ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ
ಮೈಸೂರು

ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ

May 9, 2022

ಮಾಧ್ಯಮ ಮೈತ್ರಿಯಾನಕ್ಕೆ ಚಾಲನೆ ನೀಡಿ ಕೆಯುಡಬ್ಲುö್ಯಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿಮತ
ಮೈಸೂರು, ಮೇ ೮(ಆರ್‌ಕೆಬಿ)- ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್. ವಿಶ್ವನಾಥ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರು ರಾಜಕಾರಣ ಅಷ್ಟೇ ಅಲ್ಲ, ಸಾಹಿತಿ, ಪತ್ರಕರ್ತ ವಿಮರ್ಶಕ, ಸಂಘಟನೆಗಾರ, ಸೃಜನಶೀಲ ವ್ಯಕ್ತಿತ್ವ ಉಳ್ಳವರು. ರಾಜ್ಯಕ್ಕೆ ಪ್ರದುದ್ಧ ದಿಕ್ಕನ್ನು ತೋರಿಸಿಕೊಟ್ಟವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

ಮೈಸೂರಿನ ರಾಣ ಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ‘ಅಡಗೂರು ಹೆಚ್. ವಿಶ್ವನಾಥ್ ೭೫ರ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಮಾಧ್ಯಮ ಮೈತ್ರಿಯಾನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವರು ಯಾವುದೇ ಪಕ್ಷದಲ್ಲಿರಲಿ ಸ್ವಪಕ್ಷೀಯರ ವಿರುದ್ಧವೇ ಗಟ್ಟಿ ಧ್ವನಿ ಎತ್ತುವ ಮತ್ತು ಎತ್ತಿದ ರಾಜಕಾರಣ . ಕಾಂಗ್ರೆಸ್ ಕಚೇರಿಗೆ ಮೆರವಣ ಗೆಯಲ್ಲಿ ತೆರಳಿ ರಾಜೀನಾಮೆ ಕೊಟ್ಟ ಯಾರಾ ದರೂ ರಾಜಕಾರಣ ಇದ್ದರೆ ಅವರು ವಿಶ್ವನಾಥ್ ಮಾತ್ರ ಎಂದು ಹೇಳಿದರು.

ವಿಶ್ವನಾಥ್ ಲೆಕ್ಕಾಚಾರದಡಿ ರಾಜಕಾರಣ ಮಾಡುವವರಲ್ಲ. ಯಾವುದೇ ವಿಚಾರಕ್ಕೆ ತಕ್ಷಣಕ್ಕೆ ವರ್ತಮಾನದ ಪ್ರತಿಕ್ರಿಯೆ ನೀಡುವ ಸಭ್ಯ ರಾಜಕಾರಣ . ಸುದ್ದಿಗಳ ವಿಚಾರಕ್ಕೆ ಸಂಬAಧಿಸಿದAತೆ ವಿಶ್ವನಾಥ್ ವಿಧಾನ ಸೌಧಕ್ಕೆ ಬರುತ್ತಾರೆಂದರೆ ಮಾಧ್ಯಮಗಳು ಅವರಿಗಾಗಿ ಕಾತುರದಿಂದ ಕಾಯುತ್ತಿರುತ್ತವೆ. ಅಂತಹ ವಿಶ್ವನಾಥ್ ಅವರ ಬಗ್ಗೆ ಇಷ್ಟೇ ಮಾತನಾಡ ಬೇಕು ಎಂದು ವಿಚಾರಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂದರು.

