ಆಳುವವರು ಸರ್ವಧರ್ಮ ಸಹಿಷ್ಣುಗಳಾಗಿದ್ದಾಗ ಮಾತ್ರ ಯಶಸ್ವಿ ಆಡಳಿತ ನಡೆಸಲು ಸಾಧ್ಯ
ಮೈಸೂರು

ಆಳುವವರು ಸರ್ವಧರ್ಮ ಸಹಿಷ್ಣುಗಳಾಗಿದ್ದಾಗ ಮಾತ್ರ ಯಶಸ್ವಿ ಆಡಳಿತ ನಡೆಸಲು ಸಾಧ್ಯ

May 9, 2022

ಮೈಸೂರು, ಮೇ ೮(ಎಸ್‌ಬಿಡಿ)- ಯಾವಾ ಗಲೂ ಆಳುವವರು ಸರ್ವಧರ್ಮ ಸಹಿಷ್ಣುಗಳಾ ಗಿರಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯ್ಲಿ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಮಾನಸಗಂಗೋತ್ರಿ ರಾಣ ಬಹುದ್ದೂರ್ ಸಭಾಂಗಣ ದಲ್ಲಿ ಭಾನುವಾರ ಆಯೋಜಿಸಿದ್ದ `ಅಡಗೂರು ಹೆಚ್.ವಿಶ್ವನಾಥ್ ೭೫ರ ಸಂಭ್ರಮ’ ಸಮಾರಂಭದ ಭಾಗವಾದ `ವಿಶ್ವಾಕ್ಷರ ಪಯಣ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿ.ಶ.೨ರಿಂದ ೧೫ರ ಅವಧಿಯಲ್ಲಿ ಆಳ್ವಿಕೆ ಮಾಡಿದ ರಾಜರುಗಳಲ್ಲಿ ಬಹುತೇಕರು ಜೈನ ಧರ್ಮೀಯರಾಗಿದ್ದರು. ಅವರು ಸರ್ವಧರ್ಮ ಸಹಿಷ್ಣುಗಳಾಗಿದ್ದರಿಂದ ಯಶಸ್ವಿಯಾಗಿ ಆಡಳಿತ ನಡೆಸಲು ಸಾಧ್ಯವಾಯಿತು. ಆಳುವವರು ಯಾವಾ ಗಲೂ ಸರ್ವಧರ್ಮ ಸಹಿಷ್ಣು ಆಗಿರಲೇಬೇಕು. ಇಲ್ಲವಾದರೆ ದೇಶ ಅಥವಾ ರಾಜ್ಯವನ್ನು ಆಳಲು ಸಾಧ್ಯವಿಲ್ಲ. ಸರ್ವೋದಯ, ಸಮನ್ವಯ ಹಾಗೂ ಸರ್ವಧರ್ಮ ಜಾಗೃತಿ ಬಹಳ ಮುಖ್ಯ. ಬಹು ಸಂಸ್ಕೃತಿಗೆ ಧಕ್ಕೆಯಾದರೆ ಪ್ರಜಾಪ್ರಭುತ್ವದ ಬುನಾದಿ ಕಂಪಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವ್ಯ, ಕವನ, ಪ್ರಬಂಧ, ಕತೆ ಹೀಗೆ ಯಾವ ಬಗೆಯ ಸಾಹಿತ್ಯವಾದರೂ ರಾಷ್ಟಿçÃಯ, ಸಾಮಾ ಜಿಕ, ರಾಜಕೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಆಶಯವನ್ನು ಪ್ರತಿನಿಧಿಸಬೇಕು. ಹೊಸತನ ಕಂಡುಕೊಳ್ಳಲು ಅನ್ವೇಷಣೆಯಾಗಬೇಕು. ಕವಲುಗಳು ಸೇರದಿದ್ದರೆ ಮೂಲ ನದಿಯೇ ಬತ್ತಿ ಹೋಗುತ್ತದೆ. ಹಾಗೆಯೇ ಹೊಸತನವಿಲ್ಲ ದಿದ್ದರೆ ಸಾಹಿತ್ಯವೂ ಅಳಿಯುತ್ತದೆ ಎಂದರು.

