ದೇವರ ದರ್ಶನಕ್ಕೆ ಬಂದಿದ್ದ ಗೃಹಿಣ ಕಾಲು ಜಾರಿ ನದಿಗೆ ಬಿದ್ದು ಸಾವು
ಮೈಸೂರು

ದೇವರ ದರ್ಶನಕ್ಕೆ ಬಂದಿದ್ದ ಗೃಹಿಣ ಕಾಲು ಜಾರಿ ನದಿಗೆ ಬಿದ್ದು ಸಾವು

May 7, 2022

ಮೈಸೂರು, ಮೇ ೬(ಎಸ್‌ಬಿಡಿ)- ದೇವರ ದರ್ಶನಕ್ಕೆ ತೆರಳಿದ್ದ ಗೃಹಿಣ ಯೊಬ್ಬರು ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪದ ಶ್ರೀ ಮಹದೇವ ತಾತನವರ ಗದ್ದುಗೆ `ಶ್ರೀ ಕ್ಷೇತ್ರ ಸಂಗಮ’ದಲ್ಲಿ ಶುಕ್ರವಾರ ಸಂಭವಿಸಿದೆ.

ಚಾಮರಾಜನಗರ ಜಿಲ್ಲೆ ನಂಜದೇವನಪುರ ನಿವಾಸಿ ಗಿರೀಶ್ ಅವರ ಪತ್ನಿ ಕವಿತಾ(೩೮) ದುರಂತ ಸಾವಿಗೀಡಾದವರು. ಇವರು ಮೈಸೂರು ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ದೂರ ಗ್ರಾಮದ ಡಿ.ಬಿ.ನಾಗರಾಜು ಅವರ ಪುತ್ರಿ.

ಗಿರೀಶ್ ಹಾಗೂ ಕವಿತಾ ದಂಪತಿ ದೇವರ ದರ್ಶನಕ್ಕೆಂದು ಶುಕ್ರವಾರ `ಶ್ರೀ ಕ್ಷೇತ್ರ ಸಂಗಮ’ಕ್ಕೆ ತೆರಳಿದ್ದರು. ದೇವಾಲಯಕ್ಕೆ ಹೋಗುವ ಮುನ್ನ ರೂಢಿಯಂತೆ ಕೈ-ಕಾಲು ತೊಳೆದು, ತಲೆ ಮೇಲೆ ನೀರು ಪ್ರೋಕ್ಷಣೆ ಮಾಡಿಕೊಳ್ಳಲೆಂದು ಸಮೀಪದ ಕಪಿಲಾ ನದಿ ಬಳಿ ತೆರಳಿದ್ದರು. ಈ ವೇಳೆ ಕಾಲು ಜಾರಿ ನದಿಗೆ ಬಿದ್ದು ಕವಿತಾ ಮೃತಪಟ್ಟಿದ್ದಾರೆ. ಹಲವು ನಿಮಿಷಗಳಾದರೂ ಕವಿತಾ ಅವರು ವಾಪಸ್ಸು ಬರದಿದ್ದಾಗ ದಡದಲ್ಲಿದ್ದ ಪತಿ ಗಿರೀಶ್, ಗಾಬರಿಯಿಂದ ನದಿ ಬಳಿ ತೆರಳಿದ್ದಾರೆ. ಅಷ್ಟರಲ್ಲಿ ದುರಂತ ಸಂಭವಿಸಿದ್ದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬAಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂಜನಗೂಡು ತಾಲೂಕು ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಶನಿವಾರ ಮಧ್ಯಾಹ್ನ ನಂಜದೇವನಪುರದಲ್ಲಿ ಮೃತರ ಅಂತ್ಯಕ್ತಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

Translate »