ಪೆನಾಲ್ಟಿ ಶೂಟೌಟ್: ರಷ್ಯಾಗೆ ರೋಚಕ ಗೆಲುವು
ದೇಶ-ವಿದೇಶ

ಪೆನಾಲ್ಟಿ ಶೂಟೌಟ್: ರಷ್ಯಾಗೆ ರೋಚಕ ಗೆಲುವು

July 2, 2018

ರಷ್ಯಾ:  ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯ ನಾಕೌಟ್ ಹಂತ ದಲ್ಲಿ ಸ್ಪೇನ್ ವಿರುದ್ಧ ಆತಿಥೇಯ ರಷ್ಯಾ ರೋಚಕ ಗೆಲುವು ಸಾಧಿಸಿತು.

ಆರಂಭ ದಿಂದಲೂ ರೋಚಕತೆಯಿಂದ ಕೂಡಿದ್ದ ಪಂದ್ಯದ ಮೊದಲಾರ್ಧದ ಆರಂಭದಲ್ಲಿ ರಷ್ಯಾ ಮಾಡಿಕೊಂಡ ಎಡವಟ್ಟಿನಿಂದ 12ನೇ ನಿಮಿಷದಲ್ಲಿ ಸ್ಪೇನ್‍ನ ಸರ್ಜೈ ಇಗ್ನಾಶ್‍ವಿಚ್ ಗೋಲು ಸಿಡಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ 41ನೇ ನಿಮಿಷದಲ್ಲಿ ರಷ್ಯಾದ ಆರ್ಟಮ್ ಡಿಜ್ಯೂಬ ಗೋಲು ಗಳಿಸುವ ಮೂಲಕ 1-1 ಗೋಲುಗಳಿಂದ ಸಮಬಲಗೊಳಿಸಿದರು. ಪಂದ್ಯದ ಮೊದ ಲಾರ್ಧದಲ್ಲಿ ರಷ್ಯಾ ಸಮಬಲ ಸಾಧಿಸಿ ನಿಟ್ಟು ಸಿರು ಬಿಟ್ಟಿತು.ಪಂದ್ಯದ ಮೊದಲಾರ್ಧದಲ್ಲಿ ಸ್ಪೇನ್ ಹಾಗೂ ರಷ್ಯಾ ನಡುವೆ ಸಮಬಲದ ಹೋರಾಟ ಕಂಡು ಬಂದ ಹಿನ್ನೆಲೆಯಲ್ಲಿ ದ್ವಿತಿಯಾರ್ಧದಲ್ಲಿ ಗೋಲು ಗಳಿಸಲು ಈ 2 ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಪಂದ್ಯ ಮತ್ತಷ್ಟು ರೋಚಕಗೊಂಡಿತು. ಆದರೆ ಸೆಕೆಂಡ್ ಹಾಫ್‍ನಲ್ಲೂ ಯಾವುದೇ ಗೋಲು ದಾಖಲಾಗಲಿಲ್ಲ. ಹೆಚ್ಚುವರಿ 5 ನಿಮಿ ಷದ ಟೈಮ್‍ನಲ್ಲೂ ಗೋಲು ಗಳಿಸಲು ಉಭಯ ತಂಡಗಳು ವಿಫಲವಾಯಿತು. ಅಂತಿಮ ವಾಗಿ ಪಂದ್ಯ 1-1 ಗೋಲುಗಳಿಂದ ಡ್ರಾ ಗೊಂಡಿತು.

ಈ ವೇಳೆ ಫಲಿತಾಂಶ ನಿರ್ಧಾರಕ್ಕಾಗಿ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಯಿತು. ಆದರೆ ಹೆಚ್ಚು ವರಿ ಸಮಯದಲ್ಲೂ ಯಾವುದೇ ಗೋಲು ದಾಖಲಾಗಲಿಲ್ಲ. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ 3 ಗೋಲು, ರಷ್ಯಾ 4 ಗೋಲು ಗಳಿಸಿ ಗೆಲುವು ಸಾಧಿಸಿತು. ಈ ಮೂಲಕ ರಷ್ಯಾ ಮುಂದಿನ ಹಂತಕ್ಕೆ ಲಗ್ಗೆ ಹಾಕಿದರೇ ಸ್ಪೇನ್ ಟೂರ್ನಿಯಿಂದ ನಿರ್ಗಮಿಸಿತು.

Translate »