2,500ಕೋಟಿ ರೂ. ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂದ್ರು!
ಮೈಸೂರು

2,500ಕೋಟಿ ರೂ. ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂದ್ರು!

May 7, 2022

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಗ್ ಬಾಂಬ್

ರಾಮದುರ್ಗ (ಬೆಳಗಾವಿ), ಮೇ ೬- ನೀವು ೨,೫೦೦ ಕೋಟಿ ರೂಪಾಯಿ ಕೊಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ ಎಂದು ಆಫರ್ ಕೊಟ್ಟಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಗುರುವಾರ ರಾಮದುರ್ಗ ದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಬಂದವರು ೨,೫೦೦ ಕೋಟಿ ಕೊಡಿ ನಿಮ್ಮನ್ನು ಸಿಎಂ ಮಾಡ್ತೀವಿ ಅಂದಿದ್ರು. ಜೆ.ಪಿ.ನಡ್ಡಾರನ್ನು ಭೇಟಿ ಮಾಡಿಸ್ತೀವಿ ಅಂತಾನು ನನ್ನ ಬಳಿ ಬಂದಿದ್ದರು. ಆದರೆ ನಾನು, ೨,೫೦೦ ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಹಣ ಹೆಂಗ್ ಇಡೋದು? ಏನು ಕೋಣೆಯಲ್ಲಿ ಇಡೋದಾ ಅಥವಾ ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದ್ದೆ ಎಂದರು. ಟಿಕೆಟ್ ಕೊಡ್ತೀನಿ ಅಂತಾ ರಾಜ ಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡುತ್ತಾರೆ. ನಾನು ವಾಜಪೇಯಿಯವರ ಕೈಯಡಿ ಕೆಲಸ ಮಾಡಿದವನು. ಅಡ್ವಾಣ , ರಾಜನಾಥಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರೀತಿದ್ದರು ಎಂದು ನೆನಪಿಸಿಕೊಂಡರು.

ಬಿಜೆಪಿಯಲ್ಲಿ ರೊಕ್ಕ ಇದ್ದವರು ಮಂತ್ರಿ ಆಗ್ತಾರೆ, ರೊಕ್ಕ ತಗೊಂಡು, ರೊಕ್ಕ ಕೊಟ್ಟು ಮಂತ್ರಿ ಆಗುತ್ತಾರೆ. ನಾನು ರೊಕ್ಕ ಕೊಡುವವನಲ್ಲ, ಕೈಗಾ ರಿಕಾ ಸಚಿವ ಮುರುಗೇಶ್ ನಿರಾಣ ರೊಕ್ಕ ಕೊಟ್ಟು ಮಂತ್ರಿ ಆದ ಕ್ಯಾಂಡಿಡೇಟ್ ಎಂದು ಬಹಿರಂಗ ವಾಗಿಯೇ ಟೀಕಿಸಿದರು.

ಸಿಎಂ ಬೊಮ್ಮಾಯಿಗೆ ಎಚ್ಚರಿಕೆ: ಬಹಳಷ್ಟು ಸಾರಿ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಬೊಮ್ಮಾಯಿಯವರು ಹೇಳಿದ್ದಾರೆ. ಆದರೆ ನಾನು ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕೊಡಿ, ನನ್ನನ್ನು ಮಂತ್ರಿ ಮಾಡುವುದು ಬೇಡ ಎಂದು ಹೇಳಿದ್ದೇನೆ ಎಂದರು.

ಅರವಿAದ್ ಬೆಲ್ಲದ್ ಅವರನ್ನು ಮಂತ್ರಿ ಮಾಡಬಾರದು ಎಂದು ಜಗದೀಶ್ ಶೆಟ್ಟರ್, ಶಂಕರ್ ಪಾಟೀಲ್ ಮುನೇನಕೊಪ್ಪ ಅವರನ್ನು ಮಾಡಿದರು. ನನ್ನ ಬದಲಿಗೆ ಸಿ ಸಿ ಪಾಟೀಲರನ್ನು ಯಡಿಯೂರಪ್ಪ ಮಂತ್ರಿ ಮಾಡಿದರು, ನಂತರ ಇನ್ನೊಬ್ಬರು ಕ್ಯಾಶ್ ಕ್ಯಾಂಡಿಟೇಟ್ ಮಂತ್ರಿ ಆದರು ಎಂದು ಸರ್ಕಾರದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರವನ್ನು ಜನತೆ ಮುಂದೆ ಖುಲ್ಲಾಂಖುಲ್ಲ ಯತ್ನಾಳ್ ಬಯಲಿಗೆಳೆದರು.

