ಕೋವಿಡ್ ಸಮಯ ಅರಿಸಿನ ಗಣಪ ಉತ್ತಮ: ಹೆಚ್.ವಿ.ರಾಜೀವ್ ಸಲಹೆ
ಮೈಸೂರು

ಕೋವಿಡ್ ಸಮಯ ಅರಿಸಿನ ಗಣಪ ಉತ್ತಮ: ಹೆಚ್.ವಿ.ರಾಜೀವ್ ಸಲಹೆ

September 8, 2021

ಮೈಸೂರು,ಸೆ.7-ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ ಕಚೇರಿ ಆವರಣ ದಲ್ಲಿ ಪರಿಸರ ಸ್ನೇಹಿ ಬಳಗದ ವತಿಯಿಂದ ಏರ್ಪಡಿಸಿದ್ದ ಪರಿಸರ ಸ್ನೇಹಿ ಅರಿಸಿನ ಗಣೇಶ ಅಭಿಯಾನದಲ್ಲಿ ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು.

ಮೈಸೂರು ನಗರ ಮತ್ತು ತಾಲೂಕು ಮಟ್ಟದ ಪರಿಸರ ಸ್ನೇಹಿ ಗಣೇಶೋತ್ಸವ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಕೋವಿಡ್ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಹಬ್ಬದ ಸಂದರ್ಭ ಅರಿಸಿನ ಗಣೇಶ ಮೂರ್ತಿ ತಯಾರಿ ಸಲು ಇಂತಹ ಜಾಗೃತಿ ಅಭಿಯಾನ ಸಹ ಕಾರಿಯಾಗಿದೆ. ಕೋವಿಡ್ ಮಾರ್ಗಸೂಚಿ ಯನ್ವಯ ಈ ಬಾರಿ ವೈರಾಣು ನಿರೋ ಧಕ ಗಣೇಶ ಮೂರ್ತಿಯನ್ನು ಮನೆಯಲ್ಲೇ ಪೂಜಿಸಿದ ನಂತರ ಮನೆಯಲ್ಲೇ ವಿಸರ್ಜಿ ಸುವ ಕುರಿತು ಜನಜಾಗೃತಿ ಮೂಡಿಸು ತ್ತಿರುವುದು ಉತ್ತಮವಾದ ಕಾರ್ಯ ಎಂದರು.
ಪಾಲಿಕೆ ಸದಸ್ಯರಾದ ಶಿವಕುಮಾರ್, ಬಿ.ವಿ.ಮಂಜುನಾಥ್, ಸತ್ಯರಾಜ್, ಮಾಜಿ ಸದಸ್ಯ ಜಗದೀಶ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಜಿ.ಗಿರಿಧರ್, ಮುಡಾ ಸದಸ್ಯೆ ಲಕ್ಷ್ಮಿದೇವಿ, ಜೀವದಾರ ಗಿರೀಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಮಣಿರತ್ನಂ, ರಂಗನಾಥ್ ಹಾಗೂ ಇನ್ನಿತರರು ಹಾಜರಿದ್ದರು.

Translate »