ಗಣೇಶೋತ್ಸವಕ್ಕೆ ಅಸ್ತು
News

ಗಣೇಶೋತ್ಸವಕ್ಕೆ ಅಸ್ತು

September 6, 2021

ಬೆಂಗಳೂರು,ಸೆ.5-ರಾಜ್ಯ ಸರ್ಕಾರವು ಸೆ.10ರಂದು ನಡೆಯಲಿರುವ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ.
ಇಂದು ಬೆಳಗ್ಗೆ ತಜ್ಞರ ಸಭೆ ನಡೆಸಿದ ಮುಖ್ಯಮಂತ್ರಿ ಗಳು, ಕೆಲವು ಷರತ್ತುಗಳೊಂದಿಗೆ ಸರಳವಾಗಿ ಗಣೇಶೋ ತ್ಸವ ಆಚರಿಸಲು ಅವ ಕಾಶ ಕಲ್ಪಿಸಿದ್ದು, ಈ ಸಂಬಂಧ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ.

ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್, ಸೆ.9ರಂದು ನಡೆಯ ಲಿರುವ ಗೌರಿ ಹಬ್ಬ ಮತ್ತು ಸೆಪ್ಟೆಂಬರ್ 10ರಂದು ನಡೆಯಲಿರುವ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ಅವಕಾಶ ಕಲ್ಪಿಸಲಾಗಿದೆ. ಗಣೇಶ ಮೂರ್ತಿ ಸ್ಥಾಪಿಸುವವರು 5 ದಿನಗಳು ಮಾತ್ರ ಮೂರ್ತಿ ಯನ್ನು ಇಡಲು ಅನುಮತಿ ನೀಡಲಾಗಿದೆ ಎಂದರು. ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿಪೂರ್ವಕ ವಾಗಿ ದೇವಸ್ಥಾನದ ಒಳಗೆ, ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಸರ್ಕಾರಿ ಅಥವಾ ಖಾಸಗಿ ಬಯಲು ಪ್ರದೇಶದಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬಹುದಾಗಿದೆ ಎಂದು ತಿಳಿಸಿದರು.

ಗಣೇಶೋತ್ಸವ ಸಮಿತಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಪೂರ್ವಾ ನುಮತಿ ಪಡೆಯಬೇಕು. ನಗರ ಪ್ರದೇಶದಲ್ಲಿ ವಾರ್ಡ್‍ಗೆ ಒಂದು ಗಣೇಶ ಮೂರ್ತಿಯನ್ನು ಸ್ಥಾಪಿಸಲು ಮಾತ್ರ ಅವಕಾಶವಿದ್ದು, ಗರಿಷ್ಠ 5 ದಿನ ಮಾತ್ರ ಮೂರ್ತಿಯನ್ನು ಇಡಬಹುದಾಗಿದೆ ಎಂದು ಅವರು ಹೇಳಿದರು.

ಗಣೇಶ ಮೂರ್ತಿ ಸ್ಥಾಪಿಸುವ ಸ್ಥಳದಲ್ಲಿ ಗರಿಷ್ಠ 50ಘಿ50 ಅಳತೆಯ ಪೆಂಡಾಲ್ ಮಾತ್ರ ಹಾಕ ಬಹುದು. ಈ ಆವರಣದಲ್ಲಿ ಒಮ್ಮೆಲೇ 20ಕ್ಕಿಂತ ಹೆಚ್ಚು ಭಕ್ತಾದಿಗಳು ಸೇರು ವಂತಿಲ್ಲ. ಗಣೇಶ ಆಚರಣೆ ಆಯೋ ಜಕರು ಕೊರೊನಾ ನೆಗೆಟಿವ್ ರಿಪೋರ್ಟ್ ಮತ್ತು ಲಸಿಕೆ ಪಡೆದಿ ರುವ ಪ್ರಮಾಣ ಪತ್ರವನ್ನು ಕಡ್ಡಾಯ ವಾಗಿ ಹೊಂದಿರಬೇಕು. ಗಣೇಶ ಮೂರ್ತಿ ಇಟ್ಟಿರುವ ಸ್ಥಳಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಆಯೋಜಕರು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಸಾರ್ವಜನಿಕರು ಹಾಗೂ ಸಂಚಾ ರಕ್ಕೆ ಅಡ್ಡಿಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕøತಿಕ ಹಾಗೂ ಮನರಂಜನೆ ಮತ್ತು ಡಿಜೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿ ಎತ್ತರ 4 ಅಡಿ ಮೀರಬಾರದು ಹಾಗೂ ಮನೆಯೊಳಗೆ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಎತ್ತರ 2 ಅಡಿ ಮೀರುವಂತಿಲ್ಲ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆ ನಡೆಸುವಂತಿಲ್ಲ. ಮನೆ ಗಳಲ್ಲಿ ಸ್ಥಾಪಿಸುವ ಮೂರ್ತಿಗಳನ್ನು

ಮನೆಯಲ್ಲಿಯೇ ವಿಸರ್ಜಿಸುವುದು. ಸರ್ಕಾರಿ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಕನಿಷ್ಠ ಜನಸಂಖ್ಯೆಯೊಂದಿಗೆ ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿರುವ ಹೊಂಡ, ಮೊಬೈಲ್ ಟ್ಯಾಂಕರ್ ಅಥವಾ ಕೃತಕ ವಿಸರ್ಜನಾ ಟ್ಯಾಂಕ್‍ಗಳಲ್ಲಿ ಮಾತ್ರ ವಿಸರ್ಜಿಸಬಹುದು. ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ ಅಥವಾ ಸಾರ್ವ ಜನಿಕ ಸ್ಥಳಗಳಲ್ಲಿ ಪ್ರತಿ ನಿತ್ಯ ಸ್ಯಾನಿ ಟೈಸೇಷನ್ ಮಾಡಬೇಕು. ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ಭಕ್ತಾದಿಗಳು ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಗುರುತು ಗಳನ್ನು ಹಾಕಬೇಕು ಹಾಗೂ ಅದನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ಮಾರ್ಗಸೂಚಿ ಯಲ್ಲಿ ತಿಳಿಸಲಾಗಿದೆ.

Translate »