ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ
ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಆಚರಣೆ

September 8, 2021

ಮೈಸೂರು, ಸೆ.7- ಸುತ್ತೂರು ಶ್ರೀಕ್ಷೇತ್ರ ದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಸಾನ್ನಿಧ್ಯದಲ್ಲಿ ಶ್ರಾವಣ ಮಾಸ ಪೂಜಾನುಷ್ಠಾನ ಸಮಾರೋಪ ಹಾಗೂ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 106 ನೆಯ ಜಯಂತಿ ಮಹೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು.

ನುಡಿನಮನ ಮತ್ತು ಸಮಾರೋಪ ಭಾಷಣ ಮಾಡಿದ ಕರ್ನಾಟಕ ಸರ್ಕಾರದ ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, ರಾಜೇಂದ್ರ ಸ್ವಾಮಿಗಳವರು ತ್ರಿವಿಧ ದಾಸೋಹಿಗಳಾಗಿ ದಣಿವರಿಯದ ಕಾಯಕಯೋಗಿಗಳಾಗಿ ಶಾಂತಿ, ಸಾಮರಸ್ಯ, ದಯೆ, ನಿಸ್ವಾರ್ಥತೆ ಯನ್ನು ಬದುಕಿನಲ್ಲಿ ಅಳವಡಿಸಿಕೊಂಡಿ ದ್ದರು. ಶ್ರೀಮಠವು ಇಂದಿಗೂ ಇವುಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರು ತ್ತಿದೆ. ಮಾತೃ ಹೃದಯಿಗಳಾದ ಶ್ರೀಗಳವರು ಕಿರಿಯ ವಯಸ್ಸಿನಲ್ಲಿಯೇ ಮಠದ ಜವಾ ಬ್ದಾರಿಯನ್ನು ಹೊರುವುದರೊಂದಿಗೆ ಅಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶ ದಲ್ಲಿ ಶಿಕ್ಷಣಕ್ಕಾಗಿ ಪರದಾಡುತ್ತಿದ್ದ ವಿದ್ಯಾರ್ಥಿ ಗಳನ್ನು ಕಂಡು ಮರುಕಪಟ್ಟು, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದರು. ಆರ್ಥಿಕ ಸಂಕಷ್ಟದ ನಡುವೆಯೂ ಚಿನ್ನದ ಕರಡಿಗೆ ಅಡವಿಟ್ಟು ವಿದ್ಯಾರ್ಥಿನಿಲಯಗಳನ್ನು ನಡೆಸಿದುದು ಅವರ ತ್ಯಾಗ ಮನೊಭಾವಕ್ಕೆ ಸಾಕ್ಷಿ ಯಾಗಿದೆ ಎಂದರು.

ನುಡಿನಮನ ಸಲ್ಲಿಸಿದ ಮೈಸೂರಿನ ಶ್ರೀ ರಾಜೇಂದ್ರ ಪ್ರಿಂಟರ್ಸ್ ಮಾಲೀಕರು ಹಾಗೂ ಸಂವಹನ ಪ್ರಕಾಶಕ ಡಿ.ಎನ್.ಲೋಕಪ್ಪ ನÀವರು, ಶ್ರೀ ಸುತ್ತೂರು ಮಠ ಮತ್ತು ರಾಜೇಂದ್ರ ಶ್ರೀಗಳು ಇಲ್ಲದಿದ್ದರೆ, ಇಂದು ನಾಡಿನಲ್ಲಿ ಲಕ್ಷಾಂತರ ಜನರು ಅವಿದ್ಯಾವಂತರು, ನಿರುದ್ಯೋಗಿಗಳಾಗಿರುತ್ತಿದ್ದರು ಎಂದರು.

ಕನಕಪುರ ಶ್ರೀ ದೇಗುಲ ಮಠದ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಗಳವರು, ರಾಜೇಂದ್ರ ಶ್ರೀಗಳು ಬಡ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದರು. ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಎಂತಹ ಕಷ್ಟ ಬಂದರೂ ಕೂಡ ಬಂದ ಭಕ್ತರನ್ನು ಪ್ರೀತಿ ವಿಶ್ವಾಸದಿಂದ ಪ್ರಸಾದ ಮಾಡಿಯೇ ಕಳುಹಿಸುತ್ತಿದ್ದರು ಎಂದು ಶ್ರೀಗಳವರ ಸಾರ್ಥಕ ಜೀವನವನ್ನು ಉದಾಹರಣೆಗಳ ಸಹಿತ ವಿವರಿಸಿದರು.
ಚಿಕ್ಕತುಪ್ಪೂರಿನ ಶ್ರೀ ಶಿವಪೂಜಾ ಮಠದ ಶ್ರೀ ಚನ್ನವೀರ ಸ್ವಾಮಿಗಳು ವಚನ ಗಾಯನ ಪ್ರಸ್ತುತಪಡಿಸಿದರು.

ಪರಣಾಮಿಪುರ ಶ್ರೀ ಬಿದರಚೌಕಿ ಮಠದ ವಿದ್ವಾನ್ ಗುರುಸಿದ್ಧ ಸ್ವಾಮಿಗಳು ಹಾಗೂ ಶಿರಮಳ್ಳಿ ಶ್ರೀ ವಿರಕ್ತ ಮಠದ ಶ್ರೀ ಇಮ್ಮಡಿ ಮುರುಗೀ ಸ್ವಾಮಿಗಳು ಶ್ರಾವಣಮಾಸ ಪೂಜಾನುಷ್ಠಾನದ ಅನು ಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನೀಲಕಂಠಸ್ವಾಮಿಮಠ, ಹುಲಿಯೂರು ದುರ್ಗ, ಚುಂಚನಹಳ್ಳಿ ಹಾಗೂ ನವಿ ಲೂರು, ರಾಮೇಗೌಡನಪುರ, ಹೆÀಬ್ಬಣಿ, ಮುಕ್ಕುಂದೂರು ಮೊದಲಾದ ಮಠಗಳ ಶ್ರೀಗಳು ಉಪಸ್ಥಿತರಿದ್ದರು.

Translate »