ಕಡಕೊಳದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪನೆಗೆ ಮನವಿ
ಮೈಸೂರು

ಕಡಕೊಳದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪನೆಗೆ ಮನವಿ

August 26, 2021

ಮೈಸೂರು, ಆ.25 (ಪಿಎಂ)- ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕಡಕೊಳ ಗ್ರಾಮದಲ್ಲಿ ಕೆಪಿಟಿಸಿಎಲ್‍ನಿಂದ 400/220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸುವಂತೆ, ಖಾಸಗಿ ಬಡಾವಣೆ, ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿ ಬೀದಿ ದೀಪಗಳ ವಿದ್ಯುತ್ ಶುಲ್ಕ ಪಾವತಿಗೆ 6 ತಿಂಗಳು ಕಾಲಾವಕಾಶ ಕೋರಿ ಹಾಗೂ ಕಡಕೊಳ ಪಪಂಗೆ ಹೊಸ ಕಚೇರಿ ನಿರ್ಮಾಣಕ್ಕೆ ಕೆಪಿಟಿಸಿಎಲ್ ಸ್ವಾಧೀನದಲ್ಲಿ ರುವ ನಿವೇಶನ ಒದಗಿಸುವಂತೆ ಕೋರಿ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ಬುಧವಾರ ಪ್ರತ್ಯೇಕ ಮನವಿ ಸಲ್ಲಿಸಿದರು.

ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಸಚಿವರನ್ನು ಬುಧವಾರ ಭೇಟಿಯಾದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕಡ ಕೊಳ ಗ್ರಾಮದಲ್ಲಿ ಕೆಪಿಟಿಸಿಎಲ್‍ಗೆ ಸೇರಿದ 118 ಎಕರೆ ಜಮೀನು ಇದ್ದು, 220/66/11 ಕೆವಿ ವಿದ್ಯುತ್ ಉಪ ಕೇಂದ್ರ ಚಾಲನೆ ಯಲ್ಲಿದೆ. 220 ಕೆವಿ ಸ್ವೀಕರಣ ಕೇಂದ್ರ ಗಳಿಗೆ ವಿದ್ಯುತ್ ಒತ್ತಡ ತಗ್ಗಿಸಿ, ಗ್ರಾಹಕರಿಗೆ ಅಡಚಣೆರಹಿತ ಗುಣಮಟ್ಟದ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಮೈಸೂರು ಜಿಲ್ಲೆಯಲ್ಲಿ ವಿದ್ಯುತ್ ಜಾಲವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸದೃಢಪಡಿಸಬೇಕಿದೆ. ಹೀಗಾಗಿ ಕಡಕೊಳದ 220/66/11 ಕೆವಿ ವಿದ್ಯುತ್ ಉಪಕೇಂದ್ರದ ಪಕ್ಕದಲ್ಲಿಯೇ 400/220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸಿ ದರೆ, ಮೈಸೂರು ನಗರ, ಜಿಲ್ಲೆ ವ್ಯಾಪ್ತಿ ಹಾಗೂ ಪಕ್ಕದ ಜಿಲ್ಲೆಗಳಿಗೂ ಹೆಚ್ಚಿನ ಗುಣ ಮಟ್ಟದ ವಿದ್ಯುತ್ ಸರಬರಾಜಿಗೆ ಅನು ಕೂಲವಾಗಲಿದೆ. ಇದಕ್ಕಾಗಿ ಚಿಕ್ಕನಾಯಕನ ಹಳ್ಳಿಯಿಂದ 182 ಕಿ.ಮೀ.ಗಳಷ್ಟು ದೂರ 400 ಕೆವಿ ಮಾರ್ಗ ನಿರ್ಮಿಸಬೇಕಾಗು ತ್ತದೆ. ಈ ಒಂದು ಬೃಹತ್ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ಸಾವಿರ ಕೋಟಿ ರೂ. ವೆಚ್ಚ ತಗಲುವ ಅಂದಾಜಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬೃಹತ್ ಯೋಜನೆಯಿಂದ ಹಾಲಿ ಇರುವ 400/220 ಕೆವಿ ಬಸ್ತೀಪುರ ವಿದ್ಯುತ್ ಸ್ವೀಕರಣಾ ಕೇಂದ್ರದ ಮೇಲಿನ ಒತ್ತಡವನ್ನೂ ತಗ್ಗಿಸಬಹುದು. ಜೊತೆಗೆ ವಿದ್ಯುತ್ ಜಾಲದಲ್ಲಿನ ಸೋರಿಕೆ ತಪ್ಪಿಸಿ, ಅಡಚಣೆರಹಿತ ಗುಣಮಟ್ಟದ ವಿದ್ಯುತ್ ಅನ್ನು ಗ್ರಾಹಕರಿಗೆ ಒದಗಿಸಬಹುದು. ಆದ್ದ ರಿಂದ ಕಡಕೊಳ ಗ್ರಾಮದಲ್ಲಿ ಕೆಪಿಟಿ ಸಿಎಲ್ ವತಿಯಿಂದ 400/220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸು ವಂತೆ ಕೋರುತ್ತೇನೆ ಎಂದು ಮನವಿ ಯಲ್ಲಿ ವಿನಂತಿಸಿದ್ದಾರೆ.

ಕಾಲಾವಕಾಶ ನೀಡಿ: ಮೈಸೂರು ತಾಲೂಕಿನಲ್ಲಿ ಇತ್ತೀಚೆಗೆ ಕೆಲವು ಪಂಚಾ ಯಿತಿಗಳು ನಗರಸಭೆ ಮತ್ತು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದು, ಸದರಿ ನಗರಸಭೆ ಮತ್ತು ಪಟ್ಟಣ ಪಂಚಾ ಯಿತಿಗಳ ವ್ಯಾಪ್ತಿಯ ಹಾಗೂ ಖಾಸಗಿ ಬಡಾವಣೆಗಳ ಬೀದಿದೀಪಗಳ, ಕೊಳವೆ ಬಾವಿಗಳ ಶುಲ್ಕ ಪಾವತಿಸಲು 6 ತಿಂಗಳು ಕಾಲಾವಕಾಶ ನೀಡಬೇಕೆಂದು ಜಿಟಿಡಿ ಕೋರಿದ್ದಾರೆ. ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಸೇರಿದಂತೆ ಸೆಸ್ಕ್ ಮತ್ತು ಕೆಪಿಸಿ ಟಿಎಲ್ ಅಧಿಕಾರಿಗಳು ಹಾಜರಿದ್ದರು.

Translate »