ಕರ್ನಾಟಕದ ಧರ್ಮಸ್ಥಳ ನೋಡಿ ಕಲೀರಿ; ಪುರಿ ದೇಗುಲ ಆಡಳಿತ ಮಂಡಳಿಗೆ ‘ಸುಪ್ರೀಂ’ ತರಾಟೆ
ದೇಶ-ವಿದೇಶ

ಕರ್ನಾಟಕದ ಧರ್ಮಸ್ಥಳ ನೋಡಿ ಕಲೀರಿ; ಪುರಿ ದೇಗುಲ ಆಡಳಿತ ಮಂಡಳಿಗೆ ‘ಸುಪ್ರೀಂ’ ತರಾಟೆ

June 10, 2018

ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮ ಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಯನ್ನು ಸುಪ್ರೀಂಕೋರ್ಟ್ ಶನಿವಾರ ತರಾಟೆಗೆ ತೆಗೆದುಕೊಂಡಿದೆ.

ದೇವಾಲಯದಲ್ಲಿ ಭಕ್ತರ ಶೋಷಣೆಯನ್ನು ಗಂಭೀರ ವಾಗಿ ಪರಿಗಣ ಸಿರುವ ನ್ಯಾ.ಆದರ್ಶ ಗೋಯಲ್ ಮತ್ತು ನ್ಯಾ.ಅಶೋಕ್ ಭೂಷಣ್ ಅವರಿದ್ದ ಪೀಠ ದೇಗುಲ ನಿರ್ವಹಣೆಗೆ ಸಂಬಂಧಿಸಿದಂತೆ ಪುರಿ ಜಗನ್ನಾಥ ದೇಗುಲ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ರಥಯಾತ್ರೆಗೂ ಮುನ್ನಾ ನ್ಯಾಯಾಲಯ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಆದೇಶ ಮಹತ್ವವನ್ನು ಪಡೆದಿದೆ.

ಪುರಿ ಜಗನ್ನಾಥ ದೇವಸ್ಥಾನದ ಸಿಬ್ಬಂದಿಯಿಂದ ಭಕ್ತರ ಶೋಷಣೆ ನಡೆಯುತ್ತಿರು ವುದರ ಬಗ್ಗೆ ಗಮನ ಸೆಳೆದ ಮೃಣಾಲಿನಿ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.

Translate »