ಹಾಲಕ್ಕಿ ಸಮುದಾಯದವರಿಗೆ, ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ಸೌಲಭ್ಯ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದ ಗಡುವುಗಳೆಲ್ಲವೂ ಮುಗಿದಿದೆ. ರಾಜ್ಯದಲ್ಲಿ ಹಲವು ಸಣ್ಣ ಸಮುದಾಯದವರಿಗೆ ಧ್ವನಿಯೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಿಮಗೂ ಯಡಿಯೂರಪ್ಪ ಗತಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಘೋಷಿಸಿದಿದ್ದರೆ ಯಡಿಯೂರಪ್ಪನ ಪರಿಸ್ಥಿತಿ ನಿಮಗೂ ಬರುವುದು ನಿಶ್ಚಿತ ಎಂದು ಬಸನಗೌಡ ಪಾಟೀಲ ಯತ್ನಾಳ್ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ೨೫ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಜತೆಗೆ ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿಗಳ ಮನೆಯ ಮುಂದೆ ಉಪವಾಸ ಮತ್ತು ಧರಣ ಸತ್ಯಾಗ್ರಹ ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದರು. ಅಂದು ಮೀಸಲಾತಿ ನೀಡುವ ಭರವಸೆ ನೀಡಿ, ಮಾತು ತಪ್ಪಿದ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ನೀವೂ ಮಾತು ಕೊಟ್ಟಿದ್ದೀರಿ ಎಂದು ನೆನಪಿಸಿದ ಯತ್ನಾಳ್, ನಾವು ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಮೀಸಲಾತಿ ಕೇಳುತ್ತಿಲ್ಲ. ಇತರೆ ಸಣ್ಣ ಸಮಾಜಗಳಿಗೂ ಮೀಸಲಾತಿ ಪರಿಷ್ಕರಣೆ ಮಾಡುವುದು ಸೇರಿದೆ ಎಂದು ಸ್ಪಷ್ಟಪಡಿಸಿದರು.

 

ಬರೀ ಅಡ್ಜಸ್ಟ್ಮೆಂಟ್ ರಾಜಕಾರಣ
ಗೋಕಾಕ್, ಮೇ ೬- ಸ್ವಪಕ್ಷದವರ ವಿರುದ್ದ ಹರಿಹಾಯುವುದು, ಅವರ ಬಂಡವಾಳವನ್ನು ಬಯಲು ಮಾಡುವುದರಲ್ಲಿ ಸಿದ್ಧಹಸ್ತರು ಶಾಸಕ ಬಸವಗೌಡ ಪಾಟೀಲ್ ಯತ್ನಾಳ್. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣ ಸೇರಿದಂತೆ ಹಲವರ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯದಲ್ಲಿ ಅಡ್ಜಸ್ಟ್ಮೆಂಟ್ ರಾಜಕೀಯ ನಡೆಯುತ್ತಿದೆ ಎಂದು ಗೋಕಾಕ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಬಿಜೆಪಿಯ ಮಹಾನ್ ನಾಯಕರು, ಕಾಂಗ್ರೆಸ್‌ನ ಡಿ.ಕೆ. ಶಿವ ಕುಮಾರ್, ಜೆಡಿಎಸ್‌ನ ಕುಮಾರಸ್ವಾಮಿ ಮಧ್ಯೆ ಅಡ್ಜಸ್ಟ್ಮೆಂಟ್ ರಾಜಕೀಯ. ರಾತ್ರಿ ಹೊತ್ತು ಈ ಎಲ್ಲ ನಾಯಕರು ಒಟ್ಟಿಗೆ ಮಾತನಾಡಿಕೊಳ್ಳುತ್ತಾರೆ, ಶಾಸಕರು ಹುಚ್ಚು ನಾಯಿಗಳು, ಸರ್ ಸರ್ ಅಂತ ಅವರ ಹಿಂದೆ ಹೋಗುತ್ತಾರಷ್ಟೆ ಎಂದರು.
ರಮೇಶ್ ಜಾರಕಿಹೊಳಿಯವರು ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದಾರೆ. ಅವರ ವಿರುದ್ಧ ಸೆಕ್ಸ್ ಸಿಡಿ ಹೊರಬರಲು ಷಡ್ಯಂತ್ರ ಮಾಡಲಾ ಯಿತು. ಅವರಿಗೆ ಮೋಸ ಮಾಡಿದವರಲ್ಲಿ ಒಬ್ಬ ಮಹಾನ್ ನಾಯಕರ ಮಗ ಇದ್ದಾರೆ. ಅವರಿಗೆ ಮತ್ತೆ ಸಚಿವ ಸ್ಥಾನ ಕೊಡಬೇಕು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ನಿಯಮ ಬರುತ್ತದೆ, ಅದರಿಂದ ನಮಗೆ ಖುಷಿಯಿದೆ ಎಂದರು.

 

Translate »