ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಪ್ರಯೋಗಾಲಯ ಆಯ್ಕೆ ಸಂಭವ
ಮೈಸೂರು

ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಪ್ರಯೋಗಾಲಯ ಆಯ್ಕೆ ಸಂಭವ

August 4, 2020

ಮೈಸೂರು, ಆ. 3(ಆರ್‍ಕೆ)-ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್‍ಗೆ ಮಾಡಲು ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ದಿ ಇಂಡಿ ಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (Iಅಒಖ) ಸಂಸ್ಥೆಯು ಸಂಭವನೀಯ ಪಟ್ಟಿಯಲ್ಲಿ ಸೇರಿಸಿದೆ.

ಕೊರೊನಾ ವೈರಸ್ ಬರದಂತೆ ತಡೆಗಟ್ಟಲು ಮುಂಜಾ ಗ್ರತೆಯಾಗಿ ನೀಡುವ ಲಸಿಕೆಯ ಟ್ರಯಲ್ಸ್ ನಡೆಸುವ ಪ್ರಯೋಗಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯ ಹೊಂದಿರುವ ದೇಶದ ಹಲವು ಪ್ರಸಿದ್ಧ ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳ ಸಂಭವನೀಯ ಪಟ್ಟಿಯಲ್ಲಿ ಕೋವಿಡ್ ಟೆಸ್ಟಿಂಗ್‍ಗೆ ಆಧುನಿಕ ತಂತ್ರ ಜ್ಞಾನದ ಸಲಕರಣೆಗಳನ್ನು ಹೊಂದಿರುವ ಕರ್ನಾ ಟಕದ ಎರಡನೇ ಆಸ್ಪತ್ರೆಯಾಗಿರುವ ಜೆಎಸ್‍ಎಸ್ ಆಸ್ಪತ್ರೆಯನ್ನು ಕೋವಿಡ್-19 ವ್ಯಾಕ್ಸಿನ್ ಟ್ರಯಲ್ಸ್ ನಡೆಸಲು ಸಂಭವನೀಯ ಪಟ್ಟಿಯಲ್ಲಿ ಸೇರಿಸಲಾ ಗಿದ್ದು, ಇನ್ನೂ ಪಟ್ಟಿ ಅಂತಿಮವಾಗಿಲ್ಲ.

ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯನ್ನು ಹ್ಯೂಮನ್ ಟ್ರಯಲ್ಸ್ ಆಫ್ ಕೋವ್ಯಾಕ್ಸಿನ್ ಮತ್ತು ಇತರೆ ವ್ಯಾಕ್ಸಿನ್ ಕ್ಯಾಂಡಿಡೇಟ್‍ಗಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಆಅಉI)ವು 2 ಮತ್ತು 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅನುಮೋದನೆ ನೀಡಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ ಯವು ತಿಳಿಸಿದೆ. ವಿಷಯ ತಜ್ಞರು ಸಮಿತಿಯು ಡೇಟಾ ಆಧಾರದ ಮೇಲೆ ಸಲ್ಲಿಸಿದ ತೃಪ್ತಿದಾಯಕ ವರದಿಯಂತೆ ಭಾರತದಲ್ಲಿ ಟ್ರಯಲ್ ನಡೆಸಲು ಡಿಸಿಜಿಐ ಅನುಮತಿ ನೀಡಿದೆ ಎಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಅಆSಅಔ)ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರಂಭದಲ್ಲಿ ಜುಲೈ 20ರಂದು ವ್ಯಾಕ್ಸಿನ್ ಕ್ಯಾಂಡಿ ಡೇಟ್ ಟ್ರಯಲ್ಸ್ ನಡೆಸಿದ ಫಲಿತಾಂಶವನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯವು ಪ್ರಕಟಿಸಿತ್ತು. ಈ ಪ್ರಾಥಮಿಕ ಟ್ರಯಲ್ಸ್ ಫಲಿತಾಂಶ ಪ್ರಕಟಿಸಿದ್ದ ‘ದಿ ಲ್ಯಾನ್ಸೆಟ್’ ಮೆಡಿಕಲ್ ಜರ್ನಲ್ಸ್ ಕೊರೊನಾ ವಿರುದ್ಧ ಹೋರಾಡಲು ಇದು ಸುರಕ್ಷಿತ ಎಂದು ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಭ್ಯವಿರುವ ಸೌಲಭ್ಯ, ಪ್ರಯೋಗಾಲಯದಲ್ಲಿ ನಡೆ ಯುತ್ತಿರುವ ಕೊರೊನಾ ಪರೀಕ್ಷೆ, ಫಲಿತಾಂಶವನ್ನು ಪರಿಗಣಿಸಿ ಐಸಿಎಂಆರ್ ಸಂಸ್ಥೆಯು ಕೋವಿಡ್-19 ವ್ಯಾಕ್ಸಿನ್ ಟ್ರಯಲ್ಸ್‍ಗೆ ಜೆಎಸ್‍ಎಸ್ ಆಸ್ಪತ್ರೆಯನ್ನು ಆಯ್ಕೆ ಮಾಡಿ ಶಾರ್ಟಲಿಸ್ಟ್ ಮಾಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Translate »