ಪಠ್ಯಕ್ರಮ ಕಡಿತದ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ: ಸರ್ಕಾರಕ್ಕೆ ಎ.ಹೆಚ್.ವಿಶ್ವನಾಥ್ ಸಲಹೆ
ಮೈಸೂರು

ಪಠ್ಯಕ್ರಮ ಕಡಿತದ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ: ಸರ್ಕಾರಕ್ಕೆ ಎ.ಹೆಚ್.ವಿಶ್ವನಾಥ್ ಸಲಹೆ

May 9, 2020

ಮೈಸೂರು, ಮೇ8(ಎಂಟಿವೈ)- ವಿದ್ಯಾರ್ಥಿಗಳಿಗೆ ಆನ್‍ಲೈನ್ ಕೋಚಿಂಗ್ ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇ.30ರಷ್ಟು ಪಠ್ಯಕ್ರಮ ಕಡಿತಗೊಳಿಸುವ ಆದೇಶಕ್ಕೂ ಮುನ್ನ ಶಿಕ್ಷಣ ತಜ್ಞರೊಡನೆ ಸಮಾಲೋಚಿಸುವಂತೆ ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮೈಸೂರಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಶಿಕ್ಷಣ ವಿಷಯದಲ್ಲಿ ಸರ್ಕಾರ ಆತು ರದ ನಿರ್ಧಾರ ತಾಳುವುದು ಸರಿಯಲ್ಲ. ಆನ್‍ಲೈನ್ ಕೋಚಿಂಗ್, ಪಠ್ಯಕ್ರಮದ ವಿಚಾರದಲ್ಲಿ ಸರ್ಕಾರ ಅವಸರದ ಹೆಜ್ಜೆ ಇಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ನಾವಿನ್ನೂ ಮೇ ರಜೆ ತಿಂಗಳಲ್ಲೇ ಇದ್ದೇವೆ. ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡುತ್ತೇವೆ ಅಥವಾ ಆನ್‍ಲೈನ್ ಕೋಚಿಂಗ್ ಮಾಡುತ್ತೇವೆ ಎನ್ನುತ್ತಿರುವುದು ಗೊಂದಲದ ವಿಷಯವಾಗಿದೆ. ನಮ್ಮಲ್ಲಿ ಸ್ಮಾರ್ಟ್ ಫೆÇೀನ್ ಕೇವಲ ಶೇ.30 ಜನರಲ್ಲಿ ಮಾತ್ರ ಇದೆ. ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕೊಚೀಂಗ್ ನೀಡು ವುದು ಕಷ್ಟ ಆಗುತ್ತದೆ. ನಾನು ಶಿಕ್ಷಣ ಮಂತ್ರಿಯಾಗಿ ದ್ದಾಗ 42 ಸಾವಿರ ಶಾಲೆಗಳಿಗೆ ಕಾಂಪೌಂಡ್ ಹಾಕಿಸಿ, ಗಿಡ-ಮರ ಬೆಳೆಸಲು ಕ್ರಮ ಕೈಗೊಂಡಿದ್ದೆ. ನೀವು ಕಾಂಪೌಂಡ್ ಒಳಗೇನೇ ಸಾಮಾಜಿಕ ಅಂತರ ಕಾಯ್ದು ಕೊಂಡು ಪಾಠ ಮಾಡಲು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಅವಸರ ಮಾಡಿ ಗೊಂದಲ ಮಾಡೋದು ಬೇಡ. ಇದು ಯಾರೋ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಮಾಡುತ್ತಿರುವ ಕೆಲಸವಾಗಿದೆ. ಈ ವಿಚಾರಗಳ ನಿರ್ಧಾರಕ್ಕೆ ತಜ್ಞರಿಲ್ಲವೆ? ಸುಮ್ಮನೇ ಐಎಎಸ್, ಕೆಎಎಸ್ ನವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುವುದು ದುರಂತ ಎಂದು ಅಸಮಧಾನ ವ್ಯಕ್ತಪಡಿಸಿದರು.

Translate »