ಕೇಂದ್ರಕ್ಕೆ ಎಸ್‍ಸಿ, ಎಸ್‍ಟಿ ಏಳ್ಗೆ ಬೇಕಿಲ್ಲ: ಸಿದ್ದರಾಮಯ್ಯ ಟೀಕೆ
ಮೈಸೂರು

ಕೇಂದ್ರಕ್ಕೆ ಎಸ್‍ಸಿ, ಎಸ್‍ಟಿ ಏಳ್ಗೆ ಬೇಕಿಲ್ಲ: ಸಿದ್ದರಾಮಯ್ಯ ಟೀಕೆ

June 6, 2020

ಮೈಸೂರು, ಜೂ.5(ಎಂಟಿವೈ)- ಕೇಂದ್ರ ಸರ್ಕಾರ ಎಸ್‍ಇಪಿ ಮತ್ತು ಟಿಎಸ್‍ಪಿ ಅನುದಾನ ಕಡಿತ ಮಾಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಏಳಿಗೆಯನ್ನು ಕಡೆಗಣಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮೈಸೂರಿನ ತಮ್ಮ ಮನೆಯಲ್ಲಿ ಸುದ್ದಿಗಾರರ ಜತೆ ಮಾತ ನಾಡುತ್ತಾ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಅಭಿವೃದ್ಧಿಗಾಗಿ ಕಳೆದ ವರ್ಷ 30,140 ಕೋಟಿ ರೂ. ಇದ್ದ ಎಸ್‍ಇಪಿ, ಟಿಎಸ್‍ಪಿ ಅನುದಾನವನ್ನು ಈ ಬಾರಿ ಕಡಿತಗೊಳಿಸಿದ್ದಾರೆ. ಅಂದರೆ, ಈ ಸಮುದಾಯದವರು ಏಳಿಗೆ ಸಾಧಿಸಿ ಬಿಟ್ಟಿದ್ದಾರಾ? ಎಂದು ಪ್ರಶ್ನಿಸಿದÀರು.

ತಳ ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನು ದಾನ ಕಡಿತಗೊಳಿಸುವ ಮೂಲಕ ಬಿಜೆಪಿ ತನ್ನ ಅಜೆಂಡಾ ಪ್ರದರ್ಶಿಸಿದೆ. ಬಿಜೆಪಿಯಲ್ಲಿರುವ ಎಸ್ಸಿ ಸಮುದಾಯದ ಸಂಸದರು, ಸಚಿವರು ಏನು ಮಾಡುತ್ತಿದ್ದಾರೆ? ಈ ಸತ್ಯವನ್ನು ಜನರಿಗೆ ಹೇಳಿದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಾರೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿತ್ತ ಸಚಿವೆಯದೇ ಅಡ್ಡಗಾಲು: 15ನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ ಬರಬೇಕಾಗಿದ್ದ 5,490 ಕೋಟಿ ರೂ.ಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಅಡ್ಡಿಯಾಗಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬಂದಿದೆ. ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲೂ ಸಂತ್ರಸ್ತರಿಗೆ ಪರಿಹಾರಕ್ಕೆ ಸಮರ್ಪಕವಾಗಿ ಅನುದಾನ ನೀಡಲಿಲ್ಲ. ಈಗ ಕೊರೊನಾ ಸಂತ್ರಸ್ತರಿಗೂ ನೆರವಾಗಲಿಲ್ಲ. ತೆರಿಗೆ ಹಣದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲನ್ನೂ ನೀಡದೇ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೇಂದ್ರದಿಂದ ಈ ಹಿಂದೆ ಬರಬೇಕಾಗಿದ್ದ 11,600 ಕೋಟಿ ಇಂದಿಗೂ ಬಿಡುಗಡೆ ಮಾಡಿಲ್ಲ. ಮುಂದಿನ ದಿನದಲ್ಲೂ ಅನ್ಯಾಯ ಮುಂದುವರೆಯುವ ಲಕ್ಷಣ ಗೋಚರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಸಿವಿನಿಂದ ಸಾಯುತ್ತಿದ್ದರೂ ಸುಮ್ಮನಿರಬೇಕಾ?: ಕೋವಿಡ್-19 ಸಂಬಂಧÀ ಪ್ರತಿಪP್ಷÀ ರಾಜಕೀಯ ಮಾಡುತ್ತಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಜನ ಹಸಿವಿನಿಂದ ಸಾಯುತ್ತಿದ್ದರೂ ಬಾಯಿ ಮುಚ್ಚಿ ಕೊಂಡು ಇರಬೇಕಾ? ಜನರ ಸಂಕಷ್ಟಕ್ಕೆ ನೆರವಾಗು ವಂತೆ ಮುಖ್ಯಮಂತ್ರಿಗಳನ್ನು 3 ಬಾರಿ ಭೇಟಿಯಾಗಿ ಮನವಿ ಮಾಡಲಾಗಿದೆ. ಜನರ ಕಷ್ಟ ಹೇಳುವುದು ರಾಜಕೀಯವೇ? ಲಾಕ್‍ಡೌನ್ ಘೋಷಣೆ ಬಳಿಕ 60 ದಿನ ನಾವು ಎಲ್ಲಿಯೂ ಮಾತನಾಡಲಿಲ್ಲ. ಆದರೆ ಈಗ ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಮನೆ ಕೆಲಸ ಮಾಡು ವವರು, ರಸ್ತೆಬದಿ ವ್ಯಾಪಾರಿಗಳು, ಚಮ್ಮಾರರು, ಕಮ್ಮಾರ ರಿಗೆ ಸಹಾಯ ಮಾಡಿ ಎಂದು ಹೇಳುವುದು ತಪ್ಪಾ? ಜ.30ರಂದು ಕೇರಳದಲ್ಲಿ ಮೊದಲ ಪ್ರಕರಣ ಪತ್ತೆ ಯಾಯಿತು. ಆದರೆ ರಾಜ್ಯ ಸರ್ಕಾರ ಮಾ.25ಕ್ಕೆ ಲಾಕ್‍ಡೌನ್ ಘೋಷಣೆ ಮಾಡಿತು. ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಲಾಕ್‍ಡೌನ್ ಮಾಡಲಾಯಿತು. ವಿದೇಶದಿಂದ ಬಂದವರಿಂದ ರೋಗ ಹಂಚಿಸಿತು ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.

