ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ ಕುಟುಂಬ ಸಮೇತ ಸಿಹಿ ತಿಂದು ಸಂಭ್ರಮಿಸಿ; ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ
ಮೈಸೂರು

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ ಕುಟುಂಬ ಸಮೇತ ಸಿಹಿ ತಿಂದು ಸಂಭ್ರಮಿಸಿ; ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ

August 5, 2020

ಮೈಸೂರು, ಆ.4(ಪಿಎಂ)- ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕೋಟ್ಯಾಂ ತರ ಜನತೆಯ ಅಭಿಮಾನದ ಸಂಕೇತ. ಇದರ ಶಿಲಾನ್ಯಾಸದ ದಿನವಾದ ಆ.5ರಂದು ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ, ಕುಟುಂಬ ಸಮೇತ ಸಿಹಿ ತಿನ್ನುವಂತೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ ಕೋರಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮನೆಯ ಅಕ್ಕಪಕ್ಕದವರನ್ನು ಸೇರಿಸಿ ಸಾಮಾಜಿಕ ಅಂತರ ಕಾಯ್ದು ಕೊಂಡು ರಾಮಜಪ ಮಾಡು ವುದು, ದೀಪ ಬೆಳಗಿಸಿ ಸಿಹಿ ಹಂಚಿ ಸಂಭ್ರಮಿಸು ವುದು, ಬೆಳಿಗ್ಗೆ 8ರಿಂದ 12ರವರೆಗೆ ಕುಟುಂಬ ಸದಸ್ಯರು ಕಾರ್ಯಕ್ರಮವನ್ನು ವೀಕ್ಷಿಸುವುದು, ದೇವಸ್ಥಾನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಂಡು ದೀಪ ಹಚ್ಚುವ ಕಾರ್ಯಕ್ರಮಗಳನ್ನು ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುತ್ತಿರುವ ಸಮಯದಲ್ಲಿ ನಾನು ನಗರಾ ಧ್ಯಕ್ಷನಾಗಿರುವುದು ಅತೀವ ಸಂತಸ ತಂದಿದೆ. ಪಕ್ಷದ ಕಾರ್ಯಕರ್ತರು ಈ ಮಹತ್ವದ ದಿನ ವನ್ನು ಹಬ್ಬದಂತೆ ಸಂಭ್ರಮಿಸಬೇಕು. `ರಾಮ ಜನ್ಮ ಭೂಮಿ ನಮ್ಮ ಜನ್ಮ ಸಿದ್ಧ ಹಕ್ಕು’ ಘೋಷಣೆ ಯಿಂದ ಪ್ರೇರೇಪಣೆಯಾದವರ ಪೈಕಿ ನಾನು ಒಬ್ಬ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದು ಮರೆಯಲಾಗದ ದಿನ. ರಾಮಮಂದಿರ ನಿರ್ಮಾಣಕ್ಕಾಗಿ ಹಿರಿಯರಾದ ಅಟಲ್‍ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೊಷಿ ಸೇರಿದಂತೆ ಅನೇಕ ಮಹನೀಯರು ರಥಯಾತ್ರೆ ಆರಂಭಿಸಿದ್ದರು. ನಂತರ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ಕಾರ್ಯ ಕರ್ತರು ಹೋರಾಟ ಮುಂದುವರೆಸಿದರು ಎಂದು ಸ್ಮರಿಸಿದ್ದಾರೆ.

Translate »