ಹಾಲು, ದಿನಸಿ ತರಲಾಗುತ್ತಿಲ್ಲ; ಜನತಾನಗರ ನಿವಾಸಿಗಳ ಪ್ರತಿಭಟನೆ
ಮೈಸೂರು

ಹಾಲು, ದಿನಸಿ ತರಲಾಗುತ್ತಿಲ್ಲ; ಜನತಾನಗರ ನಿವಾಸಿಗಳ ಪ್ರತಿಭಟನೆ

April 27, 2020

ಮೈಸೂರು,ಏ.26(ಆರ್‍ಕೆಬಿ)-ಲಾಕ್‍ಡೌನ್, ಸೀಲ್ ಡೌನ್‍ನಿಂದಾಗಿ ನಮಗೆ ಹಾಲು, ದಿನಸಿ ತರಲಾಗುತ್ತಿಲ್ಲ ಎಂದು ಮೈಸೂರಿನ ಜನತಾನಗರದ ನಿವಾಸಿಗಳು ಭಾನುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಮೈಸೂರಿನ ಜನತಾನಗರದಲ್ಲಿ ಸೀಲ್‍ಡೌನ್ ಆಗಿ ರುವ 3 ರಸ್ತೆಗಳ ಮಹಿಳೆಯರೇ ಹೆಚ್ಚಾಗಿ ಪ್ರತಿಭಟನೆ ಯಲ್ಲಿದ್ದರು. 16 ದಿನಗಳಿಂದ ನಮ್ಮ ಬಡಾವಣೆಯ ಕೆಲ ರಸ್ತೆಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಹಾಲು, ದಿನಸಿ, ತರಕಾರಿ ಸಿಗುತ್ತಿಲ್ಲ. ಈ ಭಾಗದ ನಗರಪಾಲಿಕೆ ಸದಸ್ಯೆ ಇದುವರೆಗೂ ನಮ್ಮ ಸಮಸ್ಯೆ ಏನೆಂದು ಕೇಳಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಲಾಕ್‍ಡೌನ್ ಇರುವುದರಿಂದ ಜನರು ಮನೆಯೊ ಳಗೇ ಇರಬೇಕು, ಬೀದಿಗಿಳಿದು ಪ್ರತಿಭಟನೆ ಮಾಡ ಬಾರದು’ ಎಂದು ಪೊಲೀಸರು ಹೇಳಿದ್ದಕ್ಕೆ ಪ್ರತಿಯಾಗಿ ಮಹಿಳೆಯರು, `ನಗರಪಾಲಿಕೆ ಸದಸ್ಯೆಯನ್ನು ಸ್ಥಳಕ್ಕೆ ಕರೆಸಿ’ ಎಂದು ಒತ್ತಾಯಿಸಿದರು. ನಂತರ ಪೊಲೀಸರು ಹಾಲು, ದಿನಸಿ, ತರಕಾರಿಗಳು ಮನೆ ಬಾಗಿಲಿಗೇ ಬರುವಂತೆ ವ್ಯವಸ್ಥೆ ಮಾಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಳಿಸಿದರು.

Translate »