ಕ್ರಿಮಿನಲ್ ಹಿನ್ನೆಲೆಯವರಿಗೆ ಟಿಕೆಟ್ ನೀಡಲೇಬಾರದು
ಮೈಸೂರು

ಕ್ರಿಮಿನಲ್ ಹಿನ್ನೆಲೆಯವರಿಗೆ ಟಿಕೆಟ್ ನೀಡಲೇಬಾರದು

January 26, 2020

ನವದೆಹಲಿ: ಚುನಾವಣೆಯಲ್ಲಿ ತೋಳ್ಬಲ, ಅಪರಾಧೀಕರಣ ಪ್ರಮಾಣ ತಗ್ಗ ಬೇಕಿದ್ದರೆ ರಾಜಕೀಯ ಪಕ್ಷಗಳು ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಟಿಕೆಟ್ ನೀಡಲೇ ಬಾರದು. 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ಸೂಚನೆಯಂತೆ ಅಭ್ಯರ್ಥಿಗಳಾದ ವರು ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧಗಳ ಬಗ್ಗೆ ಪ್ರಕಟಣೆ ಹೊರಡಿಸಬೇಕು ಎಂದು ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ಶುಕ್ರವಾರ ತಿಳಿಸಿದೆ. ನ್ಯಾ| ಆರ್.ಎಫ್. ನಾರಿಮನ್ ಮತ್ತು ನ್ಯಾ| ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಆಯೋ ಗಕ್ಕೆ ಸೂಚನೆ ನೀಡಿ ಯಾವ ರೀತಿಯಲ್ಲಿ ರಾಜಕೀಯವು ಅಪರಾಧೀಕರಣಗೊಳ್ಳುವುದನ್ನು ತಡೆಗಟ್ಟಬಹುದು ಎಂಬ ಬಗ್ಗೆ ಒಂದು ವಾರದ ಒಳಗಾಗಿ ನಿಯಮಾವಳಿ ರೂಪಿಸಿ ಸಲ್ಲಿಸುವಂತೆ ಸೂಚಿಸಿತು. ಅದಕ್ಕಾಗಿ ಅರ್ಜಿದಾರ ಬಿಜೆಪಿ ನಾಯಕ ಅಶ್ವಿನಿ ಉಪಾ ಧ್ಯಾಯ ಮತ್ತು ಆಯೋಗ ಜತೆಯಾಗಿ ಕುಳಿತು ನಿಯಮಾವಳಿ ಸಿದ್ಧಪಡಿಸಿ ಎಂದಿದೆ ಸುಪ್ರೀಂಕೋರ್ಟ್. 2018ರ ಸೆಪ್ಟೆಂಬರ್‍ನಲ್ಲಿ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ಚುನಾವಣಾ ಆಯೋಗದ ಎದುರು ಅಭ್ಯರ್ಥಿಗಳಾದವರು ತಮ್ಮ ಅಪರಾಧಿಕ ಹಿನ್ನೆಲೆಯ ಸಮಗ್ರ ವಿವರ ನೀಡಬೇಕೆಂದು ಅವಿರೋಧ ತೀರ್ಪು ನೀಡಿತ್ತು.

Translate »