ತಾಯಂದಿರಿಗೆ ಪಾದಪೂಜೆ ಮಾಡಿದ ನೂರಾರು ಮಕ್ಕಳು
ಮೈಸೂರು

ತಾಯಂದಿರಿಗೆ ಪಾದಪೂಜೆ ಮಾಡಿದ ನೂರಾರು ಮಕ್ಕಳು

May 9, 2022

ಮೈಸೂರು, ಮೇ ೮(ಎಂಟಿವೈ)-ವಿಶ್ವ ತಾಯಂದಿರ ದಿನದ ಅಂಗವಾಗಿ ಮೈಸೂರಿನ ಕೆ.ಆರ್.ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ತಮ್ಮ ಗೃಹ ಕಚೇರಿ ಬಳಿ ಭಾನುವಾರ ಆಯೋಜಿಸಿದ್ದ ಮಾತೃ ವಂದನಾ ಕಾರ್ಯ ಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ತಮ್ಮ ತಾಯಂದಿರಿಗೆ ಪಾದಪೂಜೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಮಾತೃ ವಂದನಾ ಕಾರ್ಯ ಕ್ರಮಕ್ಕೆ ಸಾಥ್ ನೀಡಿದರು. ಇದೇ ವೇಳೆ ಕೆ.ಆರ್.ವಿಧಾನ ಸಭಾ ಕ್ಷೇತ್ರದ ವಿವಿಧ ಬಡಾ ವಣೆಗಳಿಂದ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ತಾಯಂದಿರಿಗೆ ಶಾಸಕ ಎಸ್.ಎ.ರಾಮದಾಸ್ ಅವರು ಅರಿಶಿನ-ಕುಂಕುಮ, ಗಂಧಾಕ್ಷತೆ ಗಳೊಂದಿಗೆ ಸೀರೆ ವಿತರಿಸುವ ಮೂಲಕ ಮುತ್ತೆöÊದೆಯರಿಗೆ ಗೌರವ ಸಲ್ಲಿಸಿದರು.

ತಮ್ಮ ಮಕ್ಕಳೊಂದಿಗೆ ಅನ್ಯರ ಮಕ್ಕಳ ಬಗ್ಗೆಯೂ ಕಾಳಜಿ ವಹಿಸಿರುವ ಮೂವರು ಮಹಿಳಾ ಸಾಧಕಿಯರನ್ನು ಇದೇ ವೇಳೆ ಗೌರವಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹೆಚ್.ಎಸ್.ಬಿಂದ್ಯಾ, ಆಟೋಚಾಲಕಿ ಸೌಮ್ಯಾ, ಶುಶ್ರೂಷಕಿ ಲತಾಮಣ ಅವರನ್ನು ಶಾಸಕ ಎಸ್.ಎ.ರಾಮದಾಸ್ ಸನ್ಮಾನಿಸಿದರು.

ಬಳಿಕ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಇಂದು ವಿಶ್ವದ ಎಲ್ಲೆಡೆ ತಾಯಂದಿರ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇಂದು ನಾವು ಜನ್ಮ ಕೊಟ್ಟ ತಾಯಿಯೊಂದಿಗೆ ಭೂಮಿ ತಾಯಿ ಹಾಗೂ ಪರಿಸರವನ್ನು ತಾಯಿಯಂತೆ ಪೂಜಿಸುತ್ತಿದ್ದೇವೆ. ಜನ್ಮ ಕೊಟ್ಟ ತಾಯಿಯ ತ್ಯಾಗವನ್ನು ಸ್ಮರಿಸದಿದ್ದರೆ ನಾವು ಏಳಿಗೆ ಸಾಧಿಸುವುದು ಸಾಧ್ಯವಾಗುವುದಿಲ್ಲ. ಸೊಸೆಯಾಗಿ ಬಂದ ಹೆಣ್ಣು ಮಕ್ಕಳನ್ನು ಅತ್ತೆ-ಮಾವಂದಿರು ಪ್ರೀತಿಯಿಂದ ಕಾಣಬೇಕು. ಅಲ್ಲದೇ ಸೊಸೆಯನ್ನು ಮಗಳಂತೆ ಗೌರವ ದಿಂದ ಕಾಣಬೇಕಾದ ಕರ್ತವ್ಯ ಪೋಷಕರದ್ದಾಗಿದೆ. ಇತ್ತೀಚೆಗೆ ಕೌಟುಂಬಿಕ ಕಲಹದಿಂದ ಹಾಗೂ ವೈಮನಸ್ಸಿನಿಂದ ವಿವಾಹ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸ ಬೇಕಾದರೆ ಎಲ್ಲಾ ತಾಯಂದಿರು ಸೊಸೆಯನ್ನು ಮಗಳಂತೆ ನೋಡಿಕೊಳ್ಳುವುದಾಗಿ ಸಂಕಲ್ಪ ಮಾಡ ಬೇಕಾಗಿದೆ. ಆಗ ಮಾತ್ರ ಕೌಟುಂಬಿಕ ಕಲಹ ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಗೆ ನೂರು ವರ್ಷ ಸಂದಿದೆ. ಆದರೂ ಮನೆಗೆ ಬಂದಾಗ ಮೋದಿಯವರಿಗೆ ಕೈತುತ್ತನ್ನು ತಿನ್ನಿಸಿ ಪ್ರೀತಿ ಮಾಡುತ್ತಾರೆ. ತಾನು ಹಸಿವಿನಿಂದ ಇದ್ದರೂ ನನ್ನ ಮಕ್ಕಳು ಹಸಿದಿರ ಬಾರದು ಎಂದು ಎಲ್ಲಾ ತಾಯಂದಿರು ತಾನು ತಿನ್ನಬೇಕಾದ ಊಟದಲ್ಲಿ ಒಂದು ಪಾಲನ್ನು ಮಕ್ಕಳಿಗಾಗಿ ಮೀಸಲಿಡುತ್ತಾಳೆ. ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ನನ್ನ ತಾಯಿಯೂ ನನಗೆ ಈ ಹಿಂದೆ ಸಾಕಷ್ಟು ವಿಚಾರದಲ್ಲಿ ಮಾರ್ಗದರ್ಶನ ನೀಡಿದ್ದರ ಫಲವಾಗಿ ನಾನು ಇಂದು ಜನರ ಸೇವಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ನಿನ್ನ ತಂದೆ ದೇಶ ಕಾಯುವ ಸೈನಿಕನಾಗಿದ್ದರು, ಪಾಕಿಸ್ತಾನ ಮತ್ತು ಚೀನಾ ಯುದ್ಧದಲ್ಲಿ ಭಾಗವಹಿಸಿದ್ದರು. ಹಾಗಾಗಿ ನಿನ್ನ ರಕ್ತ ಮತ್ತು ಕೈಯನ್ನು ಶುದ್ಧವಾಗಿ ಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡುವಂತೆ ನನ್ನ ತಾಯಿ ನನಗೆ ಆದೇಶಿಸಿದ್ದರು. ಅಂದಿನಿAದ ನಾನು ನನ್ನ ತಾಯಿಯ ಸೂಚನೆಯನ್ನು ಪಾಲಿಸು ತ್ತಿದ್ದೇನೆ ಎಂದು ಅವರು ಹೇಳಿದರು.