ಯಾರಾದರೂ ಅವರ ಹೃದಯಕ್ಕೆ ಒಮ್ಮೆ ಆಪ್ತರಾದರೆ ಸಾಕು ಅವರನ್ನು ಬಿಟ್ಟುಕೊಡುವುದಿಲ್ಲ. ವರ್ಣರಂಜಿತ ವ್ಯಕ್ತಿತ್ವ ಅವರದ್ದು. ಅತಿ ಹೆಚ್ಚು ಸುದ್ದಿಗೆ ಪಾತ್ರರಾದವರು ಅವರೇ. ವಿಶ್ವನಾಥ್ ಅವರನ್ನು ಸಚಿವರನ್ನಾಗಿ ಮಾಡಿದರೆ ನಮ್ಮ ಮೇಲೆ ಸವಾರಿ ಮಾಡಬಹುದು ಎಂಬ ಕಾರಣಕ್ಕೋ ಏನೋ ಅವರನ್ನು ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಶಿವಾನಂದ ತಗಡೂರು ಹೇಳಿದರು. ವಿಶ್ವನಾಥ ಅವರ ಮಹತ್ವದ ಬಹು ನಿರೀಕ್ಷಿತ `ಬಾಂಬೆ ಡೇಸ್’ ಕೃತಿ ಯಾವಾಗ ಬರುತ್ತದೆಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ ಮಾಡುವುದನ್ನು ಹೇಳಿಕೊಟ್ಟವರೇ ಪತ್ರಕರ್ತರು: ವಿಶ್ವನಾಥ್

ಮೈಸೂರು, ಮೇ ೮(ಆರ್‌ಕೆಬಿ)- ೧೯೭೦ ರಲ್ಲಿ ನನಗೆ ಪತ್ರಿಕಾಗೋಷ್ಠಿ ಮಾಡು ವುದನ್ನು ಹೇಳಿಕೊಟ್ಟವರೇ ಪತ್ರಕರ್ತರು. ಅಂದಿನ ಕಾಲಘಟ್ಟದಲ್ಲಿ ಎನ್.ಅರ್ಜುನ ದೇವ, ಎಸ್.ಪಟ್ಟಾಭಿರಾಮನ್, ಹ.ಲ. ಶ್ರೀಕಂಠಮೂರ್ತಿ, ಅರುಣ ರಾಮಣ್ಣ ಇನ್ನಿತರರು ನನಗೆ ಪತ್ರಿಕಾಗೋಷ್ಠಿಗಳನ್ನು ಹೇಗೆ ನಡೆಸಬೇಕು. ಹೇಗೆ ಮಾತನಾಡ ಬೇಕು ಎಂದು ಹೇಳಿಕೊಟ್ಟರು. ನಾನಿಂದು ನಾಡಿನಲ್ಲಿ ಹೀಗೆ ಬೆಳೆಸಿದ್ದೇ ಮಾಧ್ಯಮಗಳು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದರು.

ಮಾಧ್ಯಮ ಮೈತ್ರಿಯಾನದಲ್ಲಿ ತಮ್ಮ ಮನದಾಳದ ಮಾತುಗಳನ್ನಾಡಿದ ಅವರು, ೫೦ ವರ್ಷಗಳ ಕಾಲದಿಂದ ಮಾಧ್ಯಮದ ಜೊತೆಗೇ ಬಂದಿದ್ದೇನೆ. ೭೫ನೇ ವರ್ಷದ ಸಂಭ್ರಮದಲ್ಲಿ ಭಾಗವಹಿಸಿದ್ದೇನೆ. ಯಾರಿಗೆ ಇಂಥ ಅವಕಾಶ ಸಿಗಲು ಸಾಧ್ಯ ಎಂದು ತಮಗೆ ಜಿಲ್ಲಾ ಪತ್ರಕರ್ತರ ಸಂಘ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಿಕ್ಕಿದ ಗೌರವ ಕಂಡು ಸಂತಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿ ನಡೆಸುವುದನ್ನು ಪತ್ರಕರ್ತರ ಕಲಿಸಿಕೊಟ್ಟರೆ, ಡಿ.ದೇವರಾಜ ಅರಸು ಮತ್ತು ಬಸವಲಿಂಗಪ್ಪ ಇನ್ನಿತರು ಜನರೊಂದಿಗೆ ಬೆರೆತು ಮಾತನಾಡುವುದು, ಅವರು ಹೇಳುವುದನ್ನು ಕೇಳು ಎಂದು ಹೇಳಿಕೊಟ್ಟರು. ದೊಡ್ಡವರು ನನಗೆ ಹೇಳಿ ಕೊಟ್ಟಿದ್ದನ್ನು ಇಂದಿಗೂ ಪಾಲಿಸುತ್ತಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.

೧೯೭೦ ಅವಧಿಯಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಮಯ, ಆಗ ವಿದ್ಯಾರ್ಥಿ ಚಳುವಳಿ ಗಟ್ಟಿಯಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಚಳುವಳಿ ಯಿಂದಾಗಿ ಸರ್ಕಾರವೇ ಪತನವಾಯಿತು ಎಂದರು.

೧೯೮೦ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಷ್ಟರಮಟ್ಟಿಗೆ ಭವಿಷ್ಯ ಹೇಳಿದ್ದರೆಂದರೆ, ಪತ್ರಿಕೆಯವರನ್ನು ಸಮುದ್ರಕ್ಕೆ ಎಸೆಯಿರಿ ಎಂದು ಗುಡುಗಿದ್ದರು. ೪೫ ವರ್ಷದ ಹಿಂದೆಯೇ ಅವರು ಸತ್ಯ ಹೇಳಿದ್ದರು. ನಂತರ ಸರ್ಕಾರಕ್ಕೆ ನೇರವಾಗಿ ಟೀಕಿಸುವ ಪತ್ರಿಕೆಗಳು ಬಂದವು ಎಂದು ತಿಳಿಸಿದರು.

ಸುರಕ್ಷಾ ನಿಧಿಗೆ ೭೫,೦೦೦; ಪತ್ರಿಕಾ ಭವನಕ್ಕೆ ೧೦ ಲಕ್ಷ: ಇದೇ ವೇಳೆ ವಿಶ್ವನಾಥ ಅವರು ಜಿಲ್ಲಾ ಪತ್ರಕರ್ತರ ಸಂಘದ ಪತ್ರಕರ್ತರ ಸುರಕ್ಷಾ ನಿಧಿಗೆ ೭೫,೦೦೦ ರೂ.ಗಳನ್ನು ತಮ್ಮ ೭೫ರ ಸಂಭ್ರಮದ ನೆನಪಿನಾರ್ಥ ನೀಡು ವುದಾಗಿ ತಿಳಿಸಿದರು. ಸಂಘವು ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಕ್ಕೆ ತಮ್ಮ ವಿವೇಚನಾ ನಿಧಿಯಿಂದ ೧೦ ಲಕ್ಷ ರೂ. ನೀಡು ವುದಾಗಿಯೂ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಯುವ ಕರ್ನಾ ಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ನಂದಾ ಕಟ್ಟಿಮನಿ ಅವರು ವಿಶ್ವನಾಥ್ ಅವರ ೭೫ರ ಸಂಭ್ರಮದ ನೆನಪಿಗಾಗಿ ತಮಗೆ ನೀಡಿದ್ದ ಅಂಬುಲೆನ್ಸ್ ಅನ್ನು ಅವರು ಕೆ.ಆರ್.ನಗರದ ವೈದ್ಯ ಮೆಹಬೂಬ್ ಖಾನ್ ಅವರಿಗೆ ನೀಡುವುದಾಗಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಭದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅವರು `ಮಾಧ್ಯಮ ಮೈತ್ರಿಯಾನ; ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾಧ್ಯಮ ಮೈತ್ರಿಯಾನ ಕುರಿತು ಹಿರಿಯ ಪತ್ರಕರ್ತರಾದ ಡಿ.ಉಮಾಪತಿ, ರವೀಂದ್ರ ರೇಷ್ಮೆ, ಬಿ.ಎಂ.ಹನೀಫ್, ಹುಣಸವಾಡಿ ರಾಜನ್, ಕೆ.ಶಿವಕುಮಾರ್ ಮಾತನಾಡಿದರು. ಪತ್ರಕರ್ತ ಟಿ ಗುರು ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ, ಧರ್ಮಾಪುರ ನಾರಾ ಯಣ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ವೈ.ಡಿ.ರಾಜಣ್ಣ, ರಾಜಶೇಖರ ಕದಂಬ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚAದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »