ಬಿಜೆಪಿ ಯುವ ಮೋರ್ಚಾದಿಂದ ಶಿವರಾತ್ರೇಶ್ವರ ನಗರದಲ್ಲಿ ಸ್ವಚ್ಛತಾ ಶ್ರಮದಾನ
ಮೈಸೂರು

ಬಿಜೆಪಿ ಯುವ ಮೋರ್ಚಾದಿಂದ ಶಿವರಾತ್ರೇಶ್ವರ ನಗರದಲ್ಲಿ ಸ್ವಚ್ಛತಾ ಶ್ರಮದಾನ

July 2, 2018

ಮೈಸೂರು: ಎನ್‍ಆರ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಸ್ವಚ್ಛ ಭಾರತದ ಅಭಿಯಾನದ ಅಂಗವಾಗಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಎನ್‍ಆರ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದಿಂದ ನಡೆದ 20ನೇ ಸ್ವಚ್ಛತಾ ಕಾರ್ಯಕ್ರಮ ಇದಾಗಿದ್ದು, ವಾರ್ಡ್ 45ರ ವ್ಯಾಪ್ತಿಯ ಬನ್ನಿಮಂಟಪದ ಶಿವರಾತ್ರೇಶ್ವರ ನಗರದಯಲ್ಲಿರುವ ಅರಳಿ ಕಟ್ಟೆಯ ಸ್ವಚ್ಛತೆ ಕೈಗೊಳ್ಳಲಾಯಿತು.
ಅರಳಿ ಕಟ್ಟೆಯ ಆವರಣದಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ, ಅರಳಿ ಕಟ್ಟೆಯ ಆವರಣವನ್ನು ಶುಚಿಗೊಳಿಸಿ ಸಾರ್ವಜನಿಕರು ಪೂಜಾ ವಿಧಿವಿಧಾನ ಕೈಗೊಳ್ಳಲು ಅನುವು ಆಗುವಂತೆ ಮಾಡಲಾಯಿತು. ಮೈಸೂರು ಮಾಜಿ ಮೇಯರ್‍ಗಳೂ ಆದ ಬಿಜೆಪಿ ಮುಖಂಡ ಸಂದೇಶಸ್ವಾಮಿ, ಕ್ಷೇತ್ರದ ಅಧ್ಯಕ್ಷ ಸು.ಮುರಳಿ, ನಗರ ಪಾಲಿಕೆ ಸದಸ್ಯ ಧನ್‍ರಾಜ್, ಬಿಜೆಪಿ ಕಾರ್ಯಕರ್ತರಾದ ನಾರಾಯಣ, ರಾಕೇಶ್ ಭಟ್, ಪದ್ಮನಾಭ, ಮಂಜು, ಗಣೇಶ, ಜೀವನ್ ಸೇರಿದಂತೆ ಇನ್ನಿತರ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೈಸೂರಿನ ಬನ್ನಿಮಂಟಪದ ಶಿವರಾತ್ರೇಶ್ವರ ನಗರದಯಲ್ಲಿರುವ ಅರಳಿ ಕಟ್ಟೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಕಾರ್ಯಕರ್ತರನ್ನು ಚಿತ್ರದಲ್ಲಿ ಕಾಣಬಹುದು.

Translate »