ರಾಜ್ಯಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧಾರ
News

ರಾಜ್ಯಾದ್ಯಂತ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್ ತೆರೆಯಲು ನಿರ್ಧಾರ

September 8, 2021

ಬೆಂಗಳೂರು, ಸೆ.7(ಕೆಎಂಶಿ)- ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳು ಬರುತ್ತಿರುವ ಕಾರಣ ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್‍ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ.ಸುನೀಲ್‍ಕುಮಾರ್ ಇಂದಿಲ್ಲಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾ ಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಸೆಂಟರ್ ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡ ಲಾಗುವುದು ಎಂದರು. ಸರಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆ ಇದ್ದು, ಇದಕ್ಕಾಗಿ ವಿವಿಧೆಡೆ 60ಕ್ಕೂ ಹೆಚ್ಚು ಸಬ್ ಸ್ಟೇಷನ್‍ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್ ಮೂಲಕ ನಿರ್ಮಿಸಲಾಗು ವುದು. ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದರು.

ಜೆಇ, ಲೈನ್‍ಮ್ಯಾನ್ ನೇಮಕಾತಿ, ಜೆಇ ಹುದ್ದೆಗೆ ಬಡ್ತಿ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ವರ್ಗಾವಣೆ ದಂಧೆಯನ್ನು ಯಾವುದೇ ಅಧಿಕಾರಿಗಳು ಮಾಡುವಂತಿಲ್ಲ. ವರ್ಷಪೂರ್ತಿ ವರ್ಗಾವಣೆ ಇರುವುದಿಲ್ಲ. ಎರಡೂ ಇಲಾಖೆಗಳಲ್ಲಿ 100 ದಿನಗಳ ಕಾರ್ಯಕ್ರಮ ಯೋಜಿ ಸಿದ್ದೇವೆ. ಈ 100 ದಿನಗಳಲ್ಲಿ ಗ್ರಾಮಾಂತರದಲ್ಲಿ ಮನೆ ಗಳನ್ನು ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಮನೆಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಇದನ್ನು ಮುಖ್ಯಮಂತ್ರಿಗಳ ಆಶಯದಂತೆ “ಬೆಳಕು” ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು. ಅತ್ಯಂತ ಹಾಳಾದ ಸ್ಥಿತಿಯ ಲ್ಲಿರುವ ಟ್ರಾನ್ಸ್‍ಫಾರ್ಮರ್ ಬದಲಾ ವಣೆಗೆ ಟ್ರಾನ್ಸ್‍ಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗುವುದು. ಕೇವಲ 24 ಗಂಟೆ ಗಳಲ್ಲಿ ಹಾಳಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಗಂಗಾಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆದಿದ್ದು, ತುಂಬಾ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ವಿಳಂಬ ವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಬೋರ್‍ವೆಲ್ ಸಿದ್ಧವಾದ 30 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಅನ ಗತ್ಯವಾಗಿ ರೈತರ ಓಡಾಟವನ್ನು ತಪ್ಪಿಸಲಾಗುವುದು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕ ರಾಜ್ಯೋ ತ್ಸವ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಗಾಗಿ ಅರ್ಜಿ ಹಾಕು ವುದು ನಿಧಾನವಾಗಿ ಕಡಿಮೆ ಆಗಬೇಕೆಂಬ ಚಿಂತನೆ ಇದೆ. ಸಾಧಕರನ್ನು ಗುರುತಿಸುವ ಪರಂಪರೆ ನಾಡಿನಾದ್ಯಂತ ನಿರ್ಮಾಣವಾಗಬೇಕು. ಎಲೆಯ ಮರೆ, ತೆರೆಯ ಮರೆಯ ಲ್ಲಿರುವ ಸಾಧಕರನ್ನು ಗುರುತಿಸುವ ಯೋಜನೆ ಇದೆ ಎಂದರು.

ರಾಜ್ಯದಲ್ಲಿ ಸಾವಿರಾರು ಕಲಾವಿದರಿದ್ದಾರೆ. ಕೆಲವು ಕಲಾವಿದರು ಮಂತ್ರಿಗಳವರೆಗೆ ಬಂದರೆ, ಇನ್ನೂ ಕೆಲವರು ಅಧಿಕಾರಿಗಳವರೆಗೆ ಬರುತ್ತಾರೆ. ಇನ್ನೂ ಕೆಲವರು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಶಕ್ತಿ ಇಲ್ಲದ ನೂರಾರು ಕಲಾವಿದರು ಗ್ರಾಮೀಣ ಪ್ರದೇಶದಲ್ಲಿ ಉಳಿದಿ ದ್ದಾರೆ. ಹಾಗಾಗಿ ಕಲಾವಿದರ ಡಾಟಾ ಬ್ಯಾಂಕ್ ಹೊಂದ ಬೇಕೆಂಬ ಯೋಜನೆ ಇದೆ. ಈ ವಿವರ ಸಂಗ್ರಹ ಕಾರ್ಯ ಮುಂದಿನ 100 ದಿನಗಳಲ್ಲಿ ಅನುಷ್ಠಾನ ಗೊಳ್ಳಲಿದೆ ಎಂದರು. ಸ್ವಾತಂತ್ರ್ಯದ ಅಮೃತ ಮಹೋ ತ್ಸವ ಚೆನ್ನಾಗಿ ಆಗಬೇಕು. ಸ್ವಾತಂತ್ರ್ಯ ಚಳವಳಿಗೆ ಕರ್ನಾ ಟಕದ ಕೊಡುಗೆ ಎಲ್ಲರಿಗೂ ತಿಳಿಯಬೇಕು. ನೂರಾರು ಜನರ ಬಲಿದಾನ ಆಗಿದ್ದು, ನೂರಾರು ಗ್ರಾಮಗಳು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಶೌರ್ಯ ಪ್ರದರ್ಶನ ಮಾಡಿವೆ. ಇಂಥ ಗ್ರಾಮಗಳನ್ನು ಗುರುತಿಸಿ ಅದನ್ನು ನಾಡಿಗೆ ಪರಿಚಯಿಸಲಾಗುವುದು ಎಂದರು.

ಬೆಳಕು ಯೋಜನೆಗೆ ನಿರಾಕ್ಷೇಪಣಾ ಪತ್ರದ ಅಗತ್ಯ ವಿಲ್ಲ: ಗ್ರಾಪಂ ವ್ಯಾಪ್ತಿಯ ಮನೆಗಳಿಗೆ “ಬೆಳಕು ಯೋಜನೆ” ವಿದ್ಯುತ್ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವ ಅವಶ್ಯಕತೆಯಿಲ್ಲ ಎಂದು ಇಂಧನ ಸಚಿವ ಸುನೀಲ್‍ಕುಮಾರ್ ಹೇಳಿದ್ದಾರೆ.

Translate »