ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ
ಮೈಸೂರು

ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ

October 14, 2022

ಮೈಸೂರು ಜಿಲ್ಲೆಯ ತಿ.ನರಸೀಪುರ, ಸರಗೂರು ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಜಾನುವಾರು ಗಳಲ್ಲಿ ಚರ್ಮಗಂಟು ರೋಗ(ಐumಠಿಥಿ sಞiಟಿ ಜiseಚಿse) ಕಾಣಿಸಿಕೊಂಡಿದ್ದು, ಅದು ವ್ಯಾಪಕವಾಗಿ ಹರ ಡುವ ಸಾಧ್ಯತೆ ಇರುತ್ತದೆ. ರೋಗ ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಸದರಿ ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಜಾನುವಾರು ಸಂತೆ ಮತ್ತು ಸಾಗಾಣಿಕೆಗೆ ಸಂಪೂರ್ಣವಾಗಿ ನಿಷೇಧ ಹೇರುವುದು ಅತ್ಯವಶ್ಯವಾಗಿದ್ದು, ಈ ಸಂಬಂಧ ಆದೇಶ ನೀಡುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆ ಹಾಗೂ ಸಾಗಾಣಿಕೆ ಯನ್ನು ತಾತ್ಕಾಲಿಕವಾಗಿ ಅ.11ರಿಂದ ಡಿ.10ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.

ಮೈಸೂರು, ಅ.13(ಎಸ್‍ಬಿಡಿ)- ಜಾನುವಾರುಗಳಲ್ಲಿ ಚರ್ಮಗಂಟು ರೋಗ ಎಲ್ಲೆಡೆ ಉಲ್ಬಣಿಸಿದ್ದು, ಮೈಸೂರು ಜಿಲ್ಲೆಯಲ್ಲಿ ಈವರೆಗೆ 87 ಪ್ರಕರಣ ಪತ್ತೆಯಾಗಿವೆ.

ಮೈಸೂರು ತಾಲೂಕಿನ ಕೆಲ ಭಾಗ, ಕೆ.ಆರ್.ನಗರ, ಸರ ಗೂರು ಹಾಗೂ ತಿ.ನರಸೀಪುರ ತಾಲೂಕುಗಳಲ್ಲಿ ಚರ್ಮ ಗಂಟು ರೋಗ ಪತ್ತೆಯಾಗಿದ್ದು, ಉಳಿದ ತಾಲೂಕುಗಳಲ್ಲಿ ಈವರೆಗೆ ವರದಿಯಾಗಿಲ್ಲ. ಈ ರೋಗದಿಂದ ಕೆ.ಆರ್.ನಗರ ತಾಲೂಕಿನಲ್ಲಿ ಒಂದು ಹಸು ಸಾವನ್ನಪ್ಪಿದೆ. ರೋಗದ ತೀವ್ರತೆ ಹೆಚ್ಚಿರುವ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ ರೋಗ ನಿಯಂತ್ರಣದಲ್ಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಷಡಕ್ಷರಿ ಮೂರ್ತಿ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಲಸಿಕೆ-ಚಿಕಿತ್ಸೆ: ಚರ್ಮಗಂಟು ರೋಗದಿಂದ ಉತ್ತರ ಭಾರತದಲ್ಲಿ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿವೆ. ಆದರೆ ಮುಂಜಾಗ್ರತಾ ಕ್ರಮ, ಚಿಕಿತ್ಸೆ ಹಾಗೂ ಆರೈಕೆಯಿಂದ ಜಾನುವಾರುಗಳ ಜೀವರಕ್ಷಣೆ ಮಾಡಬಹುದು. ಈ ಹಿನ್ನೆಲೆ ಯಲ್ಲಿ ಚರ್ಮಗಂಟು ರೋಗಕ್ಕೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಜಾನುವಾರುಗಳಿಗೆ ಲಸಿಕೆ ನೀಡಲಾಗು ವುದು. ಈಗಾಗಲೇ ನಮ್ಮ ತಂಡ ಕೆ.ಆರ್.ನಗರ ತಾಲೂಕಿ ನಲ್ಲಿ ಲಸಿಕೆ ಕಾರ್ಯ ನಡೆಸುತ್ತಿದ್ದು, ಆದ್ಯತೆ ಮೇರೆಗೆ ಮುಂದುವರೆಸಲಾಗುತ್ತದೆ. ಪ್ರಕರಣ ಕಾಣಿಸಿಕೊಂಡ ಸುತ್ತ ಲಿನ 5 ಕಿ.ಮೀ. ಪ್ರದೇಶದ ಎಲ್ಲಾ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತಿದೆ. ರೋಗಕ್ಕೆ ತುತ್ತಾದ ಜಾನುವಾರುವಿಗೆ ಸೂಕ್ತ ಚಿಕಿತ್ಸೆಯನ್ನು ಇಲಾಖೆಯಿಂದಲೇ ನೀಡಲಾಗುತ್ತದೆ ಎಂದು ಡಾ.ಷಡಕ್ಷರಿ ಮೂರ್ತಿ ಹೇಳಿದ್ದಾರೆ.

