ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್‌ಪಿನ್ ಟಚ್ ಮಾಡಿದರೆ ಸರ್ಕಾರ ಉಳಿಯಲ್ಲ
ಮೈಸೂರು

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಕಿಂಗ್‌ಪಿನ್ ಟಚ್ ಮಾಡಿದರೆ ಸರ್ಕಾರ ಉಳಿಯಲ್ಲ

May 7, 2022

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಬಹು ದೊಡ್ಡ ಹಗರಣ
ಬೆಂಗಳೂರು, ಮೇ ೬- ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣದ ಮೂಲ ಕಿಂಗ್‌ಪಿನ್ ಹೆಸರು ಹೇಳಲು ಈ ಸರ್ಕಾರದಿಂದ ಸಾಧ್ಯವೇ? ಎಂದು ಪ್ರಶ್ನಿ ಸಿರುವ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಒಂದು ವೇಳೆ ಅವರ ಹೆಸರು ಹೇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಿಂಗ್‌ಪಿನ್ ಯಾರು ಎಂಬುದು ಸರ್ಕಾರ ನಡೆಸುತ್ತಿರುವ ಎಲ್ಲರಿಗೂ ಗೊತ್ತಿದೆ. ಆದರೂ ಅವರನ್ನು ಟಚ್ ಮಾಡಲು ಸಾಧ್ಯವಿಲ್ಲ. ಹಾಗೇ ನಾದರೂ ಮಾಡಿದರೆ ಸರ್ಕಾರ ಉಳಿಯಲ್ಲ ಎಂದರು. ಈ ಹಗರಣದಲ್ಲಿ ಒಬ್ಬರೇ ೮೦ ರಿಂದ ೯೦ ಮಂದಿ ಯನ್ನು ನೇಮಕ ಮಾಡಿಸಿದ್ದೂ ಇದೆ. ಅದರಲ್ಲಿ ಭವಿಷ್ಯದ ನಾಯಕರೇ ಇದ್ದಾರೆ. ಅವರು ಪ್ರಮುಖ ಚುನಾವಣೆಗಳನ್ನು ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದೂ ಇದೆ ಎಂದು ಮಾರ್ಮಿಕವಾಗಿ ನುಡಿದರು.
ಸರ್ಕಾರವು ತನಿಖೆಯನ್ನು ಪಾರದರ್ಶಕವಾಗಿ, ಕಠಿಣವಾಗಿ ನಡೆಸುತ್ತಿದೆ ಎಂದು ಹೇಳುತ್ತಿದ್ದಾರೆ, ನೋಡೋಣ. ೧೫ ದಿನದ ನಂತರ ಗುಂಡಿ ತೆಗೆದು ಮಣ್ಣು ಹಾಕಿ ಮುಚ್ಚಬಹುದು. ಆಗ ಮಾತನಾಡುತ್ತೇನೆ ಎಂದರು. ಪಿಎಸ್‌ಐ ನೇಮ ಕಾತಿ ಹಗರಣಕ್ಕಿಂತ ಸಹಾಯಕ ಪ್ರಾಧ್ಯಾಪಕರ ನೇಮ ಕಾತಿ ಹಗರಣ ಭಾರೀ ದೊಡ್ಡ ಮಟ್ಟದ್ದು. ಆ ವಿಚಾರವಾಗಿ ಸರ್ಕಾರ ನಡೆಸುವವರು ಸೈಲೆಂಟ್ ಆಗಿದ್ದಾರೆ ಯಾಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬAಧಿಸಿದAತೆ ಕೇವಲ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ೧೨೦೦ ಸಹಾಯಕ ಪ್ರಾಧ್ಯಾಪಕರ ಆಯ್ಕೆ ವಿಚಾರವದು. ಈ ಹಗರಣದಲ್ಲಿ ೫೦೦ ರಿಂದ ೬೦೦ ಜನ ಭಾಗವಹಿಸಿರುವ ಸಾಧ್ಯತೆ ಇದೆ. ಆದರೂ ಇಬ್ಬರನ್ನು ಮಾತ್ರ ಬಂಧಿಸಿ, ಪಿಎಸ್‌ಐ ಅಕ್ರಮ ಹಗರಣ ವನ್ನು ಮುಂದಿಟ್ಟುಕೊAಡು ದೊಡ್ಡ ಸ್ಕಾö್ಯಂಡಲ್ ಆಗಿರುವ ಸಹಾಯಕ ಪ್ರಾಧ್ಯಾಪಕರ ಹಗರಣವನ್ನು ಸೈಲೆಂಟ್ ಮಾಡಿಬಿಟ್ಟಿದ್ದಾರೆ ಎಂದರು. ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸಂಬAಧಿಸಿದAತೆ
ಪ್ರತಿಯೊಬ್ಬರಿAದಲೂ ೭೦ ರಿಂದ ೮೦ ಲಕ್ಷ ರೂ. ಪಡೆಯಲಾಗಿದೆ. ಸಹಾಯಕ ಪ್ರಾಧ್ಯಾಪಕರಿಗೆ ಪ್ರಾರಂಭದಲ್ಲೇ ೧.೨೫ ಲಕ್ಷ ವೇತನ ಬರುತ್ತದೆ. ಹೀಗಿರುವಾಗ ಆ ಹುದ್ದೆಗೆ ಬರಬೇಕೆಂದು ಪ್ರಯತ್ನಿಸುವವರಿಂದ ಎಷ್ಟು ಲಕ್ಷ ಪಡೆದಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ ಎಂದರು.

ಎಲ್ಲಾ ಇಲಾಖೆಗಳ ನೇಮಕಾತಿಗೆ ಸಂಬAಧಪಟ್ಟAತೆ ಅಕ್ರಮಗಳು ನಡೆಯುತ್ತಿವೆ. ಒಬ್ಬೊಬ್ಬರು ಒಂದೊAದು ಇಲಾಖೆಯನ್ನು ಹಂಚಿಕೊAಡು ಬಿಟ್ಟಿದ್ದಾರೆ. ಬಿಜೆಪಿಯಲ್ಲಿ ಇರುವ ವಿಶ್ವಾಸದ ಕೊರತೆಯಿಂದ ಅವರವರೇ ಸತ್ಯವನ್ನು ಹೊರಗೆಡವುತ್ತಾರೆ ಎಂದು ಕುಮಾರಸ್ವಾಮಿ ಭವಿಷ್ಯ ನುಡಿದರು. ಮಹಾರಾಷ್ಟçದಿಂದ ಡೆಪ್ಯುಟೇಷನ್ ಮೇಲೆ ಕಮಿಷ್ನರ್‌ವೊಬ್ಬರು ಬಂದಿದ್ದಾರೆ. ಅವರ ಕಾರ್ಯ ಚಟುವಟಿಕೆ ಏನು ಎಂಬುದು ಹೊರ ಬರುತ್ತಿಲ್ಲ. ಅವರು ಎಲ್ಲೆಲ್ಲಿ ಕುಳಿತು ಏನೇನು ಮಾಡುತ್ತಿದ್ದಾರೆ ಎಂಬುದೂ ಗೊತ್ತಾಗುತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ನುಡಿದರು.

Translate »