ಶ್ರೀ ಸುತ್ತೂರು ಮಠದಿಂದ ಮೈಸೂರು ಮೃಗಾಲಯಕ್ಕೆ 5 ಲಕ್ಷ ರೂ. ದೇಣಿಗೆ
ಮೈಸೂರು

ಶ್ರೀ ಸುತ್ತೂರು ಮಠದಿಂದ ಮೈಸೂರು ಮೃಗಾಲಯಕ್ಕೆ 5 ಲಕ್ಷ ರೂ. ದೇಣಿಗೆ

May 9, 2020

ಮೈಸೂರು, ಮೇ 8- ಮೈಸೂರು ಮೈಗಾಲಯಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿರುವ ಕಾರಣದಿಂದ ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ಸುತ್ತೂರು ಶ್ರೀಮಠ ಮತ್ತು ಜೆಎಸ್‍ಎಸ್ ಮಹಾವಿದ್ಯಾಪೀಠ ದಿಂದ 5 ಲಕ್ಷ ರೂ. ಗಳ ದೇಣಿಗೆಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಶುಕ್ರವಾರ ಮೈಸೂರಿನ ಶ್ರೀ ಸುತ್ತೂರು ಶಾಖಾಮಠದಲ್ಲಿ ಸಚಿವ ರಾದ ಜಗದೀಶ್ ಶೆಟ್ಟರ್, ಎಸ್.ಟಿ. ಸೋಮಶೇಖರ್ ಹಾಗೂ ಭೈರತಿ ಬಸವ ರಾಜ್ ಅವರ ಮೂಲಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಹಾಗೂ ಕಾರ್ಯನಿರ್ವಾಹಕ ನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಅವರಿಗೆ ನೀಡಿದರು.

ಆಗಸ್ಟ್ 29 ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜಯಂತಿ ದಿನವಾಗಿದ್ದು, ಹಲವಾರು ವರ್ಷಗಳಿಂದ ಮೃಗಾಲಯದ ಪ್ರಾಣಿಗಳ ನಿರ್ವಹಣೆ ಗಾಗಿ 1 ಲಕ್ಷ ರೂ.ಗಳನ್ನು ನೀಡಲಾಗು ತ್ತಿದೆ. ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಜಿ.ಟಿ.ದೇವೇಗೌಡ, ಹರ್ಷ ವರ್ಧನ್, ಮಾಜಿ ಶಾಸಕರಾದ ಅಡ ಗೂರು ಹೆಚ್.ವಿಶ್ವನಾಥ್, ಎಂ.ಕೆ ಸೋಮ ಶೇಖರ್, ಮೇಯರ್ ತಸ್ನೀಂ, ಉಪ ಮೇಯರ್ ಸಿ.ಶ್ರೀಧರ್, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯನಿರ್ವಾಹಕ ಅಧಿ ಕಾರಿ ಸಿ.ಜಿ.ಬೆಟ್‍ಸೂರು ಮಠ, ಎಸ್ ಪಿ. ಮಂಜುನಾಥ್, ಎಸ್.ಶಿವಕುಮಾರಸ್ವಾಮಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Translate »