ಜುಲೈನಲ್ಲಿ ಸಿಬಿಎಸ್‍ಇ 10, 12ನೇ ತರಗತಿ ಪರೀಕ್ಷೆ
ಮೈಸೂರು

ಜುಲೈನಲ್ಲಿ ಸಿಬಿಎಸ್‍ಇ 10, 12ನೇ ತರಗತಿ ಪರೀಕ್ಷೆ

May 9, 2020

ನವದೆಹಲಿ: ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳು ಕೊರೊನಾ ವೈರಸ್‍ನಿಂದಾಗಿ ಮುಂದೂಡಿಕೆಯಾ ಗಿದ್ದು, ಜುಲೈ ಮೊದಲಾ ರ್ಧದ ಅವಧಿಯಲ್ಲಿ ಈ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೆÇೀಖ್ರಿ ಯಾಲ್ ನಿಶಾಂಕ್ ಸ್ಪಷ್ಟಪಡಿಸಿದ್ದಾರೆ.

ಪರೀಕ್ಷೆಗಳು ಯಾವಾಗ ನಡೆಯಲಿವೆ ಎಂದು ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯುತ್ತಿದ್ದಾರೆ. ಜು.1ರಿಂದ 15ರವರೆಗೆ ಸಿಬಿಎಸ್‍ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸಲು ಇಂದು ತೀರ್ಮಾ ನಿಸಲಾಗಿದೆ ಎಂದು ತಿಳಿಸಿದ್ದಾರೆ. ಪರೀ ಕ್ಷೆಯ ವೇಳಾಪಟ್ಟಿಯನ್ನು ಸವಿವರ ವಾಗಿ ಸಿಬಿಎಸ್‍ಸಿ ನಂತರದಲ್ಲಿ ಪ್ರಕಟಿಸ ಲಿದೆ ಎಂದು ಸಚಿವರು ಮಾಹಿತಿ ನೀಡಿ ದರು. ದೇಶದಲ್ಲಿ ಕೊರೊನಾ ವ್ಯಾಪಕ ವಾಗಿ ಹರಡಲು ಆರಂಭವಾದ ಕಾರಣ ದಿಂದ ಮಾ.16ರಿಂದಲೇ ಎಲ್ಲಾ ಶಾಲಾ -ಕಾಲೇಜುಗಳಿಗೆ ರಜೆ ಘೋಷಣೆ ಮಾಡ ಲಾಯಿತು. ಇದರಿಂದಾಗಿ ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆಯಾದವು. ಬಳಿಕ ಮಾ.24ರಿಂದ ದೇಶವ್ಯಾಪಿ ಲಾಕ್‍ಡೌನ್ ಘೋಷಣೆ ಮಾಡಲಾ ಗಿದ್ದು, ಇದೇ ತಿಂಗಳ 17ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದಿದ್ದಾರೆ.

Translate »