2023ರ ಚುನಾವಣೆ ವೇಳೆಗೆ ಹಳೇ ಉಂಡುವಾಡಿಯಿAದ ಮೈಸೂರಿಗೆ ನೀರು ಪೂರೈಕೆ
ಮೈಸೂರು

2023ರ ಚುನಾವಣೆ ವೇಳೆಗೆ ಹಳೇ ಉಂಡುವಾಡಿಯಿAದ ಮೈಸೂರಿಗೆ ನೀರು ಪೂರೈಕೆ

May 7, 2022

ಮೈಸೂರು, ಮೇ ೬ (ಆರ್‌ಕೆ)- ಮಹತ್ವಾಕಾಂಕ್ಷೆಯ ಹಳೇ ಉಂಡುವಾಡಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿ ಭರದಿಂದ ನಡೆಯುತ್ತಿದ್ದು, ೨೦೨೩ರ ವಿಧಾನಸಭಾ ಸಾರ್ವತ್ರಿಕ ಚುನಾ ವಣಾ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಆರಂಭವಾದ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ೯೨ ಗ್ರಾಮಗಳಿಗೆ ಕುಡಿಯುವ ನೀರು ಪೂರೈ ಸುವ ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಚುನಾವಣೆ ವೇಳೆಗೆ ಜನರಿಗೆ ನೀರು ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ಜಾಕ್‌ವೆಲ್‌ಗಳು, ನೀರು ಶುದ್ಧೀಕರಣ ಘಟಕ (SಖಿP) ಹಾಗೂ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಶೇ.೪೫ರಷ್ಟು ಮುಗಿದಿದ್ದು, ನಿರÀಂತರವಾಗಿ, ತ್ವರಿತವಾಗಿ ಕೆಲಸ ಸಾಗಿರುವುದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ಮೈಸೂರು ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈ ಸುತ್ತೇವೆ ಎಂದು ಪ್ರತಾಪ್‌ಸಿಂಹ ನುಡಿದರು.

ಜಾಕ್‌ವೆಲ್‌ನಿಂದ ಬೀಚನಕುಪ್ಪೆ ಟ್ರೀಟ್ ಮೆಂಟ್ ಪ್ಲಾಂಟ್‌ಗೆ ತಲುಪಿದ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲು ಭೂಮಿ ಯಲ್ಲಿ ಪೈಪ್‌ಲೈನ್ ಅಳವಡಿಸುವ ಕೆಲಸವೂ ಭರದಿಂದ ಸಾಗಿದೆ. ೧೫೦ ಎಂಎಲ್‌ಡಿ (ಒiಟಟioಟಿ ಟiಣಡಿes ಠಿeಡಿ ಆಚಿಥಿ- ಒಐಆ) ನೀರಿಗೆ ಬೇಡಿಕೆ ಇದೆಯಾದರೂ ಹಳೇ ಉಂಡುವಾಡಿ ಯೋಜನೆಯಲ್ಲಿ ದಿನಕ್ಕೆ ೩೦೦ ಎಂಎಲ್‌ಡಿ ನೀರನ್ನು ಪೂರೈಸಲು ಸಾಧ್ಯವಾಗುತ್ತದೆ. ಮುಂದಿನ ೫೦ ವರ್ಷಗಳನ್ನು ಗಮನದಲ್ಲಿ ಟ್ಟುಕೊಂಡು ಶಾಶ್ವತವಾಗಿ ಮೈಸೂರು ನಗರದಲ್ಲಿ ಎಂತಹ ಪರಿಸ್ಥಿತಿ ಬಂದರೂ ನೀರಿಗೆ ತೊಂದರೆಯಾಗದAತೆ ಯೋಜನೆ ಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

೫೪೫ ಕೋಟಿ ರೂ.ಗಳ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರ ೨೬೪.೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮೊದಲ ಹಂತದಲ್ಲಿ ೩೫೦ ಕೋಟಿ ರೂ. ಗಳ ಕಾಮ ಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕುರಿತು ಗುತ್ತಿಗೆ ಪಡೆದಿರುವ ಬೆಂಗಳೂರಿನ ಶುಭಾ ಸೇಲ್ಸ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಕೇಕಡ ನಂದ ಅವರು, ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ್ದು, ಈವರೆಗೆ ಶೇ.೪೫ರಷ್ಟು ಕಾಮಗಾರಿ ಮುಗಿದಿದೆ. ಯೋಜನೆಯ ಅನುದಾನದ ಪೂರ್ಣ ಹಣವನ್ನು ಬಿಡುಗಡೆ ಮಾಡುವಂತೆ ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗ ಅದು ಅನುಮೋದನೆ ಹಂತದಲ್ಲಿದೆ ಎಂದರು.
ಪೂರ್ಣ ಪ್ರಮಾಣದ ಅನುದಾನ ಬಿಡು ಗಡೆಯಾದಲ್ಲಿ ಉಳಿದ ಕಾಮಗಾರಿಯೂ ವೇಗವಾಗಿ ನಡೆಯಲಿದೆ. ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಬೀಚನಕುಪ್ಪೆ ಯಿಂದ ಮೈಸೂರು ನಗರ ೨ನೇ ಹಂತದ ಮಾಸ್ಟರ್ ಬ್ಯಾಲೆನ್ಸಿಂಗ್ ರಿಸರ್ವರ್ (ಒಚಿsಣeಡಿ ಃಚಿಟಚಿಟಿಛಿiಟಿg ಖeseಡಿvoiಡಿ-ಒಃಖ) ಮತ್ತು ಯಾದವಗಿರಿಯ ಹೈ ಲೆವೆಲ್ ಜಲ ಸಂಗ್ರಹಣಾಗಾರÀ(ಊigh ಐeveಟ ಖeseಡಿvoiಡಿ-ಊಐಖ) ಗಳಿಗೆ ಶುದ್ಧ ನೀರು ಪಂಪ್ ಮಾಡಿ ಅಲ್ಲಿಂದ ವಿವಿಧ ವಸತಿ ಬಡಾವಣೆ ಗಳಿಗೆ ಪೂರೈಸಲಾಗುತ್ತದೆ ಎಂದು ತಿಳಿಸಿದರು.

Translate »