ರಾಜಕೀಯ ಸಾಹಿತ್ಯ ಪ್ರೋತ್ಸಾಹಿಸಲು 50 ಲಕ್ಷ ಅನುದಾನ ಮೀಸಲು ಎಂಎಲ್‌ಸಿ ಅಡಗೂರು ಹೆಚ್.ವಿಶ್ವನಾಥ್
ಮೈಸೂರು

ರಾಜಕೀಯ ಸಾಹಿತ್ಯ ಪ್ರೋತ್ಸಾಹಿಸಲು 50 ಲಕ್ಷ ಅನುದಾನ ಮೀಸಲು ಎಂಎಲ್‌ಸಿ ಅಡಗೂರು ಹೆಚ್.ವಿಶ್ವನಾಥ್

May 9, 2022

ಮೈಸೂರು, ಮೇ ೮(ಎಸ್‌ಬಿಡಿ)- ರಾಜಕೀಯ ಸಾಹಿತ್ಯ ಪ್ರೋತ್ಸಾಹಿಸುವ ಉದ್ದೇಶಕ್ಕೆ ೫೦ ಲಕ್ಷ ರೂ.ಗಳನ್ನು ತಮ್ಮ ಶಾಸಕರ ಅನುದಾನದಲ್ಲಿ ಮೀಸಲಿಡುವುದಾಗಿ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಯೋಗದಲ್ಲಿ ಮಾನಸಗಂಗೋತ್ರಿ ರಾಣ ಬಹು ದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ `ಅಡಗೂರು ಹೆಚ್.ವಿಶ್ವನಾಥ್ ೭೫ರ ಸಂಭ್ರಮ’ ಸಮಾರಂಭದಲ್ಲಿ ಅವರು ಮಾತನಾಡಿ, ರಾಜಕಾರಣ, ರಾಜಕಾರಣ ಹಾಗೂ ರಾಜಕೀಯವನ್ನು ಮೈಲಿಗೆಯಂತೆ ನಕರಾತ್ಮಕವಾಗಿ ಕಾಣುವುದು ಸಾಹಿತ್ಯದ ಮೂಲಕವಾದರೂ ತೊಲಗಬೇಕೆಂದು ಆಶಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ, ಶರಣ ಸಾಹಿತ್ಯ ಸೇರಿದಂತೆ ಎಲ್ಲಾ ಪ್ರಾಕಾರವನ್ನೂ ಕಾಣಬಹುದು. ಆದರೆ ರಾಜಕೀಯ ಸಾಹಿತ್ಯ ಗೋಷ್ಠಿಯನ್ನು ಏಕೆ ಏರ್ಪಡಿಸುವುದಿಲ್ಲ?. ರಾಜಕೀಯ ಸಾಹಿತ್ಯ ಹೆಚ್ಚಾಗಬೇಕು. ಈ ಮೂಲಕವಾದರೂ ರಾಜಕೀಯವನ್ನು ಮೈಲಿಗೆಯಾಗಿ ಕಾಣುವುದು ತೊಲಗಬೇಕು. ರಾಜಕಾರಣ, ರಾಜಕಾರಣ , ರಾಜಕೀಯವನ್ನು ಸಕಾರಾತ್ಮಕವಾಗಿ ನೋಡಿದಾಗ ಮಾತ್ರ ಅದು ಜನತಂತ್ರ ವ್ಯವಸ್ಥೆಗೆ ಪೂರಕವಾಗಿರುತ್ತದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಗಂಭೀರವಾಗಿ ಪರಿಗಣ ಸಬೇಕು. ಸರ್ಕಾರ ನೀಡುವ ಹಣದಲ್ಲಿ ೫೦ ಲಕ್ಷ ರೂ.ಗಳನ್ನು ಮೀಸಲಿಟ್ಟು, ಗ್ರಾಪಂ ಸದಸ್ಯರಾದಿಯಾಗಿ ಯಾರೇ ಪುಸ್ತಕ ಬರೆದರು ನಾವೇ ಪ್ರಕಟಿಸಿ, ಜನರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ನನ್ನ ತಾತ, ತಂದೆ, ಅಜ್ಜಿ, ಅಮ್ಮ ಯಾರಿಗೂ ಅಕ್ಷರ ಗೊತ್ತಿರಲಿಲ್ಲ. ಆದರೆ ಕುಟುಂಬದಲ್ಲಿ ನಾನು ಮೊದಲಿಗೆ ಸರ್ಕಾರ ಮತ್ತು ಸಮಾಜದ ಸಹಯೋಗದಿಂದ ಅಕ್ಷರ ಸ್ವೀಕಾರ ಮಾಡಿ ಅಕ್ಷರ ಸಂಸ್ಕೃತಿಗೆ ಪಾದಾರ್ಪಣೆ ಮಾಡಿದೆ. ಪೋಷಕರಲ್ಲಿ ವಿದ್ಯೆಯಿಲ್ಲದಿದ್ದರೂ ವಿವೇಕವಿತ್ತು. ಅದರಿಂದಲೇ ನಾನು ವಕೀಲನಾಗಿ, ಶಾಸಕನಾಗಿ, ಸಚಿವನಾದೆ. ವೀರಪ್ಪಮೊಯ್ಲಿ ಅವರು ಎಲ್ಲ ರೀತಿಯಲ್ಲಿ ಬೆಳೆಯಲು ನನಗೆ ಸಹಕಾರ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಐಎಎಸ್ ಅಧಿಕಾರಿಗಳು ಕನ್ನಡ ಕಲಿತಿಲ್ಲ ಎಂದು ಕುಟುಕಿದ್ದೆ. ನಂತರ ನನಗೆ ಅರಣ್ಯ ಇಲಾಖೆಗೆ ಪ್ರಮೋಷನ್ ನೀಡಿದರು. `ವಿಶ್ವನಾಥ್‌ರನ್ನು ಕನ್ನಡದಿಂದ ಕಾಡಿಗಟ್ಟಿದರು’ ಎಂದು ಮಾಧ್ಯಮದವರು ಬರೆದರು. ಸೂಕ್ಷö್ಮಮತಿ ವೀರಪ್ಪ ಮೊಯ್ಲಿ ಅವರು ಸಮಾರಂಭದಲ್ಲಿ ನಾನು ಪ್ರಾಸಂಗಿಕವಾಗಿ ಹೇಳಿದ್ದನ್ನು ಗಂಭೀರವಾಗಿ ಪರಿಗಣ ಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಭಿವೃದ್ಧಿಗೆ ಕ್ರಮ ವಹಿಸಿದ್ದರು ಎಂದು ವಿಶ್ವನಾಥ್ ಅನೇಕ ನೆನಪುಗಳ ಮೆಲಕು ಹಾಕಿದ್ದಲ್ಲದೆ, ೭೫ರ ಸಂಭ್ರಮ ಕಾರ್ಯಕ್ರಮಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಮಹೇಶ್ ಜೋಶಿ ಸಹಮತ: ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಾಗೂ ಪಕ್ಷಗಳು ಬಹಳ ಮುಖ್ಯ. ರಾಜಕೀಯ ಎಂಬ ನೀರಿನ ಮೇಲೆ ಸಾಹಿತ್ಯ ಹಾಗೂ ಮಾಧ್ಯಮ ದೋಣ ಯಂತೆ ತೇಲುತ್ತಿರಬೇಕು. ಆದರೆ ದೋಣ ಯೊಳಗೆ ನೀರು ಸೇರಬಾರದೆಂಬ ಸೂಕ್ಷö್ಮತೆಯೊಂದಿಗೆ ಮುನ್ನಡೆಯಬೇಕಿದೆ. ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ, ವೈದ್ಯಕೀಯ, ಕ್ರೀಡೆ, ಕಾನೂನು, ಪೊಲೀಸ್, ಯಕ್ಷಗಾನ, ವಿಜ್ಞಾನ ಸಾಹಿತ್ಯಕ್ಕೂ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ `ರಾಜಕೀಯ ವಿಶ್ವವಿದ್ಯಾನಿಲಯ’ ಸ್ಥಾಪಿಸಬೇಕೆಂಬ ಆಗ್ರಹಕ್ಕೆ ನನ್ನ ಸಹಮತವೂ ಇದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಸಾಹಿತ್ಯ ಪರಿಷತ್ ಪರವಾಗಿ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

 

Translate »