ಖ್ಯಾತ ಮಕ್ಕಳ ತಜ್ಞೆ ಡಾ.ಇಂದ್ರ ಆಮ್ಲ ನಿಧನ
ಮೈಸೂರು

ಖ್ಯಾತ ಮಕ್ಕಳ ತಜ್ಞೆ ಡಾ.ಇಂದ್ರ ಆಮ್ಲ ನಿಧನ

August 4, 2020

ಮೈಸೂರು, ಆ. 3 – ಮೈಸೂರಿನ ಖ್ಯಾತ ಮಕ್ಕಳ ತಜ್ಞರು ಹಾಗೂ ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋ ಧನಾ ಸಂಸ್ಥೆ ನಿವೃತ್ತ ನಿರ್ದೇಶಕರಾದ ಡಾ. ಬಿ.ಎಲ್.ಆಮ್ಲ ಅವರ ಪತ್ನಿ ಇಂದ್ರ ಆಮ್ಲಾ ಅವರು ಆಗಸ್ಟ್ 1ರಂದು ಮೈಸೂರಿನ ಗೋಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರು ಮೂವರು ಪುತ್ರಿಯರು- ಅನಿತಾ, ನೀನಾ ಮತ್ತು ವನ್ಯ, ಮೊಮ್ಮಕ್ಕಳು, ಅಪಾರ ಬಂಧು ಬಳಗ ಮತ್ತು ಮಿತ್ರ ರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವ್ಯಕ್ತಿ ಪರಿಚಯ: ಡಾ.ಇಂದ್ರ ಆಮ್ಲ ಅವರು 1930ರಲ್ಲಿ ಜಿ.ವಿ.ಕೃಪಾನಿಧಿ ಮತ್ತು ಸುಶೀಲಾ ಕೃಪಾನಿಧಿ ದಂಪತಿಗೆ ಜನಿಸಿದರು. ಕೃಪಾನಿಧಿ ಅವರು `ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮಾಜಿ ಸಂಪಾದಕರು. ಇಂದ್ರ ಆಮ್ಲಾ ಅವರು ನವದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. ನಂತರ ಡಾ.ಇಂದ್ರ ಆಮ್ಲ ಅವರು ಯುನೈಟೆಡ್ ಕಿಂಗ್‍ಡಂನ ಎಡಿನ್‍ಬರ್ಗ್ ವೈದ್ಯಕೀಯ ಶಾಲೆಯಲ್ಲಿ ಎಂಆರ್‍ಸಿಪಿ ಮತ್ತು ಎಫ್‍ಆರ್‍ಸಿಪಿ ಪಡೆದರು. ಆರಂಭದಲ್ಲಿ ಇವರು ಯುಎಸ್‍ಎನ ನ್ಯೂಯಾರ್ಕ್ ಮತ್ತು ಸಿನ್‍ಸಿನಾಟಿಯಲ್ಲಿ ಸೇವೆ ಸಲ್ಲಿಸಿದ್ದರು.

ಭಾರತಕ್ಕೆ ಹಿಂತಿರುಗಿದ ನಂತರ ಡಾ. ಇಂದ್ರ ಆಮ್ಲ, ಮೈಸೂರು ಮೆಡಿಕಲ್ ಕಾಲೇಜಿನ ಪಿಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ರಾಗಿ ನಿಯೋಜನೆಗೊಂಡು, ಸುಮಾರು 2 ದಶಕಗಳ ಕಾಲ ಸೇವೆ ಸಲ್ಲಿಸಿದರು. ಪಿಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಮತ್ತು ಮೈಸೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ರಾಗಿಯೂ ಸೇವೆ ಸಲ್ಲಿಸಿದ್ದಾರೆ.

ನಂತರ ಡಾ. ಇಂದ್ರ ಆಮ್ಲಾ, ಒಂದು ಅಸೈನ್‍ಮೆಂಟ್ ಮೇರೆಗೆ ಯುಎಸ್‍ಎನ ವಾಷಿಂಗ್‍ಟನ್ ಡಿಸಿಯಲ್ಲಿರುವ ಜಾರ್ಜ್ ಟೌನ್ ಮೆಡಿಕಲ್ ಆಸ್ಪತ್ರೆಗೆ ತೆರಳಿದರು. ಮತ್ತೆ ಭಾರತಕ್ಕೆ ಹಿಂತಿರುಗಿ, ಮೈಸೂರಿನ ಜೆಎಸ್‍ಎಸ್ ಮೆಡಿಕಲ್ ಕಾಲೇಜಿಗೆ ಸೇರ್ಪಡೆಯಾಗಿ ಪಿಡಿಯಾಟ್ರಿಕ್ಸ್ ವಿಭಾ ಗದ ಪ್ರಥಮ ಮುಖ್ಯಸ್ಥರಾದರು.

ಡಾ. ಆಮ್ಲ ಅವರು ಕೆಲಸದಲ್ಲಿ ತುಂಬಾ ಬದ್ಧತೆವುಳ್ಳವರಾಗಿದ್ದು, ಕೃಪಾನಿಧಿ ಮದರ್ ಅಂಡ್ ಚೈಲ್ಡ್ ಫೌಂಡೇಷನ್ ಮೂಲಕ ಜನರ ಸೇವೆಗೆ ಮುಂದಾಗಿದ್ದರು. ಅಲ್ಲದೆ ಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯ ವಾದ ಚಿಕಿತ್ಸೆ ನೀಡುವ ಮೂಲಕವೂ ಮಾದರಿಯಾಗಿದ್ದಾರೆ. ಶಿಕ್ಷಣ ತಜ್ಞರಾಗಿ, ಡಾ. ಇಂದ್ರ ಆಮ್ಲಾ ಅವರು ಸಿಎಫ್‍ಟಿಆರ್‍ಐ ಶಾಲೆಯನ್ನು ಮೈಸೂರಿನಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆಯ ಮೂಲಕ ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ಯು ವಲ್ಲಿ ತೊಡಗಿಸಿಕೊಂಡಿದ್ದರು.

ಸಂತಾಪ: ಮೈಸೂರಿನ ಚೆವರನ್ ಲ್ಯಾಬೋರೇಟರೀಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಸ್ಯಾಮ್ ಚೆರಿಯನ್ ಕುಂಬುಕಟ್ಟು ಅವರು ಡಾ. ಇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಆಮ್ಲಾ ದಂಪತಿ ನೈತಿಕ ಬೆಂಬಲ ಮತ್ತು ಎಲ್ಲಾ ಸಮಯದಲ್ಲೂ ವ್ಯವಹಾರ ಧರ್ಮದೊಂದಿಗೆ ಕಂಪನಿ ಬೆಳವಣಿಗೆಯಲ್ಲಿ ಆಧಾರಸ್ತಂಭವಾಗಿದ್ದರು. ನಿಜವಾ ಗಲೂ ಆಮ್ಲಾ ದಂಪತಿ ಕಳೆದುಕೊಂಡಿದ್ದು ನನಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆಶೀರ್ವಾದ ಮತ್ತು ಹಾರೈಕೆಗಳು ಯಾವಾಗಲೂ ನಮ್ಮೊಂದಿಗೆ ಮುಂದು ವರೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Translate »