ಗೃಹ ನಿರ್ಮಾಣ ಕಾಯ್ದೆಗೆ ತಿದ್ದುಪಡಿ ಅಗತ್ಯವಿದ್ದರೆ  ಪ್ರಸ್ತಾವನೆ ಸಲ್ಲಿಸಿ: ಉಸ್ತುವಾರಿ ಸಚಿವ ಎಸ್‍ಟಿಎಸ್
ಮೈಸೂರು

ಗೃಹ ನಿರ್ಮಾಣ ಕಾಯ್ದೆಗೆ ತಿದ್ದುಪಡಿ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ: ಉಸ್ತುವಾರಿ ಸಚಿವ ಎಸ್‍ಟಿಎಸ್

August 26, 2021

ಮೈಸೂರು, ಆ.25(ಎಂಕೆ)- ಗೃಹ ನಿರ್ಮಾಣಕ್ಕೆ ಸಂಬಂಧಪಟ್ಟ ಕಾನೂನು ಗಳಲ್ಲಿ ತಿದ್ದುಪಡಿಯ ಅಗತ್ಯವಿದ್ದರೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ. ಗೃಹ ನಿರ್ಮಾಣ ಸಹ ಕಾರ ಸಂಘಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು.

ಮೈಸೂರಿನ ಬನ್ನೂರು ಮುಖ್ಯ ರಸ್ತೆ ಯಲ್ಲಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಭಾಂಗಣದಲ್ಲಿ ಬುಧವಾರ ನಡೆದ ಮೈಸೂರು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘಗಳ ಸಭೆ ನಡೆಸಿದ ಅವರು, ಒಂದೆರಡು ಗೃಹ ನಿರ್ಮಾಣ ಸಂಘಗಳು ಹಣ ದುರುಪಯೋಗ ಮಾಡಿ ಕೊಂಡಿರಬಹುದು. ಆದರೆ ಎಲ್ಲಾ ಸಂಘ ಗಳನ್ನು ಅನುಮಾನದ ದೃಷ್ಟಿಯಲ್ಲಿ ನೋಡ ಬಾರದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಾಗುತ್ತದೆ ಎಂದು ಹೇಳಿದರು.
ನ್ಯಾಯಬದ್ಧವಾಗಿರುವ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ತೊಂದರೆಯಾಗ ಬಾರದು ಎನ್ನುವುದೇ ನನ್ನ ನಿಲುವಾಗಿದೆ. ಬಡಾವಣೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿ ಸಲು ಸೆಪ್ಟೆಂಬರ್ ಅಧಿವೇಶನದ ನಂತರ ಕೆಇಬಿ, ಕೆಐಎಡಿಬಿ, ಪಿಡಬ್ಲ್ಯೂಡಿ ಮತ್ತಿತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಗುಂಪು ಮನೆ ಯೋಜನೆಗೆ ಕೆಲವೆಡೆ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ್ದೇನೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದ ಬಳಿಕ ಪರ-ವಿರೋಧ ಅಭಿಪ್ರಾಯ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತಿತರರು ಉಪಸ್ಥಿತರಿದ್ದರು

Translate »