ಇಂದು 36ನೇ ವಾರ್ಡ್  ಉಪ ಚುನಾವಣೆ ಮತ ಎಣಿಕೆ
ಮೈಸೂರು

ಇಂದು 36ನೇ ವಾರ್ಡ್ ಉಪ ಚುನಾವಣೆ ಮತ ಎಣಿಕೆ

September 6, 2021

ಮೈಸೂರು,ಸೆ.5(ಎಂಟಿವೈ)-ಮೈಸೂರು ಮಹಾನಗರ ಪಾಲಿಕೆಯ 36ನೇ ವಾರ್ಡ್‍ಗೆ ನಡೆದ ಉಪಚುನಾವಣೆಯ ಮತ ಎಣಿಕಾ ಕಾರ್ಯ ನಡೆಯಲಿದ್ದು, ನಾಳೆ (ಸೋಮ ವಾರ) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 10 ಗಂಟೆಯೊಳಗೆ ಫಲಿತಾಂಶ ಪ್ರಕಟ ವಾಗಲಿದೆ. ಉಪಚುನಾವಣೆಯನ್ನು ಪ್ರತಿಷ್ಠೆ ಯಾಗಿ ಪರಿಗಣಿಸಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮಹಾರಾಜ ಸಂಸ್ಕøತ ಪಾಠಶಾಲೆಯಲ್ಲಿ ಮತ ಎಣಿಕಾ ಕಾರ್ಯ ನಡೆಯಲಿದ್ದು, ಇದಕ್ಕಾಗಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಚುನಾವಣಾಧಿ ಕಾರಿ ಎಂ.ಕಾರ್ತಿಕ್, ಉಪಚುನಾವಣಾಧಿಕಾರಿ ಪ್ರಸಾದ್ ನೇತೃತ್ವದಲ್ಲಿ ಮತ ಎಣಿಕಾ ಕಾರ್ಯಕ್ಕೆ 10 ಮಂದಿ ಸಿಬ್ಬಂದಿಯನ್ನಷ್ಟೇ ನಿಯೋಜಿಸಲಾ ಗಿದೆ. 36ನೇ ವಾರ್ಡ್‍ನಲ್ಲಿ 11 ಮತಗಟ್ಟೆ ಮಾತ್ರ ಇದ್ದುದರಿಂದ ಕೇವಲ 11 ಮತಯಂತ್ರ ಮಾತ್ರ ಇದೆ. ಚುನಾವಣಾ ಕಣದಲ್ಲಿ ಮೂವರು ಅಭ್ಯರ್ಥಿಗಳು ಮಾತ್ರ ಇರುವುದ ರಿಂದ ಮತ ಎಣಿಕಾ ಕೊಠಡಿ ಪ್ರವೇಶಕ್ಕೆ ಮೂರು ಪಕ್ಷಗಳ
ಅಭ್ಯರ್ಥಿಗಳ ತಲಾ ಒಬ್ಬೊಬ್ಬರು ಏಜೆಂಟರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಬೇರೆ ಯಾರಿಗೂ ಎಣಿಕಾ ಕೇಂದ್ರದ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮತ ಎಣಿಕಾ ಕಾರ್ಯ 9 ಗಂಟೆಯೊಳಗೆ ಪೂರ್ಣಗೊಳ್ಳಲಿದ್ದು, 10 ಗಂಟೆಯೊಳಗೆ ನೂತನ ಪಾಲಿಕೆ ಸದಸ್ಯರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಕಳೆದ ಚುನಾವಣೆಯಲ್ಲಿ ಆದಾಯ ಗಳಿಕೆ ಮಾಹಿತಿ ತಪ್ಪು ನೀಡಿದ್ದರಿಂದ ನ್ಯಾಯಾಲಯ ಮಾಜಿ ಮೇಯರ್ ರುಕ್ಮಿಣಿ ಮಾದೇ ಗೌಡ ಅವರ ಪಾಲಿಕೆ ಸದಸ್ಯತ್ವ ಅಸಿಂಧುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 3ರಂದು 36ನೇ ವಾರ್ಡ್‍ಗೆ ಉಪಚುನಾವಣೆ ನಡೆದಿತ್ತು. ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಯಲ್ಲಿ 5288 ಪುರುಷರು, 5402 ಮಹಿಳೆಯರು ಹಾಗೂ 3 ತೃತೀಯ ಲಿಂಗಿಗಳು ಸೇರಿದಂತೆ 10693 ಮತದಾರರಿದ್ದರು. ಆದರೆ ಉಪಚುನಾವಣೆಯಲ್ಲಿ ಶೇ.64.49ರಷ್ಟು ಮತದಾನ ನಡೆದಿತ್ತು.

3427 ಪುರುಷರು, 3469 ಮಹಿಳೆಯರು ಸೇರಿದಂತೆ 6869 ಮಂದಿ 11 ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು. ಮತಗಟ್ಟೆ ಯಲ್ಲಿ ನಡೆದ ಮತದಾನದದ ಅಂಕಿ ಅಂಶದೊಂದಿಗೆ ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡಿರುವ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವು ನಮ್ಮದೇ ಎಂದು ಬೀಗುತ್ತಿದ್ದಾರೆ. ಆದರೆ ಮತದಾರರ ಯಾರಿಗೆ ಆಶೀರ್ವಾದ ಮಾಡಿದ್ದಾನೆ ಎಂದು ತಿಳಿದು ಬರಲಿದೆ.

Translate »