ನನ್ನೊಂದಿಗಿರುವವರು, ನನ್ನ ನಂಬಿದವರ ಹಿತದೃಷ್ಟಿಯಿಂದ 15 ದಿನದಲ್ಲಿ ಮುಂದಿನ ರಾಜಕೀಯ ನಡೆ ನಿರ್ಧಾರ
ಮೈಸೂರು

ನನ್ನೊಂದಿಗಿರುವವರು, ನನ್ನ ನಂಬಿದವರ ಹಿತದೃಷ್ಟಿಯಿಂದ 15 ದಿನದಲ್ಲಿ ಮುಂದಿನ ರಾಜಕೀಯ ನಡೆ ನಿರ್ಧಾರ

June 10, 2018

ಮೈಸೂರು:  ವಿಧಾನ ಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ, ಪರಾಜಿತರಾದ ಕೆ.ಹರೀಶ್ ಗೌಡ, ಮುಂದಿನ ರಾಜಕೀಯ ನಡೆಯ ಬಗ್ಗೆ ಹಿತೈಷಿಗಳೊಂದಿಗೆ ಚರ್ಚಿಸಿ, ಇನ್ನು 15 ದಿನಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಶಿವಮ್ಮ ಮಹದೇವಪ್ಪ ಕಲ್ಯಾಣ ಮಂಟಪ ದಲ್ಲಿ ಶನಿವಾರ ಕೃತಜ್ಞತಾ ಸಭೆಯಲ್ಲಿ ಮಾತ ನಾಡಿದ ಅವರು, ಜನರ ಒತ್ತಾಯದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿದ್ದೆ. ಕ್ಷೇತ್ರದ 22 ವಾರ್ಡ್‍ಗಳ ಜನರೂ ನನಗೆ ಆತ್ಮಸ್ಥೈರ್ಯ ತುಂಬಿದರು. ಎಲ್ಲಾ 230 ಬೂತ್‍ಗಳಲ್ಲೂ ನನಗೆ ಮತ ನೀಡಿ ಹರಸಿದ್ದಾರೆ. ಆದರೆ ಕೆಲವರ ಅಪಪ್ರಚಾರ ದಿಂದ ಚುನಾವಣೆಯಲ್ಲಿ ಸೋಲಾಯಿತು. ಆದರೂ ಸುಮಾರು 22 ಸಾವಿರ ಮತ ಪಡೆದಿರುವ ನಾನು ಜನರ ವಿಶ್ವಾಸ ಗೆದ್ದಿ ದ್ದೇನೆ. 12 ವರ್ಷಗಳಿಂದ ನಿಮ್ಮೊಡನಿದ್ದೇನೆ. ಜೀವನವಿಡೀ ನಿಮ್ಮ ಮನೆ ಮಗನಾಗಿ ಸೇವೆ ಮಾಡುತ್ತೇನೆ. ಹಾಗೆಯೇ ನನ್ನ ಮೇಲೆ ನಂಬಿಕೆ ಇಟ್ಟಿರುವ ಜನರ ಹಿತಕ್ಕಾಗಿ ಮುಂದಿನ ರಾಜಕೀಯ ನಡೆ ಹೇಗಿರಬೇಕು ಎಂಬುದನ್ನು ಮುಖಂಡರು, ಹಿತೈಷಿಗಳ ಸಭೆ ಕರೆದು, ಚರ್ಚಿಸಿ ತೀರ್ಮಾನಿಸುತ್ತೇನೆ. ಮುಂದೆಯೂ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದರು.

ಹೆಬ್ಬಾಳಿನಲ್ಲಿ ಕಳೆದ ನವೆಂಬರ್ 19 ರಂದು ನಡೆದ ಕುಮಾರಪರ್ವ ಕಾರ್ಯ ಕ್ರಮದಲ್ಲಿ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಯನ್ನು ಘೋಷಿಸಿದರು. ನನಗೆ ಟಿಕೆಟ್ ನೀಡದ ಕಾರಣ ಮರುಕಪಟ್ಟ ಸ್ನೇಹಿತ ರೆಲ್ಲಾ ಕೂಡಿ, ಮರುದಿನ ಕೆ.ಜಿ.ಕೊಪ್ಪಲಿನ ಚಂದ್ರಮೌಳೇಶ್ವರ ದೇವಾಲಯದ ಆವ ರಣದಲ್ಲಿ ಸಭೆ ಕರೆದು ಪಕ್ಷೇತರನಾಗಿ ಸ್ಪರ್ಧಿ ಸುವಂತೆ ಒತ್ತಾಯಿಸಿದರು. ಅವರ ಆಗ್ರಹ ದಂತೆ ಏನೇ ಆಗಲಿ ಚುನಾವಣೆಯಿಂದ ಹಿಂದೆ ಸರಿಯಬಾರದು ಎಂದು ನಿರ್ಧರಿಸಿ, ಸ್ಪರ್ಧೆ ಮಾಡಿದೆ. 96 ದಿನಗಳ ಕಾಲ ಮನೆ ಮನೆಗೆ ತೆರಳಿ ಬೆಂಬಲ ಕೋರಿದೆ. ನೀವೆಲ್ಲಾ ನನಗೆ ಶಕ್ತಿ ತುಂಬಿದ್ದೀರಿ. ಆದರೆ ಕಡೇ ಗಳಿಗೆ ಯಲ್ಲಿ ಹರೀಶ್‍ಗೌಡನನ್ನು ನಾನೇ ನಿಲ್ಲಿಸಿ ದ್ದೇನೆ. ಜೆಡಿಎಸ್‍ನಿಂದ 15 ಕೋಟಿ ರೂ. ಪಡೆದು ಡೀಲ್ ಆಗಿದ್ದಾನೆ. ಅವನಿಗೆ ಮತ ನೀಡುವುದು ವ್ಯರ್ಥ. ಹೀಗೆಲ್ಲಾ ಅಪ ಪ್ರಚಾರ ಮಾಡಲಾಯಿತು. ಆದರೂ ಜನ ನನ್ನ ಕೈ ಬಿಡಲಿಲ್ಲ. 22 ಸಾವಿರ ಮತ ನೀಡುವ ಮೂಲಕ ಅಂತಹವರಿಗೆ ಉತ್ತರ ನೀಡಿದ್ದಾರೆ ಎಂದರು.