ಕೆ.ಆರ್.ಕ್ಷೇತ್ರ ಮಾತ್ರವಲ್ಲದೆ ನೊಂದ ವರಿಗೆ ದನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸೂರಿಲ್ಲದವರಿಗೆ ಸೂರು ಕೊಡಿಸುವ ಜವಾಬ್ದಾರಿ ನನ್ನದಾಗಿದೆ. ಈ ಹಿನ್ನೆಲೆ ಯಲ್ಲಿ ನಮ್ಮ ಏಳಿಗೆಯಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದೆ. ನಾವು ಪರಿಶುದ್ಧ ಜೀವನ ನಡೆಸುವುದರೊಂದಿಗೆ ಉತ್ತಮ ಸಾಧನೆ ಮಾಡಿದಾಗ ಮಾತ್ರ ಅದು ನಮ್ಮ ಪೋಷಕರಿಗೆ ನಾವು ನೀಡುವ ಗೌರವ ವಾಗಲಿದೆ ಎಂದು ಸಲಹೆ ನೀಡಿದರು.

ಇಂದು ನಡೆದ ಮಾತೃವಂದನಾ ಕಾರ್ಯ ಕ್ರಮದಲ್ಲಿ ಮಕ್ಕಳು ತಮ್ಮ ತಾಯಂದಿರಿಗೆ ಪಾದಪೂಜೆ ಮಾಡುವ ಮೂಲಕ ನಮ್ಮ ಆಚಾರ-ವಿಚಾರದ ಜೊತೆಗೆ ಸಂಸ್ಕಾರವನ್ನು ಪ್ರದರ್ಶಿಸಿದ್ದಾರೆ. ಇದು ಒಳ್ಳೆಯ ಬೆಳವಣ ಗೆ. ಮುಂಬರುವ ದಿನಗಳಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸಂಸ್ಕಾರವAತರನ್ನಾಗಿ ಬೆಳೆಸಬೇಕು. ಜನ್ಮ ನೀಡಿದ ತಂದೆ-ತಾಯಿ ಯರನ್ನು ಗೌರವಿಸುವಂತಹ ಪರಂಪರೆ ಮುಂದು ವರೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ, ಪಾಲಿಕೆ ಸದಸ್ಯರಾದ ಶಾಂತಮ್ಮ ಈಶ್ವರ್, ಡಾ. ರೂಪಾ ಯೋಗೇಶ್, ಬಿಎಲ್‌ಎ ಪ್ರಸಾದ್ ಬಾಬು, ಮುಖಂಡರಾದ ನೂರ್ ಫಾತಿಮಾ, ರವಿ, ಮಧು, ಮೈಪು ರಾಜೇಶ್, ಬಂಗಾರಿ ಸುರೇಶ್, ಸಂತೋಷ್, ರೇಣುಕಾ, ಜಯಂತಿ, ಭಾಗ್ಯ, ಜಯಂತಿ, ಪ್ರದೀಪ್, ಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

Translate »