News

ಇಂದಿನಿಂದ ವಿಧಾನಮಂಡಲ ಅಧಿವೇಶನ
News

ಇಂದಿನಿಂದ ವಿಧಾನಮಂಡಲ ಅಧಿವೇಶನ

September 13, 2021

ಬೆಂಗಳೂರು: ಸೋಮವಾರದಿಂದ ಹತ್ತು ದಿನಗಳ ಕಾಲ ಮಹತ್ವದ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಮಳೆಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿರೋಧ ಪಕ್ಷಗಳು ತಯಾರಿ ಮಾಡಿಕೊಂಡಿವೆ. ಕೊರೊನಾ ವೈರಸ್, ಲಾಕ್‍ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾ ಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈಗಾ ಗಲೇ ತಯಾರಿ ಮಾಡಿಕೊಂಡಿದ್ದು, ಶಾಸ ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶಾಸಕಾಂಗ…

ಜಿ.ಟಿ.ದೇವೇಗೌಡರು ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ  ಹೇಳಿಕೆ ಎಲ್ಲೂ ಕೊಟ್ಟಿಲ್ಲ
News

ಜಿ.ಟಿ.ದೇವೇಗೌಡರು ಪಕ್ಷಕ್ಕೆ ಡ್ಯಾಮೇಜ್ ಆಗುವಂತಹ ಹೇಳಿಕೆ ಎಲ್ಲೂ ಕೊಟ್ಟಿಲ್ಲ

September 8, 2021

ಬೆಂಗಳೂರು, ಸೆ.7- ಶಾಸಕರಾದ ಜಿ.ಟಿ.ದೇವೇಗೌಡ ಪಕ್ಷದಿಂದ ದೂರ ಇದ್ದಾರೆ. ಆದರೆ ಅವರು ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ಪಕ್ಷ ಸಂಘಟಕ `ಮರಿ’ ದೇವೇ ಗೌಡರ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಮಕಾರ ತೋರಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ಜಿ.ಟಿ.ದೇವೇಗೌಡರು ನನಗೂ, ನನ್ನ ಮಗನಿಗೂ ಟಿಕೆಟ್ ಕೊಡುವ ವಿಚಾರವಾಗಿ ಸಿದ್ದರಾಮಯ್ಯ ಹತ್ತಿರ ಮಾತನಾಡಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ…

ವರಿಷ್ಠರೊಂದಿಗೆ `ಸಂಪುಟ  ವಿಸ್ತರಣೆ’ ಪ್ರಸ್ತಾಪವಿಲ್ಲ: ಸಿಎಂ
News

ವರಿಷ್ಠರೊಂದಿಗೆ `ಸಂಪುಟ ವಿಸ್ತರಣೆ’ ಪ್ರಸ್ತಾಪವಿಲ್ಲ: ಸಿಎಂ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ಮಂತ್ರಿ ಮಂಡಲ ಸೇರಲು ತುದಿಗಾಲಲ್ಲಿ ನಿಂತಿದ್ದ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೊಡ್ಡ ಶಾಕ್ ನೀಡಿದ್ದಾರೆ. ಸದ್ಯಕ್ಕೆ ಮಂತ್ರಿಮಂಡಲದ ವಿಸ್ತರಣೆ ಇಲ್ಲ. ಈ ಸಂಬಂಧ ದೆಹಲಿ ಭೇಟಿ ಸಂದರ್ಭದಲ್ಲಿ ವರಿಷ್ಠರ ಜೊತೆಯು ಚರ್ಚೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡು ದಿನಗಳ ದೆಹಲಿ ಪ್ರವಾಸ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿದಂತೆ ವರಿಷ್ಠರ ಭೇಟಿಗೆ ಸಮಯ ಕೋರಿಲ್ಲ. ಈ ಬಾರಿಯ ಭೇಟಿಯಲ್ಲಿ ರಾಜಕೀಯ ಪ್ರಸ್ತಾವ ಇರುವುದಿಲ್ಲ. ಅಭಿವೃದ್ಧಿಗೆ ಸಂಬಂಧಿಸಿ…

ರಾಜ್ಯದಲ್ಲೀಗ `ನಿಫಾ’ ಭೀತಿ
News

ರಾಜ್ಯದಲ್ಲೀಗ `ನಿಫಾ’ ಭೀತಿ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ನಿಫಾ ಸಾಂಕ್ರಾಮಿಕ ರೋಗ ರಾಜ್ಯ ಸರ್ಕಾರವನ್ನು ಭೀತಿಗೆ ನೂಕಿದೆ. ನೆರೆಯ ಕೇರಳ ರಾಜ್ಯದಲ್ಲಿ ಸೋಂಕು ಪತ್ತೆಯಾಗಿರುವು ದರಿಂದ ಈ ರೋಗದ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಇಲಾಖೆಗೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲ, ನಿಫಾ ಬಗ್ಗೆ ವರದಿ ನೀಡುವಂತೆ ತಜ್ಞರನ್ನು ಕೋರಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸರ್ಕಾರ ಸಂಬಂಧಪಟ್ಟ ಜಿಲ್ಲಾಡ ಳಿತಕ್ಕೆ ಸೂಚಿಸಿದೆ. ಕೇರಳ ಗಡಿ ಭಾಗಕ್ಕೆ ಹೊಂದಿಕೊಂಡಿ ರುವ ಚಾಮರಾಜನಗರ,…

ರಾಜ್ಯಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧಾರ
News

ರಾಜ್ಯಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧಾರ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳು ಬರುತ್ತಿರುವ ಕಾರಣ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್‍ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್ ಇಂದಿಲ್ಲಿ ತಿಳಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾ ಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಸೆಂಟರ್ ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡ ಲಾಗುವುದು ಎಂದರು. ಸರಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಕೃಷಿ…

ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ  ನಾಯಕರಾಗಿ ಹೊರಹೊಮ್ಮಿದ ಮೋದಿ
News

ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಮೋದಿ

September 6, 2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕದ ಡೇಟಾ ಇಂಟಲಿ ಜೆನ್ಸ್ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಜೂನ್ 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಸರ್ವೇ ಪ್ರಕಾರ, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿಶ್ವದ 13 ನಾಯಕರ ಪೈಕಿ ಅತ್ಯಂತ ಜನಪ್ರಿಯ ನಾಯಕರಾಗಿ ಪ್ರಧಾನಿ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ….