ಲೋಕ ಪ್ರಸಿದ್ಧ `ಹಳ್ಳಿ ಹಕ್ಕಿ ಹಾಡು’ ಪುಸ್ತಕ ದಲ್ಲಿ ವಿಶ್ವನಾಥ್ ಅವರು ತಮ್ಮ ಊರಿನ ವಿಚಾರ ವನ್ನು ಉದಾತ್ತವಾಗಿ ಬರೆದಿದ್ದಾರೆ. ಡಿ.ದೇವರಾಜ ಅರಸು ಅವರ ಬಗ್ಗೆಯೂ ವಿವರವಾಗಿ ಹೇಳಿದ್ದಾರೆ. ಸಂಗತಿಯೊAದನ್ನು ಉದಾಹರಿಸಿ ಎಲ್ಲಾ ವಿಷಯಗಳನ್ನೂ ರಾಜಕಾರಣ ಮಾಡ ಬಾರದು, ಹಾಗೆ ಮಾಡಿದರೆ ಅದು ಜನದ್ರೋಹ ಎಂದು ತಿಳಿಸಿದ್ದಾರೆ. ಅರಸು ಅವರಿಂದ ರಾಜಕೀಯ ಸಿದ್ಧಾಂತ ಕಲಿತಿರುವ ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸ್ವತಂತ್ರವಾಗಿ ಮುನ್ನೆಡೆಸಿ ಮಾದರಿಯಾಗಿದ್ದರು. ಸಹಕಾರಿ ಸಚಿವರಾಗಿದ್ದಾಗ ಜಾರಿಗೆ ತಂದ ರೈತ ಸಹಕಾರಿ ಆರೋಗ್ಯ ವಿಮಾ ಯೋಜನೆ ದೇಶವ್ಯಾಪಿ ಯಶಸ್ವಿಯಾಗಿತ್ತು ಎಂದು ತಿಳಿಸಿದರು.

ಪಕ್ಷನಿಷ್ಠೆಯನ್ನು ಗಂಭೀರವಾಗಿ ಚುನಾವಣಾ ವಿಷಯವಾಗಿ ಪರಿಗಣ ಸಬೇಕು. ಅರಳಿಸುವುದು ರಾಷ್ಟಾçಭಿಮಾನ, ಕೆರಳಿಸುವುದು ರಾಷ್ಟçದ್ರೋಹ. ಈ ಸಂದರ್ಭದಲ್ಲಿ `ಕ್ಯಾಶ್ ಅಂಡ್ ಕ್ಯಾರಿ ಮತ್ತು ಕಾಸ್ಟ್’ ಮತದಾರರ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಹಲವು ವಿಚಾರಗಳನ್ನು ವಿಶ್ವನಾಥ್, `ಮತಸಂತೆ’ ಕೃತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಉಳುವವನೇ ಭೂಮಿಯ ಒಡೆಯ, ೨೦ ಅಂಶಗಳ ಆರ್ಥಿಕ ಕಾರ್ಯಕ್ರಮ ಸೇರಿದಂತೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯದಲ್ಲಾದ ಸುಧಾರಣೆ, ಬದಲಾವಣೆ ಯನ್ನು `ಆಪತ್‌ಸ್ಥಿತಿಯ ಆಲಾಪಗಳು’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಾಧಕ, ಛಲವಾದಿ ವಿಶ್ವನಾಥ್ ಅವರ ಪ್ರತಿಭೆ ವಿಶ್ವವ್ಯಾಪಿ ಹರಡಲಿ. ಯಾವ ಪಕ್ಷದಲ್ಲಿ ದ್ದರೂ ದೋಷ ಕಂಡರೆ ಅದನ್ನು ಎತ್ತಿ ತೋರಿಸುವ ಧೈರ್ಯ ಇವರಿಗೆ ಹೆಚ್ಚಿದೆ. ಯುವ ರಾಜಕಾರಣ ಗಳು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಡಾ.ಸಿ.ಎಸ್.ದ್ವಾರಕಾನಾಥ್ `ಆಪತ್‌ಸ್ಥಿತಿಯ ಆಲಾಪಗಳು’, ಡಾ.ಬಂಜಗೆರೆ ಜಯಪ್ರಕಾಶ್ `ಹಳ್ಳಿಹಕ್ಕಿಯ ಹಾಡು’, ಡಾ.ಸಿ.ಪಿ.ಕೃಷ್ಣಕುಮಾರ್(ಸಿಪಿಕೆ) `ಮತಸಂತೆ’, ವಸುಧೇಂದ್ರ `ದಿ ಟಾಕಿಂಗ್ ಶಾಪ್’ ಹಾಗೂ ಡಾ.ಶುಭದಾಪ್ರಸಾದ್ `ಅಥೆನ್ಸಿನ ರಾಜ್ಯಾಡಳಿತ’ ಪುಸ್ತಕ ಕುರಿತು ಮಾತನಾಡಿ, ಅಡಗೂರು ಹೆಚ್.ವಿಶ್ವನಾಥ್ ಅವರ ಸೂಕ್ಷö್ಮತೆ, ಸಾಮಾಜಿಕ ಬದ್ಧತೆ, ಸಾಹಿತ್ಯ ಪ್ರತಿಭೆಯನ್ನು ಬಣ ್ಣಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ ಹಾಗೂ ಎಂ.ಚAದ್ರಶೇಖರ್, ರಂಗಕರ್ಮಿ ರಾಜಶೇಖರ ಕದಂಬ ಮತ್ತಿತರರು ಉಪಸ್ಥಿತರಿದ್ದರು.

 

Translate »