ಮಕ್ಕಳಿಗೆ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ
News

ಮಕ್ಕಳಿಗೆ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ

August 26, 2021

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ ಮಕ್ಕಳ(12-17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವು ದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ ಎಂದು ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಕ್ಟೋಬರ್‍ನಿಂದ ಜೈಡಸ್ ಕೊರೊನಾ ಲಸಿಕೆ ನೀಡ ಲಾಗುವುದು ಎಂದರು. ವಯಸ್ಕರಿಗೆ ಕೊರೊನಾ ಭೀತಿ ಹೆಚ್ಚಿರುವುದರಿಂದ ಮೊದಲ ಪ್ರಾಶಸ್ತ್ಯ ಅವರಿಗೆ ನೀಡಲಾಗುತ್ತಿದೆ. ನಂತರ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯ ಕ್ರಮ ಹಮ್ಮಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಲಸಿಕಾಕರಣದ ಸಲಹಾ ಸಮಿತಿ ಅಧ್ಯಕ್ಷ ಎನ್.ಕೆ.ಅರೋರಾ ತಿಳಿಸಿದ್ದಾರೆ. ಕೊರೊನಾದಿಂದ ಮಕ್ಕಳಿಗೆ ಇರುವ ಅಪಾಯದ ಮಟ್ಟ ಅತ್ಯಲ್ಪ. ಹೀಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆ ಅಭಿವೃದ್ಧಿಗೊಂಡಾಗ ಅವರಿಗೆ ಲಸಿಕೆ ನೀಡಬಹುದು. ಸದ್ಯ ಮಾರುಕಟ್ಟೆಯಲ್ಲಿ ರುವ ಲಸಿಕೆಗಳು ಯಾವುವೂ ಕೊರೊನಾ ಹರಡುವಿಕೆಯನ್ನು ತಡೆಯುವು ದಿಲ್ಲ. ಕೊರೊನಾ ತಗುಲಿದ ನಂತರ ಆಸ್ಪತ್ರೆಗೆ ದಾಖಲಾಗದಂತೆ, ಸೋಂಕಿತ ಹೆಚ್ಚಿನ ಆರೋಗ್ಯ ಸಮಸ್ಯೆಗೆ ತುತ್ತಾಗದಂತೆ ತಡೆಯುತ್ತದೆ ಎಂದು ಅವರು ಇದೇ ವೇಳೆ ಹೇಳಿದರು.

Translate »