ಮೈಸೂರಲ್ಲಿ ನಾಳೆ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ
ಮೈಸೂರು

ಮೈಸೂರಲ್ಲಿ ನಾಳೆ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮ

May 7, 2022

ಮೈಸೂರು, ಮೇ ೬(ಆರ್‌ಕೆಬಿ)- ವಿಧಾನ ಪರಿಷತ್ ಸದಸ್ಯ ಹೆಎಚ್.ವಿಶ್ವನಾಥ್ ಅವರ ೭೫ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಂಟಿ ಆಶ್ರಯದಲ್ಲಿ ಮೇ ೮ ರಂದು ಬೆಳಗ್ಗೆ ೧೦.೩೦ಕ್ಕೆ ಮಾನಸಗಂಗೋತ್ರಿಯ ರಾಣ ಬಹದ್ದೂರ್ ಸಭಾಂಗಣದಲ್ಲಿ `ಅಡಗೂರು ಹೆಚ್. ವಿಶ್ವನಾಥ್ ೭೫ರ ಸಂಭ್ರಮ’ ಕಾರ್ಯಕ್ರಮ ಆಯೋಜಿ ಸಲಾಗಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕಾ ರಂಗದೊಡನೆ ಅವರು ಹೊಂದಿರುವ ನಿಕಟ ಸಂಬAಧದ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪತ್ರಿಕಾ ರಂಗದ ಪ್ರಮುಖರನ್ನು ಒಳಗೊಂಡAತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಒಬ್ಬ ಖಂಡಿತವಾದಿ ಪರಮ ನಿಷ್ಠುರಿ, ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಹುಟ್ಟಿ ಬೆಳೆದು ಬಾಳಿ, ವಿಧಾನಸೌಧ- ಸಂಸತ್‌ನ ಜನತಾಂತ್ರಿಕ ಕಾರಿಡಾರ್‌ಗಳಲ್ಲಿ ಅಧ್ಯಯನ, ಆಡಳಿತ ಮುಂತಾದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಅಪಾರ ಅನುಭವ ಪಡೆದಿರುವ ಸಾದಾ ಸೀದಾ ಹಳ್ಳಿ ಹಕ್ಕಿ ವಿಶ್ವನಾಥ್. ವಾಸ್ತವತೆಯ ತಮ್ಮ ಹರಿತ ಮಾತುಗಳಿಂದ ಹಲವರಿಗೆ ಇಷ್ಟವಾಗುವ, ಕೆಲವರಿಗೆ ಕಣ್ಣುರಿಯಾಗುವ ವಿಶ್ವನಾಥರ ವಿಶ್ವಕ್ಕೀಗ ೭೫ರ ಪರಿಪಕ್ವತೆ. ಇಂತಹ ಒಂದು ಅಮೃತ ಘಳಿಗೆಯಲ್ಲಿ ಹಿರಿಯ ಜೀವ, ನಡೆದ ಹಾದಿಗಳನ್ನು ಆಧರಿಸಿದ ಅವರ ಬದುಕಿನ ಪಯಣದ ಮುಖ್ಯ ಮೈಲುಗಲ್ಲಾದ ಮಾಧ್ಯಮ ಮೈತ್ರಿ. ಅಕ್ಷರಯಾನ, ಸಾಹಿತ್ಯ ಸಾಂಗತ್ಯ ಮುಂತಾದವುಗಳ ಕುರಿತು ವಿಶ್ವನಾಥರನ್ನು ಬಲ್ಲ ಮಾಧ್ಯಮ ಮಿತ್ರರು, ಸಾಹಿತ್ಯ ಸಂಗಾತಿಗಳು, ವಿದ್ವಾಂಸರು ಮತ್ತು ಅವರ ಅಭಿಮಾನಿಗಳೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. `ಮಾಧ್ಯಮ ಮೈತ್ರಿಯಾನ’ ಕುರಿತು ಹಿರಿಯ ಪತ್ರಕರ್ತರಾದ ಹೆಚ್.ಆರ್.ರಂಗನಾಥ್, ಡಿ.ಉಮಾಪತಿ, ರವೀಂದ್ರ ರೇಷ್ಮೆ, ಬಿ.ಎಂ.ಹನೀಫ್, ಹುಣಸವಾಡಿ ರಾಜನ್, ಕೆ.ಶಿವಕುಮಾರ್ ಮಾತನಾಡುವರು. ಪತ್ರಕರ್ತ ಟಿ.ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಮಧ್ಯಾಹ್ನ ೨.೩೦ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ `ವಿಶ್ವಾಕ್ಷರ ಪಯಣ’ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ನೆರವೇರಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಅಡಗೂರು ಹೆಚ್.ವಿಶ್ವನಾಥ್ ಅಂತರಾಳದ ಮಾತುಗಳನ್ನು ಆಡುವರು. ಕಸಾಪ ರಾಜ್ಯಾ ಧ್ಯಕ್ಷ ನಾಡೋಜ ಡಾ.ಮಹೇಶ್‌ಜೋಶಿ ವಿಶೇಷ ಅತಿಥಿಯಾಗಿರುವರು. ವಿಶ್ವನಾಥ್ ಅವರ ಕೃತಿಗಳಾದ `ಆಪತ್‌ಸ್ಥಿತಿಯ ಆಲಾಪಗಳು ‘ಕುರಿತು ಡಾ.ಸಿ.ಎಸ್. ದ್ವಾರಕಾನಾಥ್, `ಹಳ್ಳಿಹಕ್ಕಿಯ ಹಾಡು’ ಕುರಿತು ಡಾ.ಬಂಜಗೆರೆ ಜಯಪ್ರಕಾಶ್, `ಮತಸಂತೆ’ ಕುರಿತು ಡಾ.ಸಿ.ಪಿಕೆ, `ದಿ ಟಾಕಿಂಗ್ ಶಾಪ್’ ಕುರಿತು ವಸುಧೇಂದ್ರ, `ಅಥೆನ್ಸಿನ ರಾಜ್ಯಾಡಳಿತ’ ಕುರಿತು ಡಾ.ಶುಭದಾ ಪ್ರಸಾದ್ ಮಾತನಾಡುವರು. ಸಂಜೆ ೫.೩೦ಕ್ಕೆ ಅಡಗೂರು ಹೆಚ್.ವಿಶ್ವನಾಥ್ ಜೊತೆ- ಒಂದಿಷ್ಟು ಮಾತುಕತೆ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಸಾಪ ಮಾಜಿ ಅಧ್ಯಕ್ಷರಾದ ಎಂ. ಚಂದ್ರಶೇಖರ್, ಡಾ.ವೈ.ಡಿ.ರಾಜಣ್ಣ ಉಪಸ್ಥಿತರಿದ್ದರು.

Translate »