜೊತೆಗೆ 500ಕ್ಕೂ ಅಧಿಕ ಡ್ಯಾನ್ಸರ್, ಜಿಮ್ನಾಸ್ಟ್‍ಗಳಿಂದ ನಡೆದ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಿತ್ತು.

ಕಾರ್ಯಕ್ರಮದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಫುಟಿನ್ ಹಾಗೂ ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್ ಉಪಸ್ಥಿತರಿದ್ದರು. ಟೂರ್ನಿಯ ಉದ್ಘಾಟನಾ ಪಂದ್ಯ ದಲ್ಲಿ ಅತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಬಲಿಷ್ಠ ರಷ್ಯಾ ಸೌದಿ ಅರೇಬಿಯಾ ತಂಡವನ್ನು 5-0 ಗೋಲುಗಳಿಂದ ಮಣಿಸುವ ಮೂಲಕ ಟೂರ್ನಿ ಯಲ್ಲಿ ಮೊದಲ ಜಯ ಸಾಧಿಸಿತು.

32 ತಂಡಗಳ ಹಣಾಹಣಿ : 32 ತಂಡಗಳು ವಿಶ್ವಕಪ್ ಪಂದ್ಯದಲ್ಲಿ ಹಣಾಹಣಿ ನಡೆಸಲಿವೆ. ಚಾಂಪಿಯನ್ ಜರ್ಮನಿ, ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೋರಾಟಕ್ಕಿಳಿಯಲಿದೆ. ಆತಿಥೇಯ ತಂಡ ರಷ್ಯಾ ಕೂಡ ಹೆಜ್ಜೆಗುರುತು ಮೂಡಿಸಲು ಹಾತೊರೆಯುತ್ತಿದೆ.

ಒಟ್ಟು ಏಳು ಬಾರಿ ಫೈನಲ್ ಪ್ರವೇಶಿಸಿದ ಮತ್ತು ಐದು ಬಾರಿಯ ಚಾಂಪಿಯನ್ ಬ್ರೆಜಿಲ್, ಎಂಟು ಬಾರಿ ಫೈನಲ್‍ನಲ್ಲಿ ಆಡಿ ನಾಲ್ಕು ಸಲ ಪ್ರಶಸ್ತಿಗೆ ಮುತ್ತಿಕ್ಕಿದ ಜರ್ಮನಿ, ತಲಾ ಎರಡು ಬಾರಿ ಚಾಂಪಿಯನ್ ಆದ ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳ ಜೊತೆ ಒಂದೊಂದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ.

Translate »