ನೂರಾರು ಕೋಟಿ ಬೆಲೆಬಾಳುವ ಸಾರ್ವಜನಿಕ ಆಸ್ತಿ ರಕ್ಷಣೆಗೆ ಆಗ್ರಹಿಸಿ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ
ಮೈಸೂರು

ನೂರಾರು ಕೋಟಿ ಬೆಲೆಬಾಳುವ ಸಾರ್ವಜನಿಕ ಆಸ್ತಿ ರಕ್ಷಣೆಗೆ ಆಗ್ರಹಿಸಿ ಎಂ.ಜಿ.ರಸ್ತೆ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಪ್ರತಿಭಟನೆ

September 8, 2021

ಮೈಸೂರು, ಸೆ.7(ಆರ್‍ಕೆಬಿ)- ಮೈಸೂ ರಿನ ದೊಡ್ಡಕೆರೆ ಸರ್ವೆ ನಂ.1ರ 145.13 ಎಕರೆ ಸಾರ್ವಜನಿಕ ಆಸ್ತಿಯ ಅಕ್ರಮ ಖಾತೆ ಮಾಡಿ ಅದನ್ನು ಕಬಳಿಸುವ ಯತ್ನದಲ್ಲಿ ಶಾಮೀಲಾಗಿರುವ ನಗರಪಾಲಿಕೆ ಅಧಿಕಾರಿ ಗಳ ಮೇಲೆ ಕಾನೂನು ಕ್ರಮ ಕೈಗೊಂಡು, ಅತಿಕ್ರಮ ತೆರವುಗೊಳಿಸಬೇಕು. ಎಂ.ಜಿ. ರಸ್ತೆ ತರಕಾರಿ ವ್ಯಾಪಾರಸ್ಥರಿಗೆ ಪರ್ಯಾಯ ವಾಗಿ ಫುಟ್‍ಪಾತ್ ಮೇಲೆ ತರಕಾರಿ ವ್ಯಾಪಾರ ಮಾಡುತ್ತಾ ಅಶಾಂತಿ ಸೃಷ್ಟಿಸುತ್ತಿರುವ ದಲ್ಲಾಳಿ ಗಳನ್ನು ತೆರವುಗೊಳಿಸಬೇಕು ಎಂದು ಆಗ್ರ ಹಿಸಿ ಎಂ.ಜಿ.ರಸ್ತೆ ತರಕಾರಿ ವ್ಯಾಪಾರಿಗಳು ಮಂಗಳವಾರ ಮೈಸೂರು ನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿಯ ಮೈಸೂರು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಪ್ರತಿ ಭಟನೆಯ ವೇಳೆ ನಗರಪಾಲಿಕೆ ಅಧಿಕಾರಿ ಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಸರ್ಕಾರಿ ಆಸ್ತಿ ಉಳಿಸಬೇಕು ಎಂದು ಆಗ್ರ ಹಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ದೊಡ್ಡಕೆರೆ ಸರ್ವೆ ನಂ.1ರ 140 ಎಕರೆ ಸರ್ಕಾರಿ ಭೂಮಿ ಉಳಿಸಲು ದಸಂಸ ಅನೇಕ ವರ್ಷಗಳಿಂದ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಆದರೆ ನಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿ ಬೇನಾಮಿ ವ್ಯಕ್ತಿಗೆ ಖಾತೆ ಮಾಡಿ ಕೊಟ್ಟಿದ್ದಾರೆ. ಕೂಡಲೇ ಈ ಖಾತೆ ರದ್ದು ಮಾಡಬೇಕು. ರಸ್ತೆ ಬದಿಯಲ್ಲಿ ಪರ್ಯಾಯ ವಾಗಿ ವ್ಯಾಪಾರ ಮಾಡುತ್ತಾ, ಅಶಾಂತಿ ಮತ್ತು ರಸ್ತೆ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ದಲ್ಲಾಳಿ ವ್ಯಾಪಾರಿಗಳನ್ನು ಸ್ಥಳದಿಂದ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