ಪಾಲಕರ ಜವಾಬ್ದಾರಿ: ಚರ್ಮಗಂಟು ರೋಗ ನಿಯಂ ತ್ರಿಸುವಲ್ಲಿ ಇಲಾಖೆ ಜೊತೆಗೆ ಜಾನುವಾರು ಪಾಲಕರ ಸಹ ಕಾರವೂ ಬಹಳ ಮುಖ್ಯವಾಗಿದೆ. ಲಸಿಕೆ ಹಾಕಲು ಬಂದಾಗ ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸ ಬೇಕು. ಚರ್ಮಗಂಟು ರೋಗಕ್ಕೆ ತುತ್ತಾದ ಜಾನುವಾರು ವನ್ನು ಪ್ರತ್ಯೇಕವಾಗಿಟ್ಟು ಜೋಪಾನ ಮಾಡಬೇಕು. ಆ ಜಾನು ವಾರು ಬಳಸಿದ ಬಕೆಟ್, ನೀರು, ಹುಲ್ಲನ್ನು ಬೇರೆ ಜಾನು ವಾರುಗಳಿಗೆ ನೀಡಬಾರದು. ಹೊರಗಡೆ ಮೇಯಲು ಬಿಡದೆ ಮನೆಯಲ್ಲೇ ಆರೈಕೆ ಮಾಡಬೇಕು. ಕಾಲುವೆ, ಕೆರೆ-ಕಟ್ಟೆಯಲ್ಲಿ ಅವುಗಳಿಗೆ ನೀರು ಕುಡಿಸಿದರೆ ಇತರೆ ಜಾನುವಾರುಗಳಿಗೆ ವ್ಯಾಪಕವಾಗಿ ರೋಗ ಹರಡುತ್ತದೆ. ನಿತ್ಯ ಚಿಕಿತ್ಸೆ ನೀಡಿದರೆ 8-10 ದಿನಗಳಲ್ಲಿ ಗುಣಮುಖವಾಗುತ್ತದೆ. ಆವರೆಗೆ ಜಾನು ವಾರು ಪಾಲಕರು ಎಚ್ಚರ ವಹಿಸಬೇಕು. ಶುಂಠಿ, ಬೆಲ್ಲ, ಬೆಳ್ಳುಳ್ಳಿ, ಜೀರಿಗೆ, ಕರಿಮೆಣಸು ಕುದಿಸಿ ಕಷಾಯ ಮಾಡಿ ಜಾನುವಾರುವಿಗೆ ಕುಡಿಸಬಹುದು. ಇಲಾಖೆಯಿಂದ ಚಿಕಿತ್ಸೆ ಲಭ್ಯವಿದ್ದು ಜೊತೆಗೆ ರೈತರು ಸೂಕ್ತ ರೀತಿಯಲ್ಲಿ ಆರೈಕೆ, ಪೋಷಣೆ ಮಾಡಿದರೆ ಜಾನುವಾರುಗಳು ಬೇಗ ಗುಣಮುಖವಾಗುತ್ತವೆ.

