ಮನೆಯಲ್ಲೇ ರಂಜಾನ್ ಆಚರಿಸಿ: ಪೊಲೀಸರ ಮನವಿ
ಮೈಸೂರು

ಮನೆಯಲ್ಲೇ ರಂಜಾನ್ ಆಚರಿಸಿ: ಪೊಲೀಸರ ಮನವಿ

April 27, 2020

ಮೈಸೂರು,ಏ.26(ವೈಡಿಎಸ್)-ಕೋವಿಡ್- 19 ಸೋಂಕು ಹರಡುವುದನ್ನು ತಡೆ ಗಟ್ಟಲು ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮುಸ್ಲಿಂ ಸಮು ದಾಯದವರು ರಂಜಾನ್ ತಿಂಗಳಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸದೆ ಮನೆಯಲ್ಲೇ ರಂಜಾನ್ ಹಬ್ಬ ಆಚರಿಸಬೇಕು ಎಂದು ಲಕ್ಷ್ಮೀಪುರಂ ಠಾಣೆ ಸಬ್‍ಇನ್ಸ್‍ಪೆಕ್ಟರ್ ಎಂ.ಎಸ್.ಭಂಡಿ ಮನವಿ ಮಾಡಿದ್ದಾರೆ.

ಮೈಸೂರಿನ ಕಾಕರವಾಡಿಯಲ್ಲಿ ಶನಿವಾರ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಉದ್ದೇ ಶಿಸಿ ಮಾತನಾಡಿದ ಅವರು, ಕೊರೊನಾ ಭೀತಿ ಇರುವುದರಿಂದ ರಂಜಾನ್ ತಿಂಗಳ ಲ್ಲಿಯೂ ಮುಂಜಾಗ್ರತಾ ಕ್ರಮಗಳನ್ನು ಅನು ಸರಿಸಬೇಕು. ಮಸೀದಿಯಲ್ಲಿ 1 ಬಾರಿಗೆ ಮೂವರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ವಿರುತ್ತದೆ. ಯಾವುದೇ ಧ್ವನಿವರ್ಧಕ ಬಳಸು ವಂತಿಲ್ಲ. ಇಫ್ತಾರ್ ಮತ್ತು ಸಹರಿಗಳಲ್ಲಿ ಸಾಮೂಹಿಕ ಭೋಜನಕೂಟ ಆಯೋ ಜಿಸಬಾರದು. ಮಸೀದಿ ಆವರಣದಲ್ಲಿ ಗಂಜಿ, ತಂಪು ಪಾನಿಯಗಳನ್ನು ತಯಾರಿಸುವಂ ತಿಲ್ಲ. ಮಸೀದಿ ಸುತ್ತಮುತ್ತ ಉಪಾಹಾರ ಗೃಹಗಳನ್ನು ತೆರೆಯುವುದನ್ನೂ ನಿಷೇಧಿ ಸಲಾಗಿದೆ ಎಂದು ಸೂಚನೆ ನೀಡಿದರು.

Translate »