ಮುಂದುವರೆದ `ಎನ್‍ಟಿಎಂ ಶಾಲೆ ಉಳಿಸಿ’  ಹೋರಾಟಕ್ಕೆ ಎಐಡಿಎಸ್‍ಓ ಸಂಘಟನೆ ಬೆಂಬಲ
ಮೈಸೂರು

ಮುಂದುವರೆದ `ಎನ್‍ಟಿಎಂ ಶಾಲೆ ಉಳಿಸಿ’ ಹೋರಾಟಕ್ಕೆ ಎಐಡಿಎಸ್‍ಓ ಸಂಘಟನೆ ಬೆಂಬಲ

August 26, 2021

ಮೈಸೂರು,ಆ.25(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬಹುದೆಂಬ ಜಿಲ್ಲಾಡಳಿತದ ವರದಿಯಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಶಾಲೆ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಈ ಹಿಂದೆ ಜಿಲ್ಲಾಧಿಕಾರಿ ಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿ ಶೀಲಿಸಿ ಶಾಲಾ ಜಾಗವನ್ನು ಹೊರತು ಪಡಿಸಿ, ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಹುದೆಂದು ವರದಿ ನೀಡಿದ್ದಾರೆ. ಅದರಂತೆಯೇ ಸರ್ಕಾರ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಅಧ್ಯಕ್ಷ ಸುಭಾಷ್ ಮಾತ ನಾಡಿ, ವಿವೇಕಾನಂದರು ಉಳಿದುಕೊಂಡಿ ದ್ದರು ಎಂಬ ಕಾರಣಕ್ಕೆ ಸ್ಮಾರಕ ನಿರ್ಮಿಸು ವುದು ಸರಿಯಲ್ಲ. ಇದು ವಿವೇಕಾನಂದರ ಆಶಯಕ್ಕೆ ವಿರುದ್ಧವಾಗುತ್ತದೆ. ವಿವೇಕಾ ನಂದರು ಕೇವಲ ಧಾರ್ಮಿಕ ಸುಧಾರಣೆಯ ವ್ಯಕ್ತಿ ಮಾತ್ರವಲ್ಲ. ಅವರು ಸಮಾಜ ಸುಧಾ ರಕರು ಹೌದು. ಹಾಗಾಗಿ ಈ ಸರ್ಕಾರಿ ಶಾಲೆಯನ್ನು ಉಳಿಸಿ, ಉನ್ನತೀಕರಿಸಬೇಕು. ಆಗ ಮಾತ್ರ ವಿವೇಕಾನಂದರಿಗೆ ನಿಜವಾದ ಗೌರವ ಸಲ್ಲುತ್ತದೆ ಎಂದು ಹೇಳಿದರು.

ಮಾಜಿ ಮೇಯರ್ ಪುರುಷೋತ್ತಮ್, ಮುಖಂಡ ಮೋಹನ್‍ಕುಮಾರ್‍ಗೌಡ, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಆಸಿಯಾ ಬೇಗಮ್, ಪದಾಧಿಕಾರಿಗಳಾದ ಚಂದ್ರು, ರಾಜೇಶ್, ಪ್ರಶಾಂತಿ, ಚೈತ್ರ, ವಿದ್ಯಾರ್ಥಿ ಗಳಾದ ಲಿಖಿತ್, ನಿರಂಜನ್, ಸೇವಂತ್, ಅಭಿಷೇಕ್ ಮೋಹನ್ ಪಾಲ್ಗೊಂಡಿದ್ದರು.

Translate »