ಮೈಸೂರಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ

May 9, 2022

ಮೈಸೂರು, ಮೇ ೮(ಎಂಟಿವೈ)- ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರö್ಯ ತಂದು ಕೊಡಲು ಮಹಾತ್ಮ ಗಾಂಧೀಜಿ ನಡೆಸಿದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕ ಪಾತ್ರ ವಹಿಸಿತ್ತು ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ಜಿ¯್ಲÁಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಭಗೀರಥ ಜಯಂ ತ್ಯೋತ್ಸವ ಸಮಿತಿ ವತಿಯಿಂದ ಭಾನುವಾರ ಅಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಭÀಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತ ನಾಡಿದ ಅವರು, ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರö್ಯ ಹೋರಾಟದಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ಮಹತ್ವದ ಪಾತ್ರವಹಿಸಿತ್ತು ಎಂದರು.

ಮಹಾತ್ಮಗಾAಧಿ ಅಸಹಕಾರ ಚಳವಳಿ ನಡೆಸಿದರು. ದಂಡಿಯಲ್ಲಿ ಉಪ್ಪು ತಯಾರಿಸಿ, ಜನರಿಗೆ ಹಂಚುವ ಮೂಲಕ ಬ್ರಿಟಿಷರು ಹೇರಿದ್ದ ತೆರಿಗೆಯನ್ನು ತೆಗೆದು ಹಾಕುವಂತೆ ಹೋರಾಡಿದ್ದರು. ಈ ಹೋರಾಟಕ್ಕೆ ಉಪ್ಪಾರ ಸಮುದಾಯ ಬೆನ್ನೆಲುಬಾಗಿ ನಿಂತಿತ್ತು. ಆ ಮೂಲಕ ಸ್ವಾತಂತ್ರö್ಯ ಹೋರಾಟದಲ್ಲಿ ಉಪ್ಪಾರ ಸಮಾಜ ತನ್ನದೇ ಕೊಡುಗೆ ನೀಡಿದೆ. ಉಪ್ಪಾರ ಸಮಾಜವು ಹಿಂದುಳಿದ ಸಮು ದಾಯಗಳಲ್ಲಿ ಒಂದಾಗಿದೆ. ಸಮಾಜ ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಪ್ರಜ್ಞಾ ವಂತರಾಗುವುದಲ್ಲದೇ ಸಂಘಟಿತ ರಾಗಬೇಕು ಎಂದು ಸಲಹೆ ನೀಡಿದರು.

ಕಾಯಕ ಸಮಾಜದಡಿ ಬರುವ ಎಲ್ಲಾ ಸಮಾಜ ಗಳು ಅಭಿವೃದ್ಧಿ ಯಾಗಬೇಕಾದರೆ ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಅಲ್ಲದೇ ಸಮಾಜದ ಜನರು ಎಲ್ಲರೂ ಸಂಘ ಟಿತರಾಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ಭಗೀರಥರ ಪ್ರತಿಮೆ ಸ್ಥಾಪಿಸಿ: ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಸರ್ಕಾರವು ಜಿಲ್ಲಾ ಕೇಂದ್ರಗಳಲ್ಲಿ ಶ್ರೀ ಭಗೀರಥ ಸ್ವಾಮೀಜಿ ಪ್ರತಿಮೆಗಳನ್ನು ಸ್ಥಾಪಿಸುವುದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಭಗೀರಥರ ಫೋಟೋ ಅಳವಡಿಸಬೇಕು ಎಂದರಲ್ಲದೆ, ಈ ಕುರಿತು ತಾವು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಭೂಮಿಗೆ ನೀರನ್ನು ತಂದುಕೊಟ್ಟವರು ಮಹಾ ಪುರುಷ ಭಗೀರಥ ಸ್ವಾಮೀಜಿ ಅವರು. ಅಂಬೇಡ್ಕರ್, ಬಸವಣ್ಣ, ಗಾಂಧೀಜಿ, ಬಾಬು ಜಗಜೀವನ ರಾಂ ಅವರುಗಳು ಸಮಾಜದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರು. ಮನುಷ್ಯ ಹುಟ್ಟು-ಸಾವಿನ ನಡುವೆ ಈ ಭೂಮಿಯಲ್ಲಿ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು. ಆಗ ಸಮಾಜ ನಮ್ಮನ್ನು ನೆನೆಯುತ್ತದೆ ಎಂದರು. ಇಂದು ಸಮಾಜದಲ್ಲಿ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿದೆ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಹಾಗೂ ರಾಜಕೀಯ ಪಕ್ಷಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ನಂಬಿಕೆ-ವಿಶ್ವಾಸದಿAದ ಕೆಲಸ ಮಾಡಬೇಕಾಗುತ್ತದೆ. ಉಪ್ಪಾರ ಸಮಾಜದ ಬಂಧುಗಳು ಸ್ವಾಭಿ ಮಾನದಿಂದ ಸಂಘಟಿತರಾಗಿ ತಮ್ಮ ಸಾಮರ್ಥ್ಯವನ್ನು ಸರ್ಕಾರಕ್ಕೆ ತೋರಿಸಬೇಕು ಎಂದರು.