ರಾಜ್ಯದಲ್ಲಿ 1.32 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿದ್ದಾರೆ. 20ರಿಂದ 22 ಲP್ಷÀ ಕಟ್ಟಡ ಕಾರ್ಮಿಕ ರಿದ್ದಾರೆ. ರಾಜ್ಯ ಸರ್ಕಾರಕ್ಕೆ ಬದ್ಧತೆಯೂ ಇಲ್ಲ, ನಿರ್ವ ಹಣೆ ಮಾಡುವುದು ಗೊತ್ತಿಲ್ಲ ಎಂದು ಟೀಕಿಸಿದರು.

ಶಿಫಾರಸ್ಸು ಮಾಡಿದ್ದೇ ನಾನು: ಪರಿಶಿಷ್ಟ ಪಂಗಡದ ಪಟ್ಟಿಗೆ ಪರಿವಾರ ಮತ್ತು ತಳವಾರ ಪಂಗಡವನ್ನು ಸೇರಿ ಸುವಂತೆ ಈ ಹಿಂದೆ ನಾನು ಮುಖ್ಯಮಂತ್ರಿಯಾಗಿ ದ್ದಾಗ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ. 2014ರಲ್ಲಿ ಮಾಡಿದ್ದ ಶಿಫಾರಸಿಗೆ ಕೇಂದ್ರ ಸರ್ಕಾರ ನೋಟಿಫಿ ಕೇಷನ್ ಮಾಡಿದ್ದರೂ ರಾಜ್ಯ ಮಾಡಿರಲಿಲ್ಲ. ನಾನು ಪತ್ರ ಬರೆದ ಮೇಲೆ ನೋಟಿಫಿಕೇಷನ್ ಆಗಿದೆ. ಆದರೆ ನಾವೇ ಮಾಡಿದ್ದೇವೆ ಎಂದು ಬಿಜೆಪಿ ನಾಯಕರು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿ ದ್ದಾರೆ. ಇಂದು ಪರಿವಾರ ಮತ್ತು ತಳವಾರ ಪಂಗಡ ಪರಿಶಿಷ್ಟ ಪಂಗಡಕ್ಕೆ ಸೇರಲು ನಮ್ಮ ಸರ್ಕಾರದ ಪಾತ್ರ ಬಹುಮುಖ್ಯ ಎಂದು ಸಿದ್ದರಾಮಯ್ಯ ನೆನಪಿಸಿದರು.

Translate »