1924-25ನೇ ಸಾಲಿನ ಗ್ರಾಮ ನಮೂನೆ ಖೇತುವಾರು ಮತ್ತು 2021-22ನೇ ಸಾಲಿನ ಆರ್‍ಟಿಸಿ ಹಾಗೂ ಇತರೆ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ದೊಡ್ಡಕೆರೆ ಎಂದು ದಾಖ ಲಾಗಿರುವ ಸರ್ಕಾರದ ಆಸ್ತಿ, ಸಾರ್ವಜನಿಕ ಆಸ್ತಿ. 145.13 ಎಕರೆ ಪೈಕಿ 1975-76ರ ಸರ್ಕಾರಿ ಆದೇಶ 962 ಜಿಎಂ 57 ಸಂಖ್ಯೆ ಪಿ.ಆರ್. ದಿನಾಂಕ 17-05-1961ರ ಜಿಲ್ಲಾ ಧಿಕಾರಿಗಳ ಅಧಿಕೃತ ಜ್ಞಾಪನ ಪತ್ರದ ಪ್ರಕಾರ ಸ.ನಂ.1ರ 145.13 ಎಕರೆ ಪೈಕಿ 80 ಎಕರೆ ಪ್ರದೇಶವನ್ನು ವಸ್ತು ಪ್ರದರ್ಶನ ಪ್ರಾಧಿ ಕಾರದ ಸುಪರ್ದಿಗೆ ನೀಡಲಾಗಿದೆ. ಉಳಿದ 65.13 ಎಕರೆ ಪೈಕಿ 1.24 ಎಕರೆ ಪ್ರದೇಶ ವನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಎಂ.ಜಿ.ರಸ್ತೆ ನಿರ್ಮಾಣಕ್ಕೆ ಎಂ.ಆರ್.5/93-94ರಲ್ಲಿ ಸ್ವಾಧೀನಪಡಿಸಿಕೊಂಡಿದೆ. ಆದರೆ ಮೈಸೂರು ನಗರದ ಹೃದಯ ಭಾಗ ದಲ್ಲಿರುವ ಸಾವಿರಾರು ಕೋಟಿ ಮೌಲ್ಯದ ಆಸ್ತಿ 63.26 ಎಕರೆ ಜಮೀನು ಸಂಪೂರ್ಣ ವಸ್ತು ಪ್ರದರ್ಶನ ಪ್ರಾಧಿಕಾರದ ಸ್ವಾಧೀನ ದಲ್ಲಿದ್ದರೂ, ರಿಯಲ್ ಎಸ್ಟೇಲ್ ಮಾಫಿಯಾದ ಜೊತೆಗೆ ಶಾಮೀಲಾಗಿರುವ ನಗರಪಾಲಿಕೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ನೌಕರರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಖಾತೆಗಳನ್ನು ಮಾಡಿ ಭೂಗಳ್ಳರಿಗೆ ನೆರ ವಾಗಿದ್ದಾರೆ. ಇದರ ವಿರುದ್ದ 1997ರ ಮೇ 8ರಂದು ನಜರ್‍ಬಾದ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾ ಲಯ ಶಿಕ್ಷೆ ನೀಡಿದೆ. ಆದರೂ ಮೈಸೂರು ನಗರಪಾಲಿಕೆ ಅಧಿಕಾರಿಗಳು 2010ರ ಆ.12ರಂದು ಹಳೆಯ ದಿನಾಂಕ ನಮೂ ದಿಸಿ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ನಕಲಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಈ ದಾಖಲೆ ಸೃಷ್ಟಿಸಿರುವ ನೌಕರರು ಅಧಿಕೃತವಾಗಿ ಇಲಾಖೆಗಳಲ್ಲಿ ಕಾರ್ಯ ನಿರ್ವ ಹಿಸಿದವರಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ ನಗರಪಾಲಿಕೆಯಲ್ಲಿ ಮಾಡಿ ರುವ ನಕಲಿ ಖಾತೆಯನ್ನು ವಜಾ ಮಾಡಿ, ಸರ್ಕಾರದ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ದವರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆ ವಿಧಿಸಬೇಕು. 25 ವರ್ಷಗಳಿಂದ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಎಂ.ಜಿ.ರಸ್ತೆ ತರಕಾರಿ ಮಾರಾಟಗಾರರ ಮೈದಾನದಲ್ಲಿ ಶಿಸ್ತು ಮತ್ತು ಶಾಂತಿಯಿಂದ ತರಕಾರಿ ವ್ಯಾಪಾರ ಮಾಡಿಕೊಂಡು ಬಂದಿ ರುವ ವ್ಯಾಪಾರಸ್ಥರಿಗೆ ಪರ್ಯಾಯವಾಗಿ ಎಂ.ಜಿ.ರಸ್ತೆ ಫುಟ್‍ಪಾತ್‍ನಲ್ಲಿ ವ್ಯಾಪಾರ ಪ್ರಾರಂಭಿಸಿರುವ ದಲ್ಲಾಳಿಗಳನ್ನು ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ಮುಕ್ತ ಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಪಾಲಿಕೆ ಆಯುಕ್ತರೇ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿ ದರು. ಬಳಿಕ ಆಯುಕ್ತರು ನಗರದಲ್ಲಿ ರಾಜ್ಯ ಪಾಲರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವುದರಿಂದ ನಾಳೆ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗು ವುದು ಎಂದು ಉಪ ಆಯುಕ್ತ (ಕಂದಾಯ) ಎನ್.ಎಂ.ಶಶಿಕುಮಾರ್ ನೀಡಿದ ಭರವಸೆ ಮೇರೆಗೆ ಪ್ರತಿ ಭಟನಾಕಾರರು ಪ್ರತಿಭಟನೆಯನ್ನು ತಾತ್ಕಾ ಲಿಕವಾಗಿ ವಾಪಸ್ ಪಡೆದರು.ನಂತರ ಮಾತನಾಡಿದ ಅವರು ಬುಧ ವಾರ ಬೆಳಿಗ್ಗೆ 11 ಗಂಟೆಗೆ ಪಾಲಿಕೆ ಆಯುಕ್ತ ರೊಂದಿಗೆ ಪ್ರತಿಭಟನಾ ತಂಡದ ಐವರು ಪ್ರಮುಖರ ಭೇಟಿಗೆ ಅವಕಾಶವಿದ್ದು, ಅಲ್ಲಿ ನಮ್ಮ ಬೇಡಿಕೆ ಇತ್ಯರ್ಥವಾಗದಿದ್ದರೆ ಪ್ರತಿ ಭಟನೆ ಮತ್ತು ರಸ್ತೆ ತಡೆ ನಡೆಸಲಾಗು ವುದು ಎಂದು ಬೆಟ್ಟಯ್ಯ ಕೋಟೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗ ಸ್ವಾಮಿ, ಎಂ.ಜಿ.ರಸ್ತೆ ತರಕಾರಿ ಮಾರಾಟ ಗಾರರ ಮುಖಂಡರಾದ ನಾಗರಾಜು, ಅಪ್ಸರ್ ಅಹ್ಮದ್, ಮಲ್ಲೇಶ್, ಸಿದ್ದಪ್ಪ, ಎಸ್.ರಾಜಣ್ಣ, ಗುರುಲಿಂಗು, ಗೌರಮ್ಮ, ಸೋಮಣ್ಣ, ಮಹ ದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

Translate »