ಬೆಂಗಳೂರಿನ ವಾಣ ಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಡಿ.ಜಗನ್ನಾಥ ಸಾಗರ್ ಮುಖ್ಯ ಭಾಷಣ ಮಾಡಿ, ಪ್ರಯತ್ನದ ಪರಾಕಾಷ್ಠೆಯ ಭಗೀರಥ ಪ್ರಯತ್ನವೆಂದು ಜನಜನಿತವಾಗಿದೆ. ಭಗೀರಥನು ತನ್ನ ಸಾಹಸಕ್ಕೆ ಗುರುಭಕ್ತಿಗೆ ಪ್ರಯತ್ನ ಶೀಲತೆಗೆ ತಪೋನಿಷ್ಠೆಗೆ ಆದರ್ಶವಾಗಿ ಕಂಗೊಳಿಸುತ್ತಿದ್ದಾರೆ. ಅಸಾಧ್ಯವಾದ ಕೆಲಸವನ್ನು ಛಲದಿಂದ ಸಾಧಿಸಿ ಸಫಲರಾದ ಅಂತಹ ಕಾರ್ಯ ವನ್ನು ಭಗೀರಥ ಪ್ರಯತ್ನ ಎನ್ನುತ್ತಾರೆ. ನಮ್ಮ ದೇಶದ ಜೀವನದಿ ಅಷ್ಟೇ ಅಲ್ಲ ದೇವರಾದ ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಭೂಮಿಯ ಜೀವ ಧಾತು ಗಳಿಗೆ ಸನ್ಮಾರ್ಗವನ್ನು ಉಂಟು ಮಾಡಿದ ಭಗೀರಥನ ಸೂರ್ಯ ವಂಶದ ಪ್ರಸಿದ್ಧ ಚಕ್ರವರ್ತಿ ಮರಿಮೊಮ್ಮಗ ಎಂದರು.

ಶ್ರದ್ಧೆಯಿAದ ಕೆಲಸ ಮಾಡಿದರೆ ಏನನ್ನಾ ದರೂ ಸಾಧಿಸಬಹುದು. ೨೦೧೫ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ ಪ್ರತಿ ಯೊಂದು ಜಾತಿ-ಧರ್ಮದ ಸಾಮಾಜಿಕ ಆರ್ಥಿಕ ಶೈಕ್ಷಣ ಕ ಸ್ಥಿತಿ-ಗತಿಯ ಹಿಂದುಳಿ ದಿರುವಿಕೆಯನ್ನು ಗುರುತಿಸಿದರೆ ಅದರ ಆಧಾರದಲ್ಲಿ ವೈಜ್ಞಾನಿಕವಾಗಿ ಯೋಜನೆಗಳನ್ನು ರೂಪಿಸಲು ಮತ್ತು ಮೀಸಲಾತಿಯನ್ನು ಪುನರ್ ನವೀಕರಣ ಮಾಡಲು ಸಾಧ್ಯ ವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಾರ ಸಂಘದ ಜಿಲ್ಲಾ ಅಧÀ್ಯಕ್ಷ ಯೋಗೇಶ್ ಉಪ್ಪಾರ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಮಾಜದ ಮುಖಂಡ ಜಗನ್ನಾಥ್ ಸಾಗರ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ವೇದಿಕೆ ರಾಜ್ಯಾಧÀ್ಯಕ್ಷ ಕೆ.ಎಸ್.ಶಿವರಾಂ ಸೇರಿದಂತೆ ಅನೇಕರು ಇದ್ದರು.

 

Translate »