ಮೈಸೂರಿನ ಎಂ.ಪ್ರಶಾಂತ್ ಭಾರತೀಯ ವಾಯುಪಡೆಗೆ ಆಯ್ಕೆ
ಮೈಸೂರು

ಮೈಸೂರಿನ ಎಂ.ಪ್ರಶಾಂತ್ ಭಾರತೀಯ ವಾಯುಪಡೆಗೆ ಆಯ್ಕೆ

September 5, 2021

ಮೈಸೂರು, ಸೆ.4- ಭಾರತೀಯ ವಾಯುಪಡೆಯ ಪ್ರಥಮ ದರ್ಜೆ (ಮೀಟರಾಲಜಿ) ಆಫೀಸರ್ ಆಗಿ ಮೈಸೂರಿನ ಎಂ.ಟೆಕ್ ಪದವೀಧರ ಎಂ.ಪ್ರಶಾಂತ್ ಆಯ್ಕೆಯಾಗಿದ್ದಾರೆ. ಇವರು ಹೈದರಾಬಾದ್‍ನಲ್ಲಿರುವ ಇಂಡಿಯನ್ ಏರ್‍ಫೋರ್ಸ್ ಅಕಾಡೆಮಿಗೆ ತರಬೇತಿಗೆ ಸೆ.5ರ ಭಾನುವಾರ ತೆರಳುತ್ತಿದ್ದಾರೆ.

ಪ್ರಶಾಂತ್ ಬೆಂಗಳೂರಿನ ಆಚಾರ್ಯ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯ ರಿಂಗ್ ಪದವಿ ಪಡೆದಿದ್ದು, ಪಂಜಾಬಿನ ಲವ್ಲಿ ಪ್ರೊಫೆಷ ನಲ್ ವಿಶ್ವವಿದ್ಯಾನಿಲಯದಲ್ಲಿ ಎಂ.ಟೆಕ್ ಪದವಿ ಗಳಿಸಿ ದ್ದಾರೆ. ಮೈಸೂರಿನ 2 ಎಎಫ್‍ಎಸ್‍ಬಿಯಿಂದ ಇಂಡಿಯನ್ ಏರ್‍ಫೋರ್ಸ್‍ಗೆ ಎಂಇಟಿ (ಮೀಟರಾಲಜಿ) ಅಧಿಕಾರಿ ಯಾಗಿ ನೇಮಕಗೊಳ್ಳುವಲ್ಲಿ ಆರನೇ ಪ್ರಯತ್ನದಲ್ಲಿ (3 ಎಸ್‍ಓ ಮತ್ತು 2 ಸಿಓ) ಯಶಸ್ವಿಯಾಗಿದ್ದಾರೆ.

ನನ್ನ ಜೀವನದುದ್ದಕ್ಕೂ ಸಶಸ್ತ್ರ ಪಡೆ ಸಿಬ್ಬಂದಿಗೆ ವಿಶೇಷ ಗೌರವ ಸಲ್ಲಿಸುತ್ತಾ ಬಂದಿದ್ದೇನೆ. ಆರಂಭದಲ್ಲಿ ಐಎಎಫ್ ಸೇರುವುದನ್ನು ಗಂಭೀರವಾಗಿ ತೆಗೆದುಕೊಳ್ಳ ದಿದ್ದರೂ, ಈ ಒಂದು ನಿರ್ದಿಷ್ಟ ಭಾವನೆ ಸಶಸ್ತ್ರ ಪಡೆಯನ್ನು ಸೇರಲು ಸ್ಫೂರ್ತಿ ತುಂಬಿತು. ನಮ್ಮ ತರಗತಿ ಯಿಂದ ಇನ್ಫೋಸಿಸ್‍ಗೆ ಸೇರಲು ನನ್ನ ಹೆಸರು ಶಾರ್ಟ್ ಲಿಸ್ಟ್‍ನಲ್ಲಿ ಸೇರ್ಪಡೆಯಾಯಿತು. ಆದರೆ ದಾಖಲಾತಿಗಳ ಪ್ರಕ್ರಿಯೆ ವೇಳೆ ತಿರಸ್ಕರಿಸಲಾಯಿತು. ಕಾರಣ ನಾನು 7ನೇ ಸೆಮಿಸ್ಟರ್‍ನಲ್ಲಿ ಬ್ಯಾಕ್‍ಲಾಗ್ ಆಗಿದ್ದೆ.

ನಾನು ಉತ್ತಮ ಕ್ರೀಡಾಪಟುವಾಗಿ, ಕಾಲೇಜನ್ನು ಪ್ರತಿ ನಿಧಿಸಿದ್ದೆ. ಕ್ರಿಕೆಟ್, ಟೇಬಲ್ ಟೆನ್ನಿಸ್, ಬೇಸ್‍ಬಾಲ್‍ನಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಹಂತದ ಸ್ಪರ್ಧೆಗಳಲ್ಲಿ ಭಾಗ ವಹಿಸಿದ್ದೆ. ಅಲ್ಲದೆ ಎನ್‍ಸಿಸಿಗೂ ಕೂಡ ಜ್ಯೂನಿಯರ್ ಅಂಡರ್ ಆಫೀಸರ್ ಆಗಿ ಸೇರಿದ್ದು, 2 ಬೇಸಿಕ್ ಕ್ಯಾಂಪ್ಸ್ ಗಳಲ್ಲೂ ಭಾಗವಹಿಸಿ, `ಸಿ’ ಸರ್ಟಿಫಿಕೇಟ್ ಪಡೆದಿದ್ದೇನೆ.

ಅಂತಿಮ ಸೆಮಿಸ್ಟರ್ ಪರೀಕ್ಷೆ ವೇಳೆ ಎಎಫ್‍ಸಿಎಟಿ ಮತ್ತು ಸಿಡಿಎಸ್ ಸಶಸ್ತ್ರ ಪಡೆ ಪರೀಕ್ಷೆ ತೆಗೆದುಕೊಳ್ಳಲು ತಯಾರಿ ನಡೆಸಿದೆ. ಕ್ರೀಡಾ ಕೋಟಾದಡಿಯಲ್ಲಿ ನನಗೆ ಎಲ್‍ಪಿಯು ನಲ್ಲಿ ಉಚಿತವಾಗಿ ಸೀಟು ದೊರೆಯಿತು. ಬಳಿಕ ಎಸ್‍ಎಸ್‍ಬಿ, ಎಂಇಟಿ, ಎಸ್‍ಎಸ್‍ಸಿ ಟೆಕ್, ಎಸ್‍ಎಸ್‍ಸಿಎನ್‍ಸಿಸಿ ಮತ್ತು ಟಿಜಿಸಿ ಪರೀಕ್ಷೆ ತೆಗೆದುಕೊಳ್ಳಲೂ ತಯಾರಿ ಆರಂಭಿಸಿದೆ ಎಂದು `ಮೈಸೂರು ಮಿತ್ರ’ನಿಗೆ ವಿವರಿಸಿದರು.

Translate »