ಗಣೇಶೋತ್ಸವಕ್ಕೆ ಅಸ್ತು
News

ಗಣೇಶೋತ್ಸವಕ್ಕೆ ಅಸ್ತು

September 6, 2021

ಬೆಂಗಳೂರು,ಸೆ.5-ರಾಜ್ಯ ಸರ್ಕಾರವು ಸೆ.10ರಂದು ನಡೆಯಲಿರುವ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇಂದು ಬೆಳಗ್ಗೆ ತಜ್ಞರ ಸಭೆ ನಡೆಸಿದ ಮುಖ್ಯಮಂತ್ರಿ ಗಳು, ಕೆಲವು ಷರತ್ತುಗಳೊಂದಿಗೆ ಸರಳವಾಗಿ ಗಣೇಶೋ ತ್ಸವ ಆಚರಿಸಲು ಅವ ಕಾಶ ಕಲ್ಪಿಸಿದ್ದು, ಈ ಸಂಬಂಧ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ. ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಸೆ.9ರಂದು ನಡೆಯ ಲಿರುವ ಗೌರಿ ಹಬ್ಬ ಮತ್ತು ಸೆಪ್ಟೆಂಬರ್ 10ರಂದು ನಡೆಯಲಿರುವ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ. ಗಣೇಶ…

ನ್ಯಾಯ ವಿಜ್ಞಾನ ಪ್ರಯೋಗಾಲಯ ಉನ್ನತಿಗೆ ಆದ್ಯತೆ: ಗೃಹ ಸಚಿವ
News

ನ್ಯಾಯ ವಿಜ್ಞಾನ ಪ್ರಯೋಗಾಲಯ ಉನ್ನತಿಗೆ ಆದ್ಯತೆ: ಗೃಹ ಸಚಿವ

August 26, 2021

ಬೆಂಗಳೂರು, ಆ.25(ಕೆಎಂಶಿ)-ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉನ್ನತೀ ಕರಿಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪೊಲೀಸ್ ಪಬ್ಲಿಕ್ ಶಾಲೆಯ ಶಿಶು ವಿಹಾರ, ಆಡಳಿತ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ಫೋರೆನ್ಸಿಕ್ ಪ್ರಯೋಗಾಲಯಗಳಿಗೂ ಕೂಡ ಇಂದು ಚಾಲನೆ ನೀಡಲಾಗಿದೆ ಎಂದರು. ಪೊಲೀಸರ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪೊಲೀಸ್ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ನಾಗರಿಕರು ನೆಮ್ಮದಿಯ ಬದುಕು ನಡೆಸಲು ಹಗಲಿರುಳು ಪೊಲೀ ಸರು ಎಚ್ಚರವಾಗಿದ್ದು, ರಕ್ಷಣೆ…

ಮಕ್ಕಳಿಗೆ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ
News

ಮಕ್ಕಳಿಗೆ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ

August 26, 2021

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ ಮಕ್ಕಳ(12-17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವು ದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ ಎಂದು ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ. ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಕ್ಟೋಬರ್‍ನಿಂದ ಜೈಡಸ್ ಕೊರೊನಾ ಲಸಿಕೆ ನೀಡ ಲಾಗುವುದು ಎಂದರು. ವಯಸ್ಕರಿಗೆ ಕೊರೊನಾ ಭೀತಿ…

ಪ್ರಯಾಣಿಕರು ಕಡಿಮೆ ಇರುವ ‘ದೂರದ ಬಸ್’ ಟ್ರಿಪ್ ರದ್ದು
News

ಪ್ರಯಾಣಿಕರು ಕಡಿಮೆ ಇರುವ ‘ದೂರದ ಬಸ್’ ಟ್ರಿಪ್ ರದ್ದು

August 25, 2021

ಬೆಂಗಳೂರು,ಆ.24(ಕೆಎಂಶಿ)- ದೂರದ ಊರುಗಳಿಗೆ ಪ್ರಯಾಣಿಕರ ಕೊರತೆ ಎದು ರಾದರೆ ಆ ವೇಳೆಯ ಟ್ರಿಪ್ ರದ್ದು ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸತತ ಡೀಸೆಲ್ ಬೆಲೆ ಏರಿಕೆಯಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಒಟ್ಟಾರೆ 1121 ಕೋಟಿ ರೂ. ನಷ್ಟವಾಗಿದೆ. ಪ್ರಯಾಣಿಕರಿಗೆ ಹೊರೆಯಾಗದ ರೀತಿಯಲ್ಲಿ ವಿವಿಧ ಮಾರ್ಗ ಗಳಲ್ಲಿ ಸಂಪನ್ಮೂಲ ಕ್ರೂಢೀಕರಣ ಮತ್ತು ಉಳಿತಾಯದ ದೃಷ್ಟಿಯಿಂದ ಇಂತಹ ಕೆಲವು ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ. ಸಾರಿಗೆ ಇಲಾಖೆ ವಹಿಸಿಕೊಂಡ ನಂತರ ಇಂದು ಮೊದಲ ಬಾರಿಗೆ…

1 57 58 59 60 61 73
Translate »