ಪೆಟ್ರೋಲ್, ಡೀಸೆಲ್ ದರ ಸತತ 11ನೇ ದಿನವೂ ಇಳಿಕೆ
ದೇಶ-ವಿದೇಶ

ಪೆಟ್ರೋಲ್, ಡೀಸೆಲ್ ದರ ಸತತ 11ನೇ ದಿನವೂ ಇಳಿಕೆ

June 10, 2018

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶನಿವಾರ ಮತ್ತೊಮ್ಮೆ ಇಳಿಕೆಯಾಗಿದ್ದು, ಕಳೆದ 11 ದಿನಗಳಿಂದ ಸತತ ವಾಗಿ ಅಲ್ಪಪ್ರಮಾಣದಲ್ಲಿ ಇಳಿಕೆಯಾಗಿದೆ. ಈವರೆ ಗಿನ ಇಳಿಕೆಗಿಂತ ಇಂದು ಇಳಿಕೆ ಯಾಗಿರು ವುದು ದೊಡ್ಡ ಪ್ರಮಾಣವಾಗಿದ್ದು, ಇದರಿಂ ದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ನಿರಾಳರಾಗುವಂತಾಗಿದೆ. 11ನೇ ದಿನದಲ್ಲಿ ಪ್ರತೀ ಲೀ. ಪೆಟ್ರೋಲ್ ದರ 40 ಪೈಸೆ ಮತ್ತು ಡೀಸೆಲ್ ಬೆಲೆ 30 ಪೈಸೆ ಕಡಿಮಯಾಗಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಭಾರೀ ಏರಿಕೆ ಕಂಡಿದ್ದವು. ಇದರಿಂದ ಗ್ರಾಹಕರು ಕಂಗಾಲಾಗುವಂತಾಗಿತ್ತು. ಇದೀಗ ದರಗಳು ನಿಧಾನಗತಿಯಲ್ಲಿ ಇಳಿಕೆಯಾಗುತ್ತಿದ್ದು, ನೆರೆಹೊರೆ ರಾಷ್ಟ್ರಗಳಿಗೆ ಹೋಲಿಸಿದರೆ ದೇಶದಲ್ಲಿಂದು ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿನ ಮಟ್ಟದಲ್ಲಿಯೇ ಇದೆ.

Translate »