ಪಕ್ಷ ಸೇರುವುದು ಖಚಿತ: ಜೆಡಿಎಸ್‍ನಿಂದ ಟಿಕೆಟ್ ವಂಚಿತರಾಗಿ ಸ್ವತಂತ್ರ ಅಭ್ಯರ್ಥಿ ಯಾಗಿ ಚುನಾವಣೆ ಎದುರಿಸಿದ್ದ ಕೆ.ಹರೀಶ್ ಗೌಡ, ಮುಂದಿನ ದಿನಗಳಲ್ಲಿ ಯಾವುದಾದ ರೊಂದು ಪಕ್ಷ ಸೇರುವುದು ಖಚಿತ ವಾಗಿದೆ. ಈ ಬಗ್ಗೆ ಸಭೆಯಲ್ಲಿ ಪರೋಕ್ಷ ವಾಗಿ ತಿಳಿಸಿದ ಅವರು, ನನಗಾಗಿ ಅನೇಕ ಮುಖಂಡರು ಪಕ್ಷ ತೊರೆದು ಬಂದರು. ಅನೇಕರು ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವವರಿದ್ದರು. ನನಗೆ ಬೆಂಬಲವಾಗಿ ನಿಂತಿರುವವರ ಹಿತ ದೃಷ್ಟಿಯಿಂದ ಯಾವುದಾದರೂ ಪಕ್ಷಕ್ಕೆ ಸೇರಬೇಕೆಂಬ ಒತ್ತಾಯವಿದೆ. ಚುನಾವಣಾ ಸಂದರ್ಭದಲ್ಲೂ ಕಾಂಗ್ರೆಸ್, ಬಿಜೆಪಿ ಮುಖಂಡರು ಆಹ್ವಾನಿಸಿದ್ದರು. ಈಗಲೂ ನನ್ನ ಹಿಂದಿನ ಪಕ್ಷ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಸಂಪರ್ಕದಲ್ಲಿ ದ್ದಾರೆ. ನಿಮ್ಮೆಲ್ಲರ ಅಭಿಪ್ರಾಯದಂತೆಯೇ ಮುಂದುವರಿಯುತ್ತೇನೆ. ಎಂದಿಗೂ ನಿಮ್ಮ ಸಹಕಾರವಿರಲಿ ಎಂದು ಕೇಳಿಕೊಂಡರು.

ಚುನಾವಣೆಯಲ್ಲಿ ಸೋತನೆಂದು ಕಣ್ಣೀರು ಹಾಕಿಲ್ಲ. ಯಾವುದೇ ಭಯ, ಆತಂಕ, ತೊಂದರೆ ನನಗಿಲ್ಲ. ಮುಂದೆಯೂ ಜನ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ದುಡ್ಡಿನ ಮೇಲಾಟ ಹೋಗಲಾಡಿಸಲು ಶಿಕ್ಷಣ ವೊಂದೇ ಮಾರ್ಗ. ಆದ್ದರಿಂದ ಏನೇ ಆದರೂ ಕ್ಷೇತ್ರದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗು ತ್ತೇನೆ. ಎಲ್ಲಾ ವಾರ್ಡ್‍ಗಳ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲು ತಯಾರಿ ಮಾಡಿಕೊಳ್ಳು ತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.

ಇದಕ್ಕೂ ಮುನ್ನ ಹೆಬ್ಬಾಳದ ಬೋರೇ ಗೌಡ, ಪಡುವಾರಹಳ್ಳಿ ಕುಮಾರ್, ಮಹದೇವಸ್ವಾಮಿ, ಫೈಲ್ವಾನ್ ಶ್ರೀನಿವಾಸ ಗೌಡ, ಮೇಟಗಳ್ಳಿ ರವಿ, ಮಂಡಿಮೊಹಲ್ಲಾ ಚಲುವರಾಜು, ಮಂಜುನಾಥಪುರ ಶ್ರೀನಿ ವಾಸ್, ಬಸವರಾಜು, ಅನಂತರಾಮು ಸೇರಿದಂತೆ ಅನೇಕರು ಮಾತನಾಡಿ, ಪಕ್ಷೇ ತರ ಅಭ್ಯರ್ಥಿಯಾಗಿ 22 ಸಾವಿರ ಮತ ಗಳನ್ನು ಪಡೆಯುವ ಮೂಲಕ ಹರೀಶ್ ಗೌಡರು ದಾಖಲೆ ಬರೆದಿದ್ದಾರೆ. ಬೆಂಬಲಿ ಗರ ಹಿತದೃಷ್ಟಿಯಿಂದ ಮುಂದಿನ ನಡೆಯ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕೆಂದು ಒತ್ತಾಯಿಸಿದರು.

Translate »