ಖರೀದಿ-ಮಾರಾಟಕ್ಕೆ ಬ್ರೇಕ್: ಜಾನುವಾರು ಖರೀದಿಸಿ ಅವುಗಳನ್ನು ಲಾಭಕ್ಕೆ ಮಾರಾಟ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ರೋಗ ನಿಯಂತ್ರಣಕ್ಕೆ ಬರುವವ ರೆಗೆ ಈ ಪ್ರವೃತ್ತಿಗೆ ವಿರಾಮ ನೀಡಬೇಕು. ಚರ್ಮಗಂಟು ರೋಗ ಇರುವ ಜಾನುವಾರುವಿನ ಖರೀದಿ ಹಾಗೂ ಮಾರಾಟ ದಿಂದ ರೋಗ ವ್ಯಾಪಿಸುತ್ತದೆ. ಹಾಗೆಯೇ ಜಾನುವಾರು ಜಾತ್ರೆ ಹಾಗೂ ಸಂತೆಯನ್ನು ಸ್ಥಗಿತಗೊಳಿಸಬೇಕು.

ಮನುಷ್ಯರಿಗೆ ಹಬ್ಬುವುದಿಲ್ಲ: ಕ್ಯಾಪ್ರಿಪಾಕ್ಸ್ ಎಂಬ ವೈರಾಣು ವಿನ ಮೂಲಕ ಒಂದು ಜಾನುವಾರುವಿನಿಂದ ಮತ್ತೊಂದಕ್ಕೆ ಚರ್ಮಗಂಟು ರೋಗ ಹರಡುತ್ತದೆ. ಇದು ಜಾನುವಾರು ಗಳಲ್ಲಿ ಮಾತ್ರ ಕಂಡುಬರುವ ಸೋಂಕಾಗಿದ್ದು, ಪ್ರಾಣಿ ಗಳಿಂದ ಮನುಷ್ಯರಿಗೆ ಹರಡುವ ರೋಗ (ಝೊನೊ ಟಿಕ್)ವಲ್ಲ. ಆದರೆ ವಲ್ಗ್ಯಾರಿಸ್ ಮತ್ತು ಸರ್ಪಸುತ್ತು ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರ ಫೋಟೋ ಬಳಸಿಕೊಂಡು ಜಾನುವಾರುಗಳ ಚರ್ಮಗಂಟು ರೋಗ ಮನುಷ್ಯರಿಗೆ ಹರಡಿದೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ ಈವರೆಗೂ ರೋಗಪೀಡಿತ ಜಾನುವಾರು ವಿನಿಂದ ಮನುಷ್ಯ ರಿಗೆ ಸೋಂಕು ಹರಡಿರುವ ಯಾವ ನಿದರ್ಶನವೂ ಇಲ್ಲ.

ಕುದಿಸಿದ ಹಾಲು ಬಳಸಬಹುದು: ಚರ್ಮಗಂಟು ರೋಗ ಪೀಡಿತ ಹಸುವಿನ ಹಾಲನ್ನು ಚೆನ್ನಾಗಿ ಕುದಿಸಿ ಬಳಸ ಬಹುದು. ಡೇರಿಗಳಲ್ಲಿ ಹಾಲನ್ನು ಪಾಶ್ಚೀಕರಿಸುವುದರಿಂದ ಅಲ್ಲಿಂದ ಪಡೆಯುವ ಹಾಲನ್ನೂ ಬಳಸಬಹುದು. ಗ್ರಾಮೀಣ ಪ್ರದೇಶದಲ್ಲಿ ಜಾನುವಾರು ಇಲ್ಲದವರು ಅಲ್ಲಿನ ಡೇರಿಯಲ್ಲಿ ಹಾಲು ಖರೀಸುತ್ತಾರೆ. ಅಂತಹವರು ಆತಂಕಪಡುವ ಅಗತ್ಯವಿಲ್ಲ. ಹಾಲನ್ನು ಚೆನ್ನಾಗಿ ಕುದಿಸಿ ಬಳಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಡಾ.ಷಡಕ್ಷರಿ ಮೂರ್ತಿ ಸ್ಪಷ್ಟಪಡಿಸಿದ್ದಾರೆ.

Translate »