ರಾಮಮಂದಿರ ಶಿಲಾನ್ಯಾಸವನ್ನು ಹಬ್ಬದಂತೆ ಆಚರಿಸಿ
ಮೈಸೂರು

ರಾಮಮಂದಿರ ಶಿಲಾನ್ಯಾಸವನ್ನು ಹಬ್ಬದಂತೆ ಆಚರಿಸಿ

August 5, 2020

ಮೈಸೂರು, ಆ.4- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಉದ್ಘಾಟನೆ ಬುಧವಾರ (ಆ.5) ನಡೆಯಲಿದ್ದು, ಅಂದು ಪ್ರತಿಯೊಬ್ಬರ ಮನೆ, ಮನಸ್ಸು ಗಳಲ್ಲಿ ಶ್ರೀರಾಮ ಮತ್ತು ಹನುಮರ ಭಕ್ತಿ ಮಾರ್ಧನಿಸಲಿ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ತಿಳಿಸಿದರು.

ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ಸುತ್ತಮುತ್ತಲಿನ ಮನೆ ಮನೆಗೂ ಶ್ರೀರಾಮನ ಭಾವಚಿತ್ರ ಹಾಗೂ ಹಣತೆ ವಿತರಿಸುವ ಮೂಲಕ ಮನೆ ಯಲ್ಲೇ ರಾಮ ಜಪ ಮಾಡುವಂತೆ ಮನವಿ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ದೇಗುಲದ ಶಿಲಾನ್ಯಾಸ ನೆರ ವೇರಿಸುವರು. ದೇಶದ ಇತಿಹಾಸದಲ್ಲಿ ಮಹತ್ವ ವಾದ ದಿನವಾಗಿ ದಾಖಲಾಗುತ್ತದೆ. ಪ್ರತಿ ಯೊಬ್ಬರೂ ಮನೆಯಲ್ಲಿಯೇ ಇದ್ದು ಶಿಲಾ ನ್ಯಾಸ ಕಾರ್ಯಕ್ರಮದ ನೇರಪ್ರಸಾರ ಕಣ್ತುಂಬಿಕೊಳ್ಳಬೇಕು. ಶ್ರೀರಾಮ, ಹನು ಮನ ಸ್ಮರಣೆ ನಡೆಸಬೇಕು ಎಂದರು.

ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಮಾತನಾಡಿ, ನಗರದ ಪ್ರತಿ ವೃತ್ತಗಳಲ್ಲೂ ಕೇಸರಿ ಧ್ವಜ ಹಾರಿಸ ಬೇಕು. ಅಂಗಡಿ, ವಾಣಿಜ್ಯ ಸಂಸ್ಥೆ ಮುಂದೆ ಶ್ರೀರಾಮಚಂದ್ರನ ಚಿತ್ರ ಅಂಟಿಸಬಹುದು. ಎಲ್ಲರಿಗೂ ಕೇಸರಿ ಮಾಸ್ಕ್ ಧರಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಯುವ ಮುಖಂಡ ರಾದ ವಿಕ್ರಂ ಅಯ್ಯಂಗಾರ್, ಕೇಬಲ್ ಮಹೇಶ್, ಮೈಸೂರು ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೇಣುಕಾ ರಾಜ್, ನರಸಿಂಹರಾಜ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಲೋಹಿತ್, ಮಧು, ಪ್ರಶಾಂತ್ ಭಾರದ್ವಾಜ್, ಸುಚೀಂದ್ರ, ಚಕ್ರಪಾಣಿ, ಹರೀಶ್ ನಾಯ್ಡು, ಮೈಲಾ ವಿಜಯ್‍ಕುಮಾರ್, ಜಯಸಿಂಹ, ಶ್ರೀಧರ್ ಇನ್ನಿತರರು ಹಾಜರಿದ್ದರು